News Kannada
Sunday, October 02 2022

ಕರ್ನಾಟಕ

ಗೃಹಿಣಿ ಸಂಶಯಾಸ್ಪದ ಸಾವು: ಉದ್ರಿಕ್ತರಿಂದ ಬೆಂಕಿ - 1 min read

Photo Credit :

ಗೃಹಿಣಿ ಸಂಶಯಾಸ್ಪದ ಸಾವು: ಉದ್ರಿಕ್ತರಿಂದ ಬೆಂಕಿ

ಮಂಡ್ಯ: ಗೃಹಿಣಿಯೊಬ್ಬರು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೆ.ಆರ್.ಪೇಟೆ ಸಮೀಪದ ನಾಡಬೋಗನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ವರದಕ್ಷಿಣೆಗಾಗಿ ಗಂಡನ ಮನೆಯವರು ಕೊಲೆ ಮಾಡಿದ್ದಾರೆ ಎಂದು ಆಕ್ರೋಶಗೊಂಡ ಮೃತಳ ಮನೆಯವರು ಆರೋಪಿಗಳ ಮನೆ ಮೇಲೆ ದಾಳಿ ನಡೆಸಿ ಮಂಗಳವಾರ ಬೆಂಕಿ ಹಚ್ಚಿದ್ದಾರೆ.

ನಾಡಬೋಗನಹಳ್ಳಿ ಗ್ರಾಮದ ಮಂಜಪ್ಪ ಎಂಬಾತನ ಪತ್ನಿ ಪ್ರಿಯಾಂಕ(26) ಶಂಕಾಸ್ಪದವಾಗಿ ಮೃತಪಟ್ಟ ಗೃಹಿಣಿಯಾಗಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ದುಡುಕನಹಳ್ಳಿ ಗ್ರಾಮದ ತಮ್ಮಯ್ಯಪ್ಪ ಮತ್ತು ಮಣಿ ದಂಪತಿ ಪುತ್ರಿ ಪ್ರಿಯಾಂಕಳನ್ನು ಕಳೆದ 7 ವರ್ಷಗಳ ಹಿಂದೆ ನಾಡಬೋಗನಹಳ್ಳಿ ಗ್ರಾಮದ ಮಂಜಪ್ಪ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು.

ವಿವಾಹದ ಸಂದರ್ಭ ಸಾಕಷ್ಟು ವರೋಪಚಾರ ಮಾಡಿ ಅದ್ಧೂರಿಯಾಗಿ ವಿವಾಹ ಮಾಡಿಕೊಡಲಾಗಿತ್ತು. 5ವರ್ಷಗಳ ಕಾಲ ಚೆನ್ನಾಗಿ ಸಂಸಾರ ನಡೆಸಿದ್ದು ಇವರಿಗೆ ದೇವಂತ್ ಎಂಬ 3ವರ್ಷದ ಗಂಡು ಮಗು ಕೂಡ ಇದೆ. ಆದರೆ ಕಳೆದ ಒಂದೂವರೆ ವರ್ಷಗಳಿಂದ ಹೆಚ್ಚಿನ ವರದಕ್ಷಿಣೆ ತರಬೇಕು ಅಥವಾ ಡೈವೋರ್ಸ್ ಕೊಡಬೇಕು ಎಂದು ಒತ್ತಾಯ ಮಾಡುತ್ತಾ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ಗಂಡ ಮಂಜಪ್ಪ ನೀಡ ತೊಡಗಿದ್ದನು. ಇದಕ್ಕೆ  ಆತನ ತಂದೆ ದೊಡ್ಡಣ್ಣ, ಚಿಕ್ಕಪ್ಪ ನಂಜಪ್ಪ ಉರುಫ್ ಪುಟ್ಟರಾಜು, ಚಿಕ್ಕಮ್ಮ ಮಂಜುಳಾ ಮತ್ತಿತರರು ಸಾಥ್ ನೀಡುತ್ತಿದ್ದರು ಎನ್ನಲಾಗಿದೆ.

ಮೃತ ಪ್ರಿಯಾಂಕ ಸಂಬಂಧಿಕರು ಕಳೆದ 20ದಿನಗಳ ಹಿಂದೆಯಷ್ಟೆ ರಾಜೀ ಪಂಚಾಯಿತಿ ಮಾಡಿ ಮುಂದೆ ಯಾವುದೇ ಕಿರುಕುಳ ನೀಡದಂತೆ ಸಮಾಧಾನಪಡಿಸಿ ಹೋಗಿದ್ದರು. ಆದರೂ ಸಹ ಪ್ರಿಯಾಂಕ ಮೇಲೆ ನಿರಂತರ ಕಿರುಕುಳ ಮುಂದುವರೆಸಿದ್ದರು ಎನ್ನಲಾಗಿದೆ.

ಸೋಮವಾರ ರಾತ್ರಿ ಮೃತ ಪ್ರಿಯಾಂಕಳ ಗಂಡ ಮಂಜಪ್ಪ, ಮಾವ ಮಂಜುನಾಥ್ ಅಲಿಯಾಸ್ ದೊಡ್ಡಣ್ಣ, ಚಿಕ್ಕ ಮಾವ ನಂಜಪ್ಪ ಉರುಫ್ ಪುಟ್ಟರಾಜು, ಚಿಕ್ಕತ್ತೆ ಮಂಜುಳಾ ಮತ್ತಿತರರು ಸೇರಿಕೊಂಡು ಪ್ರಿಯಾಂಕಳ ಕೈಕಾಲು ಕಟ್ಟಿಹಾಕಿ ನೇಣುಬಿಗಿದು ಹತ್ಯೆ ಮಾಡಿದ್ದು ಬಳಿಕ ಪ್ರಿಯಾಂಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸುವ ನಾಟವಾಡಿದ್ದಾರೆ ಎಂದು ಆಕೆಯ ಪೋಷಕರು ದೂರಿದ್ದಾರೆ.

ಪ್ರಿಯಾಂಕ ಸಂಬಂಧಿಕರು ಮೃತಳ ಕೈಕಾಲುಗಳನ್ನು ದಾರ ಮತ್ತು ಬಟ್ಟೆಯಿಂದ ಕಟ್ಟಿರುವ ಗುರುತು ಇರುವುದರಿಂದ ಇದು ವ್ಯವಸ್ಥಿತ ಕೊಲೆಯಾಗಿದೆ ಎಂದು ಆರೋಪ ಮಾಡಿದರಲ್ಲದೆ, ಆಕ್ರೋಶಗೊಂಡು ಆರೋಪಿಗಳಿಗೆ ಸೇರಿದ ಮನೆಗಳ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದಾರೆ. ಆರೋಪಿಗಳಾದ ಮೃತಳ ಗಂಡ ಮಂಜಪ್ಪ, ಚಿಕ್ಕಮಾವ ನಂಜಪ್ಪ, ಚಿಕ್ಕತ್ತೆ ಮಂಜುಳಾ  ಮೇಲೂ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.  ದಾಳಿಯ ಸುಳಿವು ಅರಿತು ಮಾವ ದೊಡ್ಡಣ್ಣ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.

ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲು ಅಡ್ಡಿಪಡಿಸಿದ ಸಂಬಂಧಿಕರ ಗುಂಪೊಂದು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದರಿಂದ ಪೊಲೀಸರು ಲಾಠಿ ಪ್ರಹಾರ ಮಾಡಿ ಉದ್ರಿಕ್ತ ಗುಂಪನ್ನು ಚದುರಿಸಿದರು. ಕಲ್ಲು ತೂರಾಟದಿಂದ ಏಳೆಂಟು ಮಂದಿ ಪೊಲೀಸರಿಗೆ ಹಾಗೂ ಇಬ್ಬರು ಪತ್ರಕರ್ತರು ಹಾಗೂ ಕೆಲ ಸಂಬಂಧಿಕರಿಗೂ ಗಾಯಗಳಾಗಿವೆ.

ಕಲ್ಲುತೂರಾಟ ಮತ್ತು ಲಾಠಿ ಪ್ರಹಾರದ ನಡುವೆ ಪ್ರಿಯಾ ಶವವನ್ನು ವೈದ್ಯಕೀಯ ಪರೀಕ್ಷೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸಲಾಯಿತು. ಆದರೂ ಗ್ರಾಮದಲ್ಲಿ ಉದ್ರಿಕ್ತ ಪರಿಸ್ಥಿತಿ ಮುಂದುವರೆದಿದೆ.  ಸ್ಥಳಕ್ಕೆ ಮೈಸೂರು ವಲಯ ಐಜಿಪಿ ಬಿಜಯ್ ಕುಮಾರ್ ಸಿಂಗ್, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ಕುಮಾರ್ ರೆಡ್ಡಿ, ಪಾಂಡವಪುರ ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ನಾಗಮಂಗಲ ಡಿವೈಎಸ್ಪಿ ಜನಾರ್ಧನ್, ಸಿಪಿಐ ಡಿ.ಯೋಗೇಶ್, ಗ್ರಾಮಾಂತರ ಠಾಣೆಯ ಪಿಎಸ್ಐ ಪುನೀತ್, ಪಟ್ಟಣ ಠಾಣೆಯ ವಿನಯ್ ಮತ್ತಿತರರ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು ಗ್ರಾಮದಲ್ಲಿನ ಉದ್ರಿಕ್ತ ಪರಿಸ್ಥಿತಿ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ. ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

See also  ಶಿರಸಿ ಮೂಲದ ಕೊರೊನಾ ಸೋಂಕಿತ ಸಾವು: ಅವೈಜ್ಞಾನಿಕವಾರ ಅಂತ್ಯ ಸಂಸ್ಕಾರ ಜನರ ವಿರೋಧ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು