News Kannada
Thursday, July 07 2022

ಕರ್ನಾಟಕ

ಕೊಡಗಿನ ವೀರಯೋಧನಿಗೊಂದು ಸಲಾಮ್ - 1 min read

Photo Credit :

ಕೊಡಗಿನ ವೀರಯೋಧನಿಗೊಂದು ಸಲಾಮ್

ಮಡಿಕೇರಿ: ಕರ್ನಾಟಕದ ಕಾಶ್ಮೀರ ಎಂದು ಕೊಡಗು ಪ್ರಖ್ಯಾತಗೊಂಡಷ್ಟೆ ಸಂಸ್ಕೃತಿ, ಕಿತ್ತಳೆ, ಕಾಫಿ ಏಲಕ್ಕಿಗೂ ಪ್ರಸಿದ್ದಿಗೊಂಡಿದೆ. ಹಾಗೆಯೇ ಇಲ್ಲಿನ ವೀರಪರಂಪರೆ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದೆ. ಇವರೆಲ್ಲರ ಪೈಕಿ ಇವತ್ತಿಗೂ ಸೇನೆಯಲ್ಲಿ ಇಡೀ ಭಾರತದಲ್ಲಿ ತಮ್ಮ ಹೆಸರನ್ನು ಅಜರಾಮರ ಗೊಳಿಸಿದವರು ಫೀಲ್ಡ್ ಮಾರ್ಷಲ್ ಕೊಡಂದೇರ ಮಾದಪ್ಪ ಕಾರ್ಯಪ್ಪ.

ಮನೆಗೊಬ್ಬ ಸೈನಿಕನಿರುವ ಐತಿಹ್ಯವಿರುವ ಕೊಡಗಿನಲ್ಲಿ 28.1.1900ರಂದು ಉತ್ತರ ಕೊಡಗಿನ ಶನಿವಾರಸಂತೆಯಲ್ಲಿ ಪಾರುಪತ್ಯೆಗಾರರಾಗಿದ್ದ ಕೊಡಂದೇರ ಮಾದಪ್ಪ-ಕಾವೇರಮ್ಮ ದಂಪತಿಗಳ ದ್ವಿತೀಯ ಪುತ್ರನಾಗಿ ಕಾರ್ಯಪ್ಪ ಜನಿಸಿದಾಗ ಇವರು ಮುಂದೆ ಜಗತ್ಪ್ರಸಿದ್ದರಾಗುವರೆಂದು ಬಹುಶಃ ಯಾರೂ ಊಹಿಸಿರಲಿಲ್ಲ.

ಕಾರ್ಯಪ್ಪನವರ ಹಿರಿಯ ಅಣ್ಣ ಕೆ.ಎಂ. ಅಯ್ಯಣ್ಣ, ತಮ್ಮಂದಿರಾದ ಕೆ.ಎಂ ನಂಜಪ್ಪ, ಕೆ.ಎಂ ಬೋಪಯ್ಯ, ಸೋದರಿಯರಾದ ಕೆ.ಎಂ. ಪೂವಮ್ಮ ಹಾಗೂ ಕೆ.ಎಂ. ಬೊಳ್ಳಮ್ಮ. ಕುಶಾಲನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ ಮುಂದಿನ ಶಿಕ್ಷಣಕ್ಕಾಗಿ ಮಡಿಕೇರಿಯ ಸೆಂಟ್ರಲ್ ಹೈ ಸ್ಕೂಲ್ ಗೆ ಸೇರ್ಪಡೆಗೊಂಡರು. ನಂತರ ಇಂಟರ್ ಮೀಡಿಯಟ್ ಶಿಕ್ಷಣಕ್ಕಾಗಿ ಮದರಾಸ್ ಪ್ರಸಿಡೆನ್ಸಿ ಕಾಲೇಜಿಗೆ ಸೇರಿದರು.

1937ರಲ್ಲಿ ಮನಿಯಪ್ಪಂಡ ಮುತ್ತಣ್ಣ ಅವರ ಪುತ್ರಿ ಮುತ್ತಮ್ಮ ಅವರನ್ನು ವಿವಾಹವಾದರು. ಕಾರ್ಯಪ್ಪ ಮುತ್ತಮ್ಮ ದಂಪತಿಗೆ ಇಬ್ಬರು ಮಕ್ಕಳು ಜನಿಸಿದರು. ಒಬ್ಬರು ಇದೀಗ ನಿವೃತ್ತರಾಗಿರುವ ಏರ್ ಮಾರ್ಷಲ್ ಕೆ.ಸಿ. ನಂದ ಕಾರ್ಯಪ್ಪ ಹಾಗೂ ನಳಿನಿ ಕಾರ್ಯಪ್ಪ.

1918ರಲ್ಲಿ ಎರಡನೇ ಮಹಾಯುದ್ಧ ನಡೆದ ಸಂದರ್ಭ ಬ್ರಿಟೀಷ್ ಸರ್ಕಾರ ಭಾರತೀಯರನ್ನು ಕಿಂಗ್ಸ್ ಕಮಿಷನ್ ಗೆ ಆಯ್ಕೆ ನಡೆಸಲು ನಿರ್ಧರಿಸಿದಾಗ ಸೈನಿಕನಾಗುವ ಅದಮ್ಯ ನಂಬಿಕೆ ಹೊಂದಿದ್ದ ಕೆ.ಎಂ. ಕಾರ್ಯಪ್ಪ ಅವರು ತಮ್ಮ 18ನೇ ವಯಸ್ಸಿನಲ್ಲಿ ಸಿಮ್ಲಾದಲ್ಲಿ ಸಂದರ್ಶನ ಎದುರಿಸಿ ನಂತರ ತರಬೇತಿ ಪಡೆದು ಸೆಕೆಂಡ್ ಲೆಫ್ಟಿನೆಂಟ್ಆಗಿ ಹೊರಹೊಮ್ಮಿದ ಕಾರ್ಯಪ್ಪನವರು ಮುಂದೆ ತನ್ನ ಹೆಸರಿಗೆ ತಕ್ಕಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾರ್ಯಕಾರ ನೆನಿಸಿ ಫೀಲ್ಡ್ ಮಾರ್ಷಲ್ ಆಗಿರುವುದು ಇದೀಗ ಇತಿಹಾಸ. ಆ ಮೇರು ಪುರುಷ ಬದುಕಿದ್ದಾಗಲೇ ದಂತ ಕಥೆಯಾಗಿದ್ದು ಕೊಡಗಿನ ಹೆಮ್ಮೆಯೂ ಕೂಡ ಆಗಿದೆ.

ತಂದೆ ತಾಯಿಯರನ್ನು ಕೇಳದೆಯೇ ತನ್ನ ನಿರ್ಧಾರಕ್ಕೆ ಕಟ್ಟುಬಿದ್ದ ಕಾರ್ಯಪ್ಪ ತನ್ನ ತೀರ್ಮಾನಕ್ಕೆ ಜಗತ್ಪ್ರಸಿದ್ದರಾಗಿದ್ದಾರೆ. ಕ್ವೆಟ್ಟಾದಲ್ಲಿದ್ದ ಮಿಲಿಟರಿ ತರಬೇತಿ ಶಿಕ್ಷಣ ಪಡೆದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾದ ಕೆ.ಎಂ. ಕಾರ್ಯಪ್ಪ ಅವರು ಮುಂದಿನ ಸೈನ್ಯದ ಎಲ್ಲಾ ಪದವಿಗಳನ್ನೂ ಮೊದಮೊದಲು ಪಡೆದ ಪ್ರಥಮ ಭಾರತೀಯರೆನಿಸಿಕೊಂಡಿದ್ದಾರೆ, ಮಾತ್ರವಲ್ಲಿ 1947ರಲ್ಲಿ ಲೆಫ್ಟಿನೆಂಟ್ ಜನರಲ್ ಆಗಿದ್ದ ಕಾರ್ಯಪ್ಪನವರು ಈಸ್ಟನರ್ ಕಮಾಂಡ್ ನ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿದ್ದರು.

15.1.1949 ರಂದು ಜನರಲ್ ಪದವಿಗೆ ಬಾಜನರಾದ ಕೆ. ಎಂ. ಕಾರ್ಯಪ್ಪನವರು ಅಂದಿನ ಜನರಲ್ ಸರ್ ರಾಯ್ ಬುಚರ್ ಅಧಿಕಾರ ದಂಡ ಸ್ವೀಕರಿಸಿ 14.1.1953ರವರೆಗೆ ಮೂರು ರಕ್ಷಣಾ ಪಡೆಗಳ ಪ್ರಥಮ ಮಹಾದಂಡ ನಾಯಕರಾಗಿ ಕರ್ತವ್ಯ ನಿರ್ವಹಿಸಿ ಭಾರತೀಯ ಸೇನೆಯ ಪಿತಾಮಹ ಎಂದು ಖ್ಯಾತಿಗೆ ಬಾಜನರಾದರು.

See also  ಜಿಲ್ಲೆಯಲ್ಲಿ ಸಂಜೆ 6 ರಿಂದ ಎಲ್ಲ ಚಟುವಟಿಕೆಗಳು ಬಂದ : ಡಿಸಿ

ಮೂರು ದಶಕಗಳ ತಮ್ಮ ಸೈನ್ಯದ ನಿಕಟ ಸಂಬಂಧದಿಂದ ಶಿಸ್ತಿನ ಸಿಪಾಯಿ, ಅಪತಿಮ ದೇಶ ಭಕ್ತಿ ಹಾಗೂ ಬಲಿಷ್ಠ ಸೈನ್ಯ ಶಕ್ತಿಯಿಂದ ಸದೃಢ ಭಾರತವನ್ನು ಕಟ್ಟ ಬಹುದೆಂಬ ದೂರದರ್ಶಿತ್ವದ ಖಚಿತ ನಿಲುವನ್ನು ಹೊಂದಿದ್ದರು.

ಬಿರುದು, ಬಾವಲಿ ಹಾಗೂ ಪ್ರಶಸ್ತಿಗಳ ಸರಮಾಲೆಯೇ ಜನರಲ್ ಕೆ.ಎಂ. ಕಾರ್ಯಪ್ಪನವರನ್ನು ಅಲಂಕರಿಸಿತು. ಮೊದಲು ನಾವು ಭಾರತೀಯರು, ಜೈ ಹಿಂದ್ ಎಂಬ ಘೋಷಣೆಗಳನ್ನು ಚಾಲ್ತಿಗೆ ತಂದಿದ್ದ ಅವರಿಗೆ, ಭಾರತಕ್ಕೆ ಗೌರವ ತಂದ ರೀತಿಯಲ್ಲಿ ಅವರನ್ನು ಗೌರವಿಸಲಾಯಿತು. ಅವುಗಳನ್ನು ಬ್ರಿಟೀಷ್ ಸರ್ಕಾರದ ಒಬಿಇ, ಯುಎಸ್ಎ, ದಿ ಲೆಜನ್ ಆಫ್ ಮೆರಿಟ್ ನೇಪಾಳದ ಗೌರವ, ಜನರಲ್ ಪದವಿ, ಹಲವು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಗಳು, ಪೌರ ಸನ್ಮಾನಗಳು ನಡೆದವು.

ಎಲ್ಲಕ್ಕಿಂತ ಮುಕುಟ ಪ್ರಾಯವಾಗಿ 28.4.1986ರಲ್ಲಿ ಅಂದಿನ ರಾಷ್ಟ್ರಪತಿ ಗ್ಯಾನಿ ಜೈಲ್ಸಿಂಗ್ ಅವರ ಮೂಲಕ ಭಾರತ ಸರ್ಕಾರವು ಜನರಲ್ ಕಾರ್ಯಪ್ಪ ಅವರನ್ನು ಜೀವತಾವದಿಯರೆಗೆ ಫೀಲ್ಡ್ ಮಾರ್ಷಲ್ ಎಂದು ಗೌರವಿಸಿತ್ತು. ಕೊಡಗಿನ ಪಾಲಿಗೆ ಸಂದ ಮಹಾನ್ ಗೌರವ ಎನ್ನಬಹುದು. ಸಾರ್ವಜನಿಕ ಬದುಕನ್ನು ಮುಂಬೈಯಲ್ಲಿ ಚುನಾವಣೆಯ ಮೂಲಕ ಪ್ರಯತ್ನಿಸಿ ಜನರಲ್ ಕಾರ್ಯಪ್ಪ ವಿಫಲರಾದರು. ಅದು ಒಳ್ಳೆಯದೆ ಆಯಿತೆನ್ನಬಹುದು. ಕೊನೆಯ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾದ ಫೀಲ್ಡ್ ಮಾರ್ಷಲ್ ಎಲ್ಲರ ನೆಚ್ಚಿನ ಅಚ್ಚುಮೆಚ್ಚಿನ  ಚಿಮ್ಮ ಸೈನ್ಯದಲ್ಲಿದ್ದಾಗ  ಕಿಪ್ಪರ್ ಎನಿಸಿದ ಇವರು 14-5-1993 ರಂದು ಕೀರ್ತಿ ಶೇಷರಾದರು. ಆದರೆ ಅವರ ಹೆಸರು ಇನ್ನೂ ಅಜರಾಮರವಾಗಿಯೇ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು