ಹುಣಸೂರು: ತಾಲೂಕಿನ ನಂಜಾಪುರ ಗ್ರಾಮದಲ್ಲಿ ಭತ್ತದ ಹುಲ್ಲಿನ ಮೆದೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರರೂ ನಷ್ಟವಾಗಿರುವ ಘಟನೆ ನಡೆದಿದೆ.
ಗ್ರಾಮದ ಸಿದ್ದಶೆಟ್ಟಿ ಎಂಬುವವರ ಮನೆ ಮುಂದೆ ಸುಮಾರು ಐದು ಎಕರೆ ಭತ್ತದ ಹುಲ್ಲನ್ನು ತಂದು ರಾಶಿ ಹಾಕಿದ್ದರು. ಬೆಳಗಿನ ಜಾವ ಆಕಸ್ಮಿಕವಾಗಿ ಬೆಂಕಿ ಬಿದ್ದು ಹೊತ್ತಿ ಉರಿದಿದ್ದು, ತಕ್ಷಣ ಗ್ರಾಮಸ್ಥರು ಧಾವಿಸಿ ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿ ಅಕ್ಕ ಪಕ್ಕದಲ್ಲಿದ್ದ ಹುಲ್ಲಿನ ಮೆದೆಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬರುವಷ್ಟರಲ್ಲಾಗಲೇ ಐದು ಎಕರೆಯ ಹುಲ್ಲಿನ ಮೆದೆ ಭಸ್ಮವಾಗಿತ್ತು. ಇದರಿಂದ ರೈತ ಸಿದ್ದಶೆಟ್ಟಿ ಅವರಿಗೆ ನಷ್ಟ ಸಂಭವಿಸಿದೆ.