News Kannada
Saturday, September 24 2022

ಕರ್ನಾಟಕ

ಕಾರು ಬೈಕ್ ಡಿಕ್ಕಿ: ಸವಾರ ಸಾವು - 1 min read

Photo Credit :

ಕಾರು ಬೈಕ್ ಡಿಕ್ಕಿ: ಸವಾರ ಸಾವು

ತಾಂಡವಪುರ: ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿ ಮತ್ತೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ನಂಜನಗೂಡು ಬಳಿಯ ತಾಂಡವಪುರದಲ್ಲಿ ನಡೆದಿದೆ.

ಘಟನೆಯಲ್ಲಿ ಬೈಕಲ್ಲಿ ತೆರಳುತ್ತಿದ್ದ ತಾಂಡವಪುರ ಗ್ರಾಮದ ನಿವಾಸಿ ಹಾಗೂ ಗ್ರಾ.ಪಂ ನೌಕರ ಬಸವೇಗೌಡರ ಮಗ ಬಸವರಾಜು(29) ಮೃತಪಟ್ಟರೆ, ಮತ್ತೊಬ್ಬ ಸೀರೇಗೌಡರ ಪುತ್ರ ರವಿ(26) ಎಂಬಾತ ಗಂಭೀರ ಗಾಯಗೊಂಡಿದ್ದಾನೆ.

ಶನಿವಾರ ಬೆಳಿಗ್ಗೆ ಬಸವರಾಜು ಮತ್ತು ರವಿ ಬೆಳಿಗ್ಗೆ ಕಡಕೊಳ ಕಡೆಯಿಂದ ತಮ್ಮ ಹೀರೋ ಹೋಂಡಾ ಫ್ಯಾಷನ್(ಕೆ.ಎ.09, ಹೆಚ್.ಬಿ.9644) ಬೈಕಿನಲ್ಲಿ ತಾಂಡವಪುರಕ್ಕೆ ಹೋಗುತ್ತಿದ್ದರು. ಅಲ್ಲಿನ ಪೆಟ್ರೋಲ್ ಬಂಕ್ ಬಳಿ ಮೈಸೂರು ಕಡೆಯಿಂದ ವೇಗವಾಗಿ ಬಂದ ರೆನೌಟ್ ಡಸ್ಟರ್ ಕಾರು(ಕೆಎ 19 ಎಂಇ 6846) ಬೈಕ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ  ಬಸವರಾಜು ತಲೆಗೆ ಗಂಭೀರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತ ಪಟ್ಟರೆ,  ರವಿಗೆ ಗಂಭೀರ ಗಾಯವಾಗಿದೆ. ಕೂಡಲೇ ಆತನನ್ನು  ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಬಸವರಾಜು ಕಳೆದ 2 ತಿಂಗಳ ಹಿಂದೆ ತನ್ನ ಅಕ್ಕನ ಮಗಳನ್ನೇ ಮದುವೆಯಾಗಿದ್ದು, ಹೊಸಜೀವನ ಕಂಡು ಕೊಳ್ಳುವ ಮೊದಲೇ ಆತ ದುರಂತದಲ್ಲೇ ಮೃತಪಟ್ಟಿರುವುದು ದುಃಖದ ವಿಚಾರವಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಇಡೀ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

See also  ಚಾಮರಾಜನಗರ ಜಿಲ್ಲೆಯಲ್ಲಿ ರಕ್ತ ಕೊರತೆಯ ಆತಂಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು