ಕಲಬುರಗಿ: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಅಮರಖೇಡ ಗ್ರಾಮದಲ್ಲಿ ಗ್ರಾಮದ ದೇವಿಯ ಜಾತ್ರೆ ಅಂಗವಾಗಿ ಬಹಿರಂಗವಾಗಿ ಕೋಣ ಬಲಿ ನಡೆದಿದೆ.
ಪ್ರಾಣಿ ಬಲಿ ಇದ್ದರೂ ಹಲವೆಡೆ ಇನ್ನೂ ಪ್ರಾಣಿಗಳ ಮಾರಣಹೋಮ ನಡೆಯುತ್ತಿದೆ. ಕೋಣವನ್ನು ದೇವಸ್ಥಾನದ ಮುಂದೆ ಕತ್ತರಿಸಿ ರುಂಡವನ್ನು ದೇವಿಯ ಗುಡಿಯ ಎದುರು ಇಟ್ಟು ಪೂಜೆ ಮಾಡಲಾಗಿದೆ. ಕೋಣ ಬಲಿ ನೀಡುತ್ತಿದ್ದಾಗ ಪೊಲೀಸರು ಸ್ಥಳದಲ್ಲೇ ಇದ್ದರೂ ಸಹ ಕಣ್ಣಿದ್ದು ಕುರುಡರಂತೆ ವರ್ತಿಸಿದ್ದು, ಪ್ರಜ್ಞಾವಂತ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.