ಚಾಮರಾಜನಗರ: ಜಮೀನಿನಲ್ಲಿ ಹಾಕಲಾಗಿದ್ದ ತಂತಿ ಬೇಲಿ ಕಂಬಗಳನ್ನು ಕಿಡಿಗೇಡಿಗಳು ಮುರಿದು ಹಾಕಿರುವ ಘಟನೆ ತಾಲೂಕಿನ ಕಲ್ಪುರ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಕಲ್ಪುರ ಗ್ರಾಮದಲ್ಲಿ ವಾಸವಾಗಿರುವ ಕೆ.ಜಿ. ಸೋಮಶೇಖರ್ ಅವರಿಗೆ ಸೇರಿದ ಜಮೀನಿನಲ್ಲಿ ಹಾಕಲಾಗಿದ್ದ ತಂತಿ ಬೇಲಿ ಕಂಬಗಳನ್ನು ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿಯೇ ಮುರಿದು ಹಾಕಿ ಪರಾರಿಯಾಗಿದ್ದಾರೆ.
ರಾತ್ರಿವೇಳೆ ಜಮೀನಿನ ಸುತ್ತ ಓಡಾಡಿದ ಕಿಡಿಗೇಡಿಗಳು ತಂತಿಕಂಬಕ್ಕೆ ಹೊಡೆದು ಮುರಿದು ಹಾಕಿದ್ದಾರೆ. ಸುಮಾರು 60 ಕಂಬಗಳನ್ನು ಮುರಿದು ಹಾಕಿರುವುದರಿಂದ ಸಾವಿರಾರು ರೂಪಾಯಿ ನಷ್ಟವಾಗಿದೆ.
ಈ ಸಂಬಂಧ ಜಮೀನಿನ ಮಾಲೀಕ ಸೋಮಶೇಖರ್ ಪೊಲೀಸರಿಗೆ ದೂರು ನೀಡಿದ್ದು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.