News Kannada
Friday, October 07 2022

ಕರ್ನಾಟಕ

ಮಹಾತ್ಮಾ ಗಾಂಧಿ ಉದ್ಯಾನವನದ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಜಿ.ಸತ್ಯವತಿ ಸೂಚನೆ - 1 min read

Photo Credit :

ಮಹಾತ್ಮಾ ಗಾಂಧಿ ಉದ್ಯಾನವನದ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಜಿ.ಸತ್ಯವತಿ ಸೂಚನೆ

ಚಿಕ್ಕಮಗಳೂರು: ನಗರದ ಹೊರವಲಯದ ರತ್ನಗಿರಿ ಬೋರೆಯಲ್ಲಿರುವ ಮಹಾತ್ಮಾ ಗಾಂಧಿ ಉದ್ಯಾನವನವನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರೊಂದಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಜಿ.ಸತ್ಯವತಿ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ರತ್ನಗಿರಿ ಗಾರ್ಡನ್ ಟ್ರಸ್ಟ್ ನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಹಾತ್ಮ ಗಾಂಧಿ ಉದ್ಯಾನವನವು ಒಂದು ಸುಂದರ ಪ್ರಕೃತಿ ತಾಣವಾಗಿದ್ದು, ಪ್ರವಾಸಿಗರು ಸೇರಿದಂತೆ ಸ್ಥಳೀಯ ಸಾರ್ವಜನಿಕರಿಗೆ ಮನೋರಂಜನಾ ತಾಣವಾಗಿದೆ. ಅಲ್ಲಿಗೆ ಆಗಮಿಸುವ ಪ್ರವಾಸಿಗರು ಹಾಗೂ ಜನ ಸಾಮಾನ್ಯರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕೆಂದು ತಿಳಿಸಿದರು.

ಉದ್ಯಾನವನದಲ್ಲಿರುವ ಮಕ್ಕಳ ಆಟೋಪಕರಣಗಳು, ಕಾರಂಜಿಯ ನವೀಕರಣ ಸೇರಿದಂತೆ ಅದರ ನಿರ್ವಹಣೆಯನ್ನು ಬ್ಯಾಂಕ್ ಗಳ ಸಹಯೋಗದೊಂದಿಗೆ ಮಾಡಬೇಕು ಅದರ  ಸುರಕ್ಷತೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಒಪ್ಪಿಗೆ ಪಡೆದು ಅವುಗಳನ್ನು ಸರಿಪಡಿಸಬೇಕು. ಪ್ರವಾಸಿಗರು ಹಾಗೂ ಸಾರ್ವಜನಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಉದ್ಯಾನವನವನ್ನು ಪುನಶ್ಚೇತನಗೊಳಿಸಬೇಕು. ಉದ್ಯಾನ ವನದಲ್ಲಿರುವ ಉಪಹಾರ ಕೊಠಡಿಯನ್ನು ಮೇಲ್ದರ್ಜೆಗೇರಿಸಿ ಉದ್ಯಾನವನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಆಹಾರಗಳನ್ನು ಲಭ್ಯವಾಗುವಂತೆ ನೋಡಿಕೊಳ್ಳಬೇಕೆಂದರು.

ಉದ್ಯಾನವನಕ್ಕೆ ಸಾರ್ವಜನಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹಸಿರು ಪರಿಸರವನ್ನು ನಿರ್ಮಿಸುವುದರ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಉದ್ಯಾನವನದ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ರಾಮನಹಳ್ಳಿಯ ಮುಖ್ಯ ರಸ್ತೆಗೆ ನಾಮಫಲಕ ಅಳವಡಿಸಬೇಕು. ಉದ್ಯಾನವನದ ನಿರ್ವಹಣೆಗೆ ನಗರಸಭೆಯಿಂದ ಅನುದಾನ ನೀಡುವಂತೆ ಸೂಚಿಸಿದರು.  

ಉದ್ಯಾನವನದ ಪ್ರವೇಶ ದರವನ್ನು ವಯಸ್ಕರಿಗೆ 10 ರೂ ಗಳು ಮಕ್ಕಳಿಗೆ 5 ರೂ ಗಳನ್ನು ನಿಗಧಿಗೊಳಿಸಬೇಕೆಂದರು. ಸುಲಭ ಶೌಚಾಲಯದ ನಿರ್ವಹಣೆಯನ್ನು ಉತ್ತಮವಾಗಿ ನಿರ್ವಹಿಸಲು ಏಜೆನ್ಸಿಯವರನ್ನು ನೇಮಕಾತಿ ಮಾಡಬೇಕು. ರಾಮನಹಳ್ಳಿಯ ಮುಖ್ಯ ರಸ್ತೆಯಿಂದ ಉದ್ಯಾನವನಕ್ಕೆ ಹೋಗುವ ರಸ್ತೆಯ ಕಾಮಗಾರಿಯನ್ನು ನಗರಸಭೆ ವತಿಯಿಂದ ಕೈಗೊಳ್ಳಬೇಕು ಹಾಗೂ ಉದ್ಯಾನವನಕ್ಕೆ ವಿದ್ಯುತ್ ವ್ಯವಸ್ಥೆಯನ್ನು ಅಧಿಕಾರಿಗಳು ಕಲ್ಪಿಸಬೇಕೆಂದು ಸೂಚನೆ ನೀಡಿದರು.

 
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್, ಉದ್ಯಾನವನ ಟ್ರಸ್ಟ್ ಕಾರ್ಯದರ್ಶಿ ಕೆ.ಮೋಹನ್, ಸದಸ್ಯರಾದ ಎಂ ಎಲ್ ಮೂರ್ತಿ, ಡಿ.ಹೆಚ್ ನಟರಾಜ್, ಕೆ.ಟಿ ರಾಧಾಕೃಷ್ಣ, ಜಾಗಿಂಗ್ ಕಮಿಟಿಯ ಸದಸ್ಯೆ ಯಮುನಾ ಚನ್ನಬಸಪ್ಪಶೆಟ್ಟಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವರಾಜಯ್ಯ ಉಪಸ್ಥಿತರಿದ್ದರು.

See also  ಶ್ರವಣಬೆಳಗೊಳದಲ್ಲಿ ಮತ್ತೊಂದು ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು