News Kannada
Wednesday, July 06 2022

ಕರ್ನಾಟಕ

ಹುಣಸೂರಿನ ರೈತ ಆತ್ಮಹತ್ಯೆ - 1 min read

Photo Credit :

ಹುಣಸೂರಿನ ರೈತ ಆತ್ಮಹತ್ಯೆ

ಹುಣಸೂರು: ಸಾಲದಬಾಧೆಯಿಂದ ಬೇಸತ್ತು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ತಾಲೂಕಿನ ಗುರುಪುರ ಗ್ರಾ. ಪಂ. ವ್ಯಾಪ್ತಿಯಲ್ಲಿ ನಡೆದಿದೆ.

ಅಲ್ಲಿನ  ನಿವಾಸಿ ವೆಂಕಟರಾಮಶೆಟ್ಟಿ(70) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಜಮೀನು ಹೊಂದಿದ್ದು, ಕೃಷಿಮಾಡಿಯೇ ಜೀವನ ನಿರ್ವಹಿಸುತ್ತಿದ್ದರು. ಈ ಬಾರಿ ತಮ್ಮ ಎರಡು ಎಕರೆ ಭೂಮಿಯಲ್ಲಿ ಅರಿಶಿನ ಮತ್ತು ಜೋಳದ ಬೆಳೆಗಾಗಿ ಗುರುಪುರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕಿನಿಂದ 3 ಲಕ್ಷ ರೂ. ಸಾಲ ಪಡೆದಿದ್ದರು. ಅಲ್ಲದೇ ಕೆಲವರಿಂದ ಕೈ ಸಾಲವನ್ನು ಪಡೆದಿದ್ದರು. ಸಾಲ ನೀಡಿದವರು ಆಗಾಗ್ಗೆ ಹಣ ನೀಡುವಂತೆ ಒತ್ತಾಯಿಸುತ್ತಿದ್ದರು.

ಈ ನಡುವೆ ಮಳೆ ಸಮಯಕ್ಕೆ ಸರಿಯಾಗಿ ಬಾರದೆ ಬೆಳೆ ಒಣಗಿ ಸಂಪೂರ್ಣ ನಾಶವಾಗಿತ್ತು. ಇದರಿಂದ  ಮನನೊಂದು ಅವರು ಗುರುಪುರ ಮುಖ್ಯರಸ್ತೆಯ ತಮ್ಮ ಜಮೀನಿನ ಬಳಿ ಹೋರಿಗಳನ್ನು ಕಟ್ಟಿಹಾಕುವ ಗುಡ್ಲುವಿನಲ್ಲಿ ಕ್ರಿಮಿನಾಶಕ ಸೇವಿಸಿದ್ದಾರೆ. ವಿಷಯ ತಿಳಿದ ಮನೆಯವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

See also  ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ ಮೂವರಿಗೆ ಕೊರೋನ ಪಾಸಿಟಿವ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು