ಮಡಿಕೇರಿ: ಜಮ್ಮಾಬಾಣೆ ಸಮಸ್ಯೆಯನ್ನು ಬಗೆಹರಿಸದೆ ಅದನ್ನು ಜೀವಂತವಾಗಿಡಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಕುತಂತ್ರ ರೂಪಿಸುತ್ತಿದ್ದಾರೆ ಎಂದು ಹಿರಿಯ ಹೈಕೋಟರ್್ ವಕಿಲ ಎ.ಕೆ.ಸುಬ್ಬಯ್ಯ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲಿ ಮಾತನಾಡಿದ ಅವರು, ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದ ಕೆ.ಜೆ.ಜಾಜರ್್ ಜಮ್ಮಾಬಾಣೆ ಸಮಸ್ಯೆಯನ್ನು ಬಗೆಹರಿಸಲು ಸಾಕಷ್ಟು ಪ್ರಯತ್ನಗಳು ನಡೆಸಿದ್ದರಲ್ಲದೇ, ತನ್ನ ಬಳಿ ಸಮಸ್ಯೆಯ ಬಗ್ಗೆ ಚಚರ್ಿಸಿ ಸೂಕ್ತ ಸಲಹೆ ಸೂಚನೆಗಳನ್ನು ಪಡೆದಿದ್ದರು ಎಂದ ಅವರು, ಈಗಿನ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಜಮ್ಮಾಬಾಣೆ ಸಮಸ್ಯೆ ಬಗ್ಗೆ ಮಾಹಿತಿ ಇಲ್ಲದೇ ಜನರ ಹಾದಿ ತಪ್ಪಿಸಲು ವಿಶೇಷ ಜಿಲ್ಲಾಧಿಕಾರಿಗಳನ್ನು ನೇಮಿಸಬೇಕು ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದ್ದು, ಬಾಣೆ ಸಮಸ್ಯೆ ಪರಿಹರಿಸಲು ದಿನೇಶ್ ಗುಂಡೂರಾವ್ ವಿಫಲ ಪ್ರಯತ್ನಗಳನ್ನು ನಡೆಸುವುದರೊಂದಿಗೆ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕೊಡಗು ಜಿಲ್ಲೆಯವರೇ ಆಗಿರುವ ಸಚಿವರು ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆಂಬ ನಿರೀಕ್ಷೆಯನ್ನು ತಾನು ಇಟ್ಟಿದೆ. ಆದರೆ ಇದೀಗ ಸಚಿವರ ನಡವಳಿಕೆ ನಿರಾಸೆ ತಂದಿದೆ ಎಂದ ಅವರು, ಇದೇ ರೀತಿ ಸಚಿವರು ಮಂದುವರೆದರೆ ಉಸ್ತುವಾರಿ ಸಚಿವರಿಗೆ ಅನರ್ಹರು ಎಂಬುದಾಗಿ ಪರಿಗಣಿಸಬೇಕಾಗುತ್ತದೆ ಎಂದರು, ಕೊಡಗು ಜಿಲ್ಲೆಯ ಉಸ್ತುವಾರಿಯನ್ನು ಹಿರಿಯ ಸಚಿವರಿಗೆ ನೀಡುವುದು ಸೂಕ್ತ ಎಂದು ಸುಬ್ಬಯ್ಯ ಅಭಿಪ್ರಾಯಪಟ್ಟರು.
ಜಿಲ್ಲಾ ಕಾಂಗ್ರೆಸ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೊಡಗು ಕಾಂಗ್ರೆಸ್ನಲ್ಲಿ ಕೆಲವರು ಹಿಂಬಾಗಿಲಿನಿಂದ ರಾಜಕೀಯ ನಡೆಸುತ್ತಿದ್ದಾರೆ ಎಂದು ಮಾಜಿ ಜಿಲ್ಲಾಧ್ಯಕ್ಷ ಬಿ.ಟಿ.ಪ್ರದೀಪ್ ಅವರನ್ನು ಟೀಕಿಸುತ್ತಾ ಬಾಣೆ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಪ್ರದೀಪ್ ಅವರು ಜಮ್ಮಾ ಬಾಣೆಗೆ ಕಾಯ್ದೆ ಇದೆ ಎಂದು ಹೇಳಿದ್ದಾರೆ. ಅದರೇ ಆ ಕಾಯ್ದೆ ಬಗ್ಗೆ ಅವರೆ ಜನರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ನಿತ್ರಾಣವಾಗಿದ್ದು, ಕಾಂಗ್ರೆಸ್ನ ನಿತ್ರಾಣವೇ ಬಿಜೆಪಿಯ ಶಕ್ತಿಯಾಗಿ ಮಾರ್ಪಟ್ಟಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತನ್ನನ್ನು ನಿಯಂತ್ರಿಸಿಕೊಳ್ಳದಿದ್ದರೇ ಮುಂದೊಂದು ದಿನ ಕಾಂಗ್ರೆಸ್ ಸಂಪೂರ್ಣವಾಗಿ ಮುಳುಗುವುದರಲ್ಲಿ ಸಂಶಯವಿಲ್ಲ ಎಂದರು. ಜಿಲ್ಲಾ ಕಾಂಗ್ರೆಸ್ಗೆ ನೂತನ ಕಾರ್ಯಕರ್ತರನ್ನು ಆಯ್ಕೆ ಮಾಡದಿದ್ದರೇ, ಮುಂದೆ ನಡೆಯಲಿರುವ ಜಿ.ಪಂ. ಮತ್ತು ತಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವುದು ಅಸಾಧ್ಯ ಎಂದು ಸುಬ್ಬಯ್ಯ ಭವಿಷ್ಯ ನುಡಿದರು.
ಜಿಲ್ಲಾಡಳಿತದಿಂದ ವಿದ್ಯಾನಗರದಲ್ಲಿ ನಿಮರ್ಿಸಲಾಗಿದ್ದ ಮನೆಗಳ ತೆರವು ಕಾರ್ಯಚರಣೆಗೆ ಜಿಲ್ಲಾ ಕಾಂಗ್ರೆಸ್ ಮತ್ತು ರಾಜ್ಯ ಸಕರ್ಾರ ನೇರ ಕಾರಣ ಎಂದು ಆರೋಪಿಸಿದರು.