News Kannada
Monday, September 26 2022

ಕರ್ನಾಟಕ

ಹಾಸನದಲ್ಲಿ ಪೆಂಡಾಲ್ ಗಣಪನ ಭವ್ಯ ಮೆರವಣಿಗೆ - 1 min read

Photo Credit :

ಹಾಸನದಲ್ಲಿ ಪೆಂಡಾಲ್ ಗಣಪನ ಭವ್ಯ ಮೆರವಣಿಗೆ

ಹಾಸನ: ನಗರದ ಹಳೆ ಬಸ್ ನಿಲ್ದಾಣ ಬಳಿ ಇರುವ 62ನೇ ವರ್ಷದ ಪೆಂಡಲ್ ಗಣಪತಿ ಮಹೋತ್ಸವದ ಪ್ರಯುಕ್ತ ನಡೆದ ಭವ್ಯ ಮೆರವಣಿಗೆ ಜನಮನಸೆಳೆಯಿತು.

ಹೂವಿನ ಭವ್ಯ ಮಂಟಪದಲ್ಲಿ ಶ್ರೀ ಗಣಪತಿ ಹಾಗೂ ಗೌರಮ್ಮ ದೇವರನ್ನು ಪ್ರತಿಷ್ಠಾಪಿಸಿ ನಗರದಲ್ಲಿ ಮೆರವಣಿಗೆ ನಡೆಸಲಾಯಿತು.  ಬೆಳಿಗ್ಗೆ 10.45ಕ್ಕೆ ನಡೆದ ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಎಸ್. ಪ್ರಕಾಶ್, ನಗರಸಭೆ ಅಧ್ಯಕ್ಷರಾದ ಹೆಚ್.ಎಸ್. ಅನೀಲ್ ಕುಮಾರ್, ಆಯುಕ್ತರಾದ ನಾಗಭೂಷಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಗಿರೀಶ್, ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷರಾದ ಹೆಚ್. ನಾಗರಾಜು, ಉಪಾಧ್ಯಕ್ಷರಾದ ಹೆಚ್.ಆರ್. ಕಸ್ತೂರಿ ರಂಗಾಚಾರ್, ಕಾರ್ಯದರ್ಶಿ ಚನ್ನವೀರಪ್ಪ, ಸಹಕಾರ್ಯದರ್ಶಿ ವೈ.ಎಸ್. ಮುರುಗೇಂದ್ರ, ಖಜಾಂಚಿ ಎಂ.ಎಸ್. ಶ್ರೀಕಂಠಯ್ಯ ಇತರರು ದೇವರ ಉತ್ಸವದ ಮಂಟಪಕ್ಕೆ ಪುಷ್ಪ ಅರ್ಪಿಸಿ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು.

ಬಳಿಕ ಮೆರವಣಿಗೆ ಸಕಲ ಭಕ್ತಿ ಮತ್ತು ಪೂಜಾಕಾರ್ಯಗಳೊಂದಿಗೆ ರಾಜಬೀದಿಯಲ್ಲಿ ಸಾಗಿತು.  ಹೂವಿನ ರಥದಲ್ಲಿ ಸಾಗಿದ ಗಣಪತಿ ಹಾಗೂ ಗೌರಮ್ಮ ದೇವರಿಗೆ ಜನ ಪೂಜೆ ಅರ್ಪಿಸಿದರೆ, ಸ್ಯಾಕ್ಷೊಫೋನ್, ವಿಶೇಷ ನಾದಸ್ವರ, ನಂದಿಧ್ವಜ, ಕೀಲುಕುದುರೆ, ಕರಗ ಭಾವಚಿತ್ರ, ನವೀಲು, ಯಕ್ಷಗಾನ, ಜೋಕರ್, ಗೊಂಬೆ, ಬ್ಯಾಂಡ್ ಸೆಟ್, ಹುಲಿವೇಷ, ಗಾರುಡಿ ಗೊಂಬೆ, ಪೂಜಾ ಕುಣಿತ, ಕಂಸಾಳೆ, ಗೊರವ ನೃತ್ಯ, ಡೊಳ್ಳು ಕುಣಿತ, ವೀರಗಾಸೆ, 12 ಹುಲಿ ವೇಷ, ದೊಣ್ಣೆ ವರಸೆ, ಧ್ವಜ ಕುಣಿತ, ರೋಡ್ ಆರ್ಕೆಸ್ಟ್ರಾ, ನಾಸಿಕ್ ಡೋಲ್, ಕುದುರೆಗಳು, ಸಾರೋಟ್, ಕಂಗೀಲು ಕುಣಿತ, ಬಿಟ್ಟಿ ಮೇಳ, ಜೊತೆ ಹೋರಿ, ಕೋಲಾಟ, ಡಾ. ರಾಜಕುಮಾರ್ ಅವರ ಶ್ರೀ ಕೃಷ್ಣದೇವರಾಯ ಹಾಗೂ ನೃಪತುಂಗ ಪಾತ್ರ, ಡೋಲು ಕುಣಿತ ಮೊದಲಾದ ಕಲಾ ಪ್ರಕಾರಗಳು ಮೆರುಗು ನೀಡಿದವು. ಸಿಡಿಮದ್ದಿನ ಪ್ರದರ್ಶನ ಗಮನಸೆಳೆಯಿತು. ಮೆರವಣಿಗೆ ಸಂದರ್ಭದಲ್ಲಿ 10001 ಲಾಡುಗಳನ್ನು ಮತ್ತು ಪುಳಿಯೋಗರೆಯನ್ನು ಭಕ್ತಾಧಿಗಳಿಗೆ ವಿತರಣೆ ಮಾಡಲಾಯಿತು.

See also  ಯಡಿಯೂರಪ್ಪ ಪದಚ್ಯುತಗೊಳಿಸಿದರೆ ಲಿಂಗಾಯಿತ ಸಮುದಾಯದ ಅವಕೃಪೆ : ಎಂ. ಬಿ. ಪಾಟೀಲ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು