News Kannada
Wednesday, September 28 2022

ಕರ್ನಾಟಕ

ಹನಸೋಗೆ ಗ್ರಾಮದಲ್ಲಿ ಜಾನುವಾರು ಜಾತ್ರೆ - 1 min read

Photo Credit :

 ಹನಸೋಗೆ ಗ್ರಾಮದಲ್ಲಿ ಜಾನುವಾರು ಜಾತ್ರೆ

ಕೆ.ಆರ್.ನಗರ: ತಾಲೂಕು ಆಡಳಿತದ ನಿರ್ಲಕ್ಷ ಮತ್ತು ಧಾರ್ಮಿಕ ದತ್ತಿ ಇಲಾಖೆ ಆಸಡ್ಡೆಯ ನಡುವೆಯೂ ಹನಸೋಗೆ ಗ್ರಾಮದಲ್ಲಿ ಜಾನುವಾರು ಜಾತ್ರಾ ಮಹೋತ್ಸವ ನಡೆಯುತ್ತಿದೆ.


ಗ್ರಾಮದ ಶ್ರೀನಿವಾಸ ದೇವರ ಬಹ್ಮ ರಥೋತ್ಸವದ ಹಿನ್ನಲೆಯಲ್ಲಿ ನಡೆಯುತ್ತಿರುವ ಈ ಜಾನುವಾರು  ಜಾತ್ರೆಗೆ ತಾಲೂಕಿನ ವಿವಿಧ ಗ್ರಾಮಗಳಿಂದ ಜಾನುವಾರುಗಳನ್ನು ಕರೆತಂದಿರುವ ರೈತರು ಜಾತ್ರಾ ಮಾಳದಲ್ಲಿ ತಮ್ಮ ರಾಸುಗಳಿಗೆ ಚಪ್ಪರ ಮತ್ತು ಶಾಮಿಯಾನವನ್ನು ಹಾಕಿ ಆರೈಕೆ ಮಾಡುತ್ತಿದ್ದಾರೆ.

ಜಾತ್ರೆಯಲ್ಲಿ 1.50 ಲಕ್ಷ ರೂ. ಚಿಕ್ಕಹನಸೋಗೆ ಗ್ರಾಮದ ಅಭಿಷೇಕ್ ಅವರ ರಾಸು ಅತಿಹೆಚ್ಚು ಬೆಲೆಬಾಳುವ ಜೋಡಿಯಾಗಿದ್ದು, ಕೆಡಗದ ಅಶೋಕ್, ಲೊಕೇಶ್, ಸುಂದ್ರೇಗೌಡ ಅವರ ರಾಸುಗಳು 1 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ರಾಸುಗಳಾಗಿವೆ. ಇಲ್ಲಿ 30 ಸಾವಿರದಿಂದ ಆರಂಭಿಸಿ 1.50ಲಕ್ಷದ ವರೆಗೆ ರಾಸುಗಳ ಮಾರಾಟ ನಡೆಯುತ್ತಿದೆ.

ವರ್ಷಕ್ಕೊಮ್ಮೆ ನಡೆಯಲಿರುವ ಈ ಜಾತ್ರಾ ಮಹೋತ್ಸವದಲ್ಲಿ 400ಕ್ಕೂ ಹೆಚ್ಚು ರಾಸುಗಳ ಜೋಡಿಯನ್ನು ರೈತರು ಕರೆ ತಂದಿದ್ದು ರಾಸುಗಳನ್ನು ನೋಡಲು ಅಕ್ಕ ಪಕ್ಕದ ಗ್ರಾಮಗಳ ಜನತೆ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಈ ಹಿಂದೆ ದೊಡ್ಡದಾಗಿ ನಡೆಯುತ್ತಿದ್ದ ಈ ಜಾನುವಾರು ಜಾತ್ರೆಗೆ ತಾಲೂಕು ಆಡಳಿತ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಮರ್ಪಕವಾಗಿ ಮೂಲಸೌಲಭ್ಯಗಳನ್ನು ಕಲ್ಪಿಸಲು ನಿರ್ಲಕ್ಷ್ಯ ವಹಿಸಿರುವ ಪರಿಣಾಮ ಜಾತ್ರೆ ದಿನದಿಂದ ದಿನಕ್ಕೆ ತನ್ನ ವೈಭವ ಕಳೆದುಕೊಳ್ಳುತ್ತಿದೆ. ಭಾನುವಾರ ಹನಸೋಗೆ ಗ್ರಾಮದಲ್ಲಿ ಶ್ರೀ ಶ್ರೀನಿವಾಸದೇವರ ಬ್ರಹ್ಮರಥೋತ್ಸವ ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ನಡೆಯಲಿದೆ.

See also  ರಾಯಚೂರು ಪ್ರವಾಹ ಸ್ಥಿತಿ ವೀಕ್ಷಿಸಿದ ಸಿಎಂ ಯಡಿಯೂರಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು