News Kannada
Friday, September 30 2022

ಕರ್ನಾಟಕ

ವಿಶ್ವ ಸೌಂದರ್ಯ ಎನ್ನುವುದು ಜೀವನದಲ್ಲಿ ಸಾರ್ಥಕತೆಯಲ್ಲ: ಡಾ.ಕಬ್ಬಿನಾಲೆ ವಸಂತ್ ಭಾರದ್ವಜ್ - 1 min read

Photo Credit :

ವಿಶ್ವ ಸೌಂದರ್ಯ ಎನ್ನುವುದು ಜೀವನದಲ್ಲಿ ಸಾರ್ಥಕತೆಯಲ್ಲ: ಡಾ.ಕಬ್ಬಿನಾಲೆ ವಸಂತ್ ಭಾರದ್ವಜ್

ಮೂಡಿಗೆರೆ: ಇಹ ಜೀವನ ನಶ್ವರ, ಧರ್ಮವೆಂದರೆ ದೇವರನ್ನು ತಲುಪುವ ಹಾದಿ, ಹಣ, ರೂಪ, ದೈಹಿಕ ಶಕ್ತಿಯಿಂದ ವಿಶ್ವ ಸೌಂದರ್ಯ ಎನ್ನುವುದು ಜೀವನದಲ್ಲಿ ಸಾರ್ಥಕತೆಯಲ್ಲ ಎಂದು ಮೈಸೂರಿನ ಸಾಹಿತಿ ಮತ್ತು ಸಂಶೋಧಕ ಡಾ.ಕಬ್ಬಿನಾಲೆ ವಸಂತ್ ಭಾರದ್ವಜ್ ತಿಳಿಸಿದರು.

ಅವರು ಶ್ರೀಕ್ಷೇತ್ರ ಹೊರನಾಡಿನ ಆಧಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಾಲಯದ ಲಲಿತಾ ಕಲಾ ಮಂಟಪದಲ್ಲಿ ಡಾ.ಜಿ.ಭೀಮೇಶ್ವರ ಜೋಷಿ ಅವರ 25 ನೇ ಪಟ್ಟಾಭಿಷೇಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಜೀವ-ಭಾವ ಮತ್ತು ಸರ್ವ-ಧರ್ಮ ಸಮ್ಮೇಳನ ಹಾಗೂ ಪಟ್ಟಾಭಿಷೇಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದ ಹೀತ ದೃಷ್ಠಿಯಿಂದ ಸೇವೆ ಸಲ್ಲಿಸಿದಲ್ಲಿ ಅದು ಶಾಶ್ವತ, ಧಾನಿಯಾದವನು ಅಮೃತತ್ವ ಪಡೆದಿರುತ್ತಾನೆ. ಜೀವನವೆ ಒಂದು ಯಜ್ಞ, ದೇವರು ಯಾವ ರೀತಿಯಲ್ಲೂ ಬರಬಹುದು ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ. ಪ್ರತಿ ಜೀವದಲ್ಲೂ ದೈವ ಶಕ್ತಿ ಇದೆ ಎಂದು ತಿಳಿಸಿದರು.

ಚಿಕ್ಕಮಗಳೂರು ಡಯಾಸಿಸ್ ನ ಹಣಕಾಸು ನಿರ್ವಾಹಕರು ಮತ್ತು ಕುಲಪತಿ ರೆ.ಫಾ.ಫೆಲಿಕ್ಸ್ ಥಾಮಸ್ ರೋಸಾರಿಯೋ ಮಾತನಾಡಿ, ಧಾರ್ಮಿಕತೆ ಹೋಗಿ ಮಾನವಿಯ ಮೌಲ್ಯಗಳು ಕುಸಿಯುತ್ತಿದೆ. ಧರ್ಮ ಎಂದರೆ ಜ್ಞಾನ ಮತ್ತು ಹತೋಟಿಗಳ ನಂಬಿಕೆಯಾಗಿದೆ. ಧರ್ಮ ಎಂಬುವುದು ಒಂದು ಅಸಾಧಾರಣವಾದ ನಂಬಿಕೆಯಾಗಿದೆ. ನಮ್ಮ ಧರ್ಮವು ಕರ್ಮವನ್ನು ತೊಲಗಿಸುವ ಮೂಲಕ ಎಲ್ಲಾ ಧರ್ಮಗಳ ತಿರುಳು ಒಂದೇ ನಾನೊಬ್ಬ ಒಳ್ಳೆಯ ವ್ಯಕ್ತಿಯಾಗಿ ಇತರರಿಗೆ ಮಾರ್ಗದರ್ಶಕರಾಗಿ, ಒಳಿತನ್ನು ಮಾಡಿ ಜೀವನದ ಅರ್ಥವನ್ನು ಪಡೆದುಕೊಳ್ಳಬೇಕು ಎಂದರು.

ಪುತ್ತೂರು ಬಪ್ಪಳಿಗೆಯ ಮಸ್ಜಿದ್ ನೂರ್ ಬಪ್ಪಳಿಗೆಯ ಧರ್ಮಗುರು ಆಲ್ ಹಜ್ ಎ.ಸಿರಾಜುದ್ದೀನ್ ಫೈಝಿ ಮಾತನಾಡಿ, ಎಲ್ಲರು ದೇವರ ಆಶ್ರಿತರು. ಈ ಜೀವನ ಸಾರ್ಥಕವಾಗಲು ಜೇನು ಹೇಗೆ ಎಲ್ಲಾದರಲ್ಲೂ ಹಾಕಿದರೆ ಸೇರಿಕೊಳ್ಳುತ್ತದೆಯೋ ಹಾಗೆ ನಮ್ಮೊಳಗಿನ ಸಾಮಾರಸ್ಯ ಧರ್ಮಾಚರಣೆಯಲ್ಲಿ ಯಾರು ನಿರ್ಭಂಧಿಸುತ್ತಿಲ್ಲ. ಮುಸ್ಲೀಂ ಧರ್ಮ ಒಂದು ಪವಿತ್ರ ಧರ್ಮ ಮುಸ್ಲೀಂರೆಂದರೆ ಭಯೋತ್ಪಾದಕರಲ್ಲಾ ಭಯೋತ್ಪಾದಕರ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಪವಿತ್ರ ಧರ್ಮವನ್ನು ಬಳಸಿಕೊಳ್ಳುವುದರ ಮೂಲಕ ದೇಶದಲ್ಲಿ ಅರಾಜಕತೆಯನ್ನು ಉಂಟುಮಾಡುತ್ತಿರುವುದು ವಿಷಾಧನಿಯ ಸಂಗತಿಯಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಶ್ರಿ ಕ್ಷೇತ್ರದ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಶಿರಸಿ ಸೋಂದಾ ಶ್ರೀಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠದ ಸ್ವಸ್ತಿ ಶ್ರೀ ಭಟ್ಟಾಕಲಂಕಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಉದ್ಘಾಟಿಸಿದರು. ಸಮಾಜ ಸೇವಕ ಬೆಂಗಳೂರಿನ ಪ್ರೇರಣಾ ರಿಸರ್ಚ್ ಸೆಂಟರ್ ನ  ಶ್ರೀಮತಿ ಪ್ರಶಾಂತ ಮತ್ತು ಜಗದೀಶ್ ಜೋಷಿದಂಪತಿಗಳಿಗೆ ಶ್ರೀಮಾತ ಪ್ರಶಸ್ತಿಯನ್ನು ಕ್ಷೇತ್ರದ ವತಿಯಿಂದ ಪ್ರಧಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ರಾಜಲಕ್ಷ್ಮೀ ಭಿ.ಜೋಷಿ, ಶ್ರೀ ಅಂಕರಕಣ ಗಣಪತಿ ದೇವಾಲಯದ ಧರ್ಮಕರ್ತ ರಾಮನಾರಾಯಣ ಜೋಷಿ, ಶೃಂಗೇರಿ ಶಾಸಕ ಡಿ.ಎನ್.ಜೀವರಾಜ್, ರಾಜೇಶ್ ಹೆಬ್ಬಾರ್ ಉಪಸ್ಥಿತರಿದ್ದರು.

See also  ಕಂದಕಕ್ಕೆ ಉರುಳಿದ ಕಾರು: ದಂಪತಿ ಸೇರಿ ನಾಲ್ವರು ದುರ್ಮರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು