News Kannada
Thursday, September 29 2022

ಕರ್ನಾಟಕ

ಚಾಮರಾಜನಗರದ ಹೊಂಗನೂರು ಉದ್ವಿಗ್ನ - 1 min read

Photo Credit :

ಚಾಮರಾಜನಗರದ ಹೊಂಗನೂರು ಉದ್ವಿಗ್ನ

ಚಾಮರಾಜನಗರ:  ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬೃಹತ್ ಫ್ಲೆಕ್ಸ್ ಗೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದರಿಂದ ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಎರಡು ಕೋಮಿನ ನಡುವೆ ಕಲ್ಲು ತೂರಾಟ ನಡೆದು ಹಲವರು ಗಾಯಗೊಂಡಿದ್ದರೆ, ಸುಮಾರು 20 ಅಂಗಡಿಗಳು ಬೆಂಕಿಗಾಹುತಿಯಾಗಿವೆ.

ಹೊಂಗನೂರು ಗ್ರಾಮದಲ್ಲಿ ಬಸ್ ನಿಲ್ದಾಣದಲ್ಲಿ ಹಾಕಲಾಗಿದ್ದ ಬೃಹತ್ ಅಂಬೇಡ್ಕರ್ ಪ್ಲೆಕ್ಸ್ ಗೆ ಗ್ರಾಮದ ಒಂದು ಕೋಮಿನ ಕೆಲವು ಕಿಡಿಗೇಡಿಗಳು ಚಪ್ಪಲಿ ಹಾರವನ್ನು ಅಂಬೇಡ್ಕರ್ ಕಾಲಿನ ಬಳಿ ಹಾರದಂತೆ ಹಾಕಿದ್ದು ಆಕ್ರೋಶಕ್ಕೆ ಕಾರಣವಾಗಿದ್ದು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕೋಮುಗಳ ನಡುವೆ ಘರ್ಷಣೆ ಆರಂಭವಾಗಿದೆ.

ಕೆಲವರು ಕಲ್ಲು ತೂರಾಟ ನಡೆಸಿದರೆ ಮತ್ತೆ ಕೆಲವರು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದರಿಂದ ಸುಮಾರು ಇಪ್ಪತ್ತು ಅಂಗಡಿಗಳು ಬೆಂಕಿಗಾಹುತಿಯಾಗಿದೆ. ಕಲ್ಲು ತೂರಾಟದಿಂದ ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಾಗಲವಾಡಿ ಮತ್ತು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಎರಡು ಗುಂಪುಗಳನ್ನು ಪೊಲೀಸರು ಅಶ್ರುವಾಯು ಸಿಡಿಸಿ ಚದುರಿಸಿದ್ದು, ಸದ್ಯ ಪರಿಸ್ಥಿತಿ ತಹಬದಿಗೆ ಬಂದಿದೆ. ಈಗಾಗಲೇ ಗ್ರಾಮದಲ್ಲಿ 144ಸೆಕ್ಷನ್ ಜಾರಿ ಮಾಡಿದ್ದು, ಪ್ರತಿ ಬೀದಿಯಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೆ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.

ಈ ನಡುವೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಗ್ರಾಮದ ಕೆಲವರು ಅಂಬೇಡ್ಕರ್ ಪ್ಲೆಕ್ಸ್ ಪೂಜೆ ಸಲ್ಲಿಸಿ ಬಿಗಿ ಭದ್ರೆತೆಯಲ್ಲಿ ಪ್ಲೆಕ್ಸ್ ಅನ್ನು ಗ್ರಾಮ ಪಂಚಾಯ್ತಿ ಆವರಣದಲ್ಲಿರಿಸಲಾಗಿದೆ. ಇಷ್ಟೇ ಅಲ್ಲದೆ ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಪಟ್ಟಂತೆ ವರದಿ ಮಾಡಲು ಹೋದ ಮಾಧ್ಯಮದವರ ಮೇಲೂ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಬಿ.ರಾಮು, ಉಪ ವಿಭಾಗಾಧಿಕಾರಿ ಕವಿತ, ತಹಸೀಲ್ದಾರ್ ಮಹದೇವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಗ್ರಾಮದಲ್ಲಿ ಶಾಂತಿಯನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ.

See also  ಕಾವೇರಿ ನಿಸರ್ಗಧಾಮ 10 ದಿನ ಬಂದ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು