News Kannada
Friday, July 01 2022

ಕರ್ನಾಟಕ

ರೈತರ ನಿದ್ದೆಗೆಡಿಸಿದ ಚಿರತೆ - 1 min read

Photo Credit :

ರೈತರ ನಿದ್ದೆಗೆಡಿಸಿದ ಚಿರತೆ

ನಂಜನಗೂಡು: ನಂಜನಗೂಡು ಅರಣ್ಯದಂಚಿನ ಗ್ರಾಮಗಳಲ್ಲಿ ಇತ್ತೀಚೆಗೆ ಹುಲಿ, ಆನೆಗಳ ಕಾಟ ಯಥೇಚ್ಚವಾಗಿತ್ತಾದರೂ ಇತ್ತೀಚೆಗೆ ಎಲ್ಲವೂ ಸರಿಹೋಗಿ ಇನ್ನೇನು ನೆಮ್ಮದಿಯಾಗಿರಬಹುದೆಂದು ರೈತರು ಯೋಚಿಸುತ್ತಿರುವಾಗಲೇ ಚಿರತೆ ಹಾವಳಿ ಆರಂಭವಾಗಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ.

ನಂಜನಗೂಡು ವ್ಯಾಪ್ತಿಯ ಹೆಡಿಯಾಲ ಸುತ್ತಮುತ್ತಲ ಗ್ರಾಮಗಳಲ್ಲಿ ಈಗಾಗಲೇ ಹುಲಿ ದಾಳಿಯಿಂದ ಕೆಲವರು ಪ್ರಾಣ ಕಳೆದುಕೊಂಡಿದ್ದರೆ ಒಬ್ಬ ವ್ಯಕ್ತಿ ಅಂಗವಿಲಕನಾಗಿ ಬದುಕುತ್ತಿದ್ದಾನೆ. ನರಭಕ್ಷಕ ಹುಲಿಯನ್ನು ಕೊಂದ ಬಳಿಕ ಜನ ನೆಮ್ಮದಿಯಾಗಿದ್ದರಾದರೂ ಆಗಾಗ್ಗೆ ಲಗ್ಗೆಯಿಡುತ್ತಿದ್ದ ಆನೆಗಳು ರೈತರ ಫಸಲನ್ನು ತಿಂದು, ತುಳಿದು ನಷ್ಟಮಾಡಿದ್ದವು.

ಇದೆಲ್ಲದರ ನಡುವೆ ಸ್ವಲ್ಪಮಟ್ಟಿಗೆ ನೆಮ್ಮದಿಯಾಗಿದ್ದ ರೈತರನ್ನು ಇದೀಗ ಚಿರತೆಯೊಂದು ನಿದ್ದೆಗೆಡಿಸಿದೆ. ಹೆಡಿಯಾಲ ಬಳಿಯ ಚಂಗೌಡನಹಳ್ಳಿ ಗ್ರಾಮದಲ್ಲಿ  ಕೆಂಪರಾಮೇಗೌಡ ಎಂಬುವರಿಗೆ ಸೇರಿದ ಹಸುವಿನ ಕರುವನ್ನು ಕೊಟ್ಟಿಗೆಯಿಂದ ಹೊತ್ತೊಯ್ದು ಕೊಂದು ಹಾಕಿದೆ. ಇದರಿಂದ ಗ್ರಾಮದಲ್ಲಿ ಮತ್ತೆ ಆತಂಕ ಮನೆ ಮಾಡಿದೆ.

ಬರ ಆವರಿಸಿರುವ ಕಾರಣ ನೀರಿನ ವ್ಯವಸ್ಥೆಯಿಲ್ಲದೆ ಯಾವುದೇ ಬೆಳೆಬೆಳೆಯಲಾಗದೆ ರೈತರು ಪರಿತಪಿಸುತ್ತಿದ್ದು ಕೆಲವರಿಗೆ ಹೈನುಗಾರಿಕೆಯೇ ಜೀವನಾಧಾರವಾಗಿದೆ. ಹೀಗಿರುವಾಗ ಜಾನುವಾರುಗಳನ್ನೇ ಚಿರತೆ ತಿಂದು ಹಾಕಿದರೆ ನಾವು ಹೇಗೆ ಜೀವನ ಮಾಡುವುದು ಎಂಬುದು ರೈತರ ಅಳಲಾಗಿದೆ.

ಕೊಟ್ಟಿಗೆಯಿಂದ ಹೊತ್ತೊಯ್ದ ಚಿರತೆ ಕರುವನ್ನು ಕೊಂದು ಮರದ ಪೊದೆಯಲ್ಲಿಟ್ಟಿದ್ದು, ಕರುವನ್ನು ಹುಡುಕಿಕೊಂಡು ಹೋದ ಮಾಲೀಕ ಕೆಂಪೇಗೌಡರ ಮೇಲೆಯೇ ಎರಗುವ ಯತ್ನ ನಡೆಸಿದೆ. ಇದರಿಂದ ಹೆದರಿದ ಅವರು ನುಗು ಅರಣ್ಯ ವಲಯದ ಆರ್ಎಫ್ಒ ಸುರೇಶ್ ಬಾಬು ಮತ್ತು ಎಸಿಎಫ್ ವೆಂಕಟೇಶ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

ಆದರೆ ಅಧಿಕಾರಿಗಳು ಸಕಾಲದಲ್ಲಿ ಸ್ಥಳಕ್ಕೆ ಬಾರದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು. ಕೊನೆಗೂ ಆರ್ಎಫ್ಓ ಸುರೇಶ್ ಬಾಬು ಮತ್ತು ಅರಣ್ಯ ಪಾಲಕರಾದ ವೈರುಮುಡಿ ಎಂಬುವವರು ಸ್ಥಳಕ್ಕೆ ಆಗಮಿಸಿದರು.  ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

ಬಳಿಕ ರೈತರನ್ನು ಸಮಾಧಾನಪಡಿಸಿದ ಅರಣ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಚಿರತೆ ಹಾವಳಿ ತಡೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿ ತೆರಳಿದ್ದಾರೆ. ಆದರೆ ಚಿರತೆ ಯಾವಾಗ ಯಾರ ಕೊಟ್ಟಿಗೆಗೆ ದಾಳಿ ಮಾಡಿ ಹಸುಕರುಗಳನ್ನು ಕೊಂದು ಬಿಡುತ್ತದೆಯೋ ಎಂಬ ಭಯ ಮಾತ್ರ ರೈತರಿಂದ ದೂರವಾಗಿಲ್ಲ.

See also  ಕಾರ್ಮಿಕರ ಖಾತೆಗೆ ನೇರವಾಗಿ ಸಹಾಯಧನ ಪಾವತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು