ದಾವಣಗೆರೆ: ಮುಖ್ಯಮಂತ್ರಿ ಸಿದ್ಧರಾಮಯ್ಯ ಪತ್ನಿ ಪಾರ್ವತಿ ಸಿದ್ದರಾಮಯ್ಯಗಾಗಿ ಇದೇ ಮೊದಲ ಬಾರಿಗೆ 1 ಲಕ್ಷದ 9 ಸಾವಿರ ರೂ ಮೌಲ್ಯದ ಭರ್ಜರಿ ಮೈಸೂರು ಸಿಲ್ಕ್ ಸೀರೆ ಖರೀದಿ ಮಾಡಿ ಗಮನ ಸೆಳೆದಿದ್ದಾರೆ.
ದಾವಣಗೆರೆಯ ಕೆಎಸ್‍ಐಸಿಯ ಮೈಸೂರು ಸಿಲ್ಕ್ ನೂತನ ಮಾರಾಟ ಮಳಿಗೆ ಉದ್ಘಾಟಿಸಿದ ಸಿಎಂ ಸಿದ್ಧರಾಮಯ್ಯ ಪತ್ನಿ ಪಾರ್ವತಿ ಸಿದ್ಧರಾಮಯ್ಯಗಾಗಿ 1 ಲಕ್ಷದ 9 ಸಾವಿರ ರೂ ಮೌಲ್ಯದ ಮೈಸೂರು ಸಿಲ್ಕ್‍ನ ಸೀರೆ ಖರೀದಿಸಿದ್ದಾರೆ. ಕೌಟುಂಬಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳಲು ಇಷ್ಟ ಪಡದ ಸಿಎಂ ಸಿದ್ಧರಾಮಯ್ಯ ಇದೇ ಮೊದಲ ಬಾರಿಗೆ ಸೀರೆ ಖರೀದಿಸಿ ಗಮನ ಸೆಳೆದಿದ್ದಾರೆ. ಆದರೆ ಕ್ಷಣದಲ್ಲಿ ಹಣವಿಲ್ಲ ಬೆಂಗಳೂರಿನಲ್ಲಿ ಹಣ ಪಡೆಯುವಂತೆ ಕೆಎಸ್‍ಐಸಿ ಅಧ್ಯಕ್ಷ ಬಸವರಾಜ್ ಸೂಚಿಸಿ ಸೀರೆ ಪ್ಯಾಕ್ ಮಾಡಿಸಿದ್ದಾರೆ.