News Kannada
Monday, September 26 2022

ಕರ್ನಾಟಕ

ಕೊಡಗಿನ ಸುಂಟಿಕೊಪ್ಪದಲ್ಲಿ ಭಾರೀ ಮಳೆ - 1 min read

Photo Credit :

ಕೊಡಗಿನ ಸುಂಟಿಕೊಪ್ಪದಲ್ಲಿ ಭಾರೀ ಮಳೆ

ಮಡಿಕೇರಿ: ಕೊಡಗಿನ ಕೆಲವೆಡೆ ಮಳೆ ಸುರಿದಿದ್ದು, ಬಿಸಿಲ ಬೇಗೆಯಿಂದ ಬಸವಳಿದಿದ್ದವರನ್ನು ತಂಪು ಮಾಡಿದ್ದು, ಮಳೆಗಾಳಿಗೆ ಮರಗಳು ಧರೆಗುರುಳಿದ್ದು ಇದರಿಂದ ವಿದ್ಯುತ್ ಕಂಬಗಳು ನೆಲಕಚ್ಚಿದ್ದು ಜನ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ.

ಮಂಗಳವಾರ ಮಡಿಕೇರಿ ಸಮೀಪದ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಸುರಿದ ಮಳೆ ಕೃಷಿಕರು ಸೇರಿದಂತೆ ಜನರಿಗೆ ಸಂತಸವನ್ನು ನೀಡಿದೆಯಾದರೂ ಮಳೆಯೊಂದಿಗೆ ಗಾಳಿ ಬೀಸಿದ್ದರಿಂದ ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಒಂದರ ಮೇಲೊಂದರಂತೆ ಅಲ್ಲಲ್ಲಿ ನೆಲಕಚ್ಚಿವೆ.

ಕೆಲವೆಡೆ ಮರಗಳು ಹಾಗೂ ವಿದ್ಯುತ್ ತಂತಿಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಇದರಿಂದ ಚೆಸ್ಕಾಂಗೆ ಲಕ್ಷಾಂತರ ರೂ.ಗಳು ನಷ್ಟವಾಗಿದೆ. ಮಿಂಚು, ಗುಡುಗು, ಸಿಡಿಲಿನೊಂದಿಗೆ ಆರ್ಭಟಿಸಿದ ಮಳೆ ರಭಸವಾಗಿ ಸುರಿದಿದ್ದು, ನೀರು ಚರಂಡಿಗಳಲ್ಲಿ ಉಕ್ಕಿ ಹರಿಯಿತು. ಮಳೆಯಿಲ್ಲದೆ ಗಿಡಮರಗಳು ಒಣಗುವ ಸ್ಥಿತಿಗೆ ತಲುಪಿತ್ತು. ಮಳೆ ಬಿದ್ದಿದ್ದರಿಂದ ಗಿಡಮರಗಳಿಗೆ ಜೀವ ಬಂದಂತಾಗಿದೆ.

ಸಾಮಾನ್ಯವಾಗಿ ಈ ರೀತಿಯ ಮಳೆ ಮಾರ್ಚ್ ನಲ್ಲೇ ಸುರಿಯುತ್ತಿತ್ತಾದರೂ ಈ ಬಾರಿ ಮೇ ತನಕ ಕಾಯುವಂತಾಗಿದೆ. ಮಳೆಗೆ ಬೇರು ಕ್ಷೀಣಗೊಂಡಿದ್ದ ಹಲವು ಮರಗಳು ನೆಲಕ್ಕೆ ಬಿದ್ದಿವೆ. ಸುಂಟಿಕೊಪ್ಪ ಸಮೀಪದ ಕೆಚ್ಚೆಟ್ಟಿ ತೋಟದ ಬಳಿಯಲ್ಲಿ ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದಿದ್ದರಿಂದ 5 ವಿದ್ಯುತ್ ಕಂಬ ಸೇರಿದಂತೆ ಹಾಗೂ ತಂತಿಗಳು ತುಂಡಾಗಿವೆ. ಆದರೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ಸುಂಟಿಕೊಪ್ಪ-ಮಾದಾಪುರ ಸಂಪರ್ಕ ರಸ್ತೆಯಲ್ಲಿ ಮರಬಿದ್ದಿದ್ದರಿಂದ ಅದನ್ನು ತೆರವುಗೊಳಿಸಲು ಹರ ಸಾಹಸ ಪಡಬೇಕಾಯಿತು. ಇದರಿಂದ ಎರಡು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಚೆಸ್ಕಾಂ ಇಲಾಖೆಯ   ಕಿರಿಯ ಅಂಭಿಯಂತರ ಬಸವರಾಜ್ ಹಾಗೂ ಸಿಬ್ಬಂದಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳ ಘಟನಾ ಸ್ಥಳಕ್ಕೆ ತೆರಳಿ ವಿದ್ಯುತ್ ಕಂಬ ಹಾಗೂ  ತಂತಿಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಮೊದಲ ಮಳೆ ಅಬ್ಬರಿಸಿದ್ದರಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್ ಕಂಬ ಹಾಗೂ ತಂತಿಗಳು ನಾಶವಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿರುವುದಾಗಿ ಈ ವಿಭಾಗದ ಚೆಸ್ಕಾಂ ಕಿರಿಯ ಅಂಭಿಯಂತರ ಬಸವರಾಜ್ ಹೇಳಿದ್ದಾರೆ.

See also  ಶಾಸಕ ಪುಟ್ಟ ರಂಗ ಶೆಟ್ಟರು ಜನರ ನೆರವಿಗೆ ಧಾವಿಸಲಿ ಎಂದ ಬಿಜೆಪಿ ಮುಖಂಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು