News Kannada
Wednesday, October 05 2022

ಕರ್ನಾಟಕ

ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವ: ಭಕ್ತಿಯ ಕ್ಷಣಕ್ಕೆ ಸಾಕ್ಷಿಯಾದ ಭಕ್ತ ಸಾಗರ - 1 min read

Photo Credit :

ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವ: ಭಕ್ತಿಯ ಕ್ಷಣಕ್ಕೆ ಸಾಕ್ಷಿಯಾದ ಭಕ್ತ ಸಾಗರ

ಮಡಿಕೇರಿ:ಜೀವನದಿ ಕಾವೇರಿಯ ಉಗಮ ಸ್ಥಾನ ಬ್ರಹ್ಮಗಿರಿಯ ತಪ್ಪಲಿನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವವಾಯಿತು. ನಿಗದಿತ ಅವಧಿಗೆ ಒಂದು ನಿಮಿಷ ಮುಂಚಿತವಾಗಿ ಸೋಮವಾರ ಬೆಳಗ್ಗೆ ತುಲಾ ಲಗ್ನ ಶುಭ ಗಳಿಗೆಯಲ್ಲಿ 6 ಗಂಟೆ 28 ನಿಮಿಷಕ್ಕೆ ತೀರ್ಥರೂಪಿಣಿಯಾಗಿ ಮಾತೆ ಕಾವೇರಿ ಕಾಣಿಸಿಕೊಂಡ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

‘ಜೈ ಜೈ ಮಾತಾ ಕಾವೇರಿ ಮಾತಾ’ ಉದ್ಘೋಷಗಳ ನಡುವೆ ನಾರಾಯಣ ಆಚಾರ್, ಗೋಪಾಲಕೃಷ್ಣ ಆಚಾರ್ ನೇತೃತ್ವದ ಹದಿನೆಂಟು ಮಂದಿ ಅರ್ಚಕ ಸಮೂಹದಿಂದ ವೇದ ಘೋಷದೊಂದಿಗೆ ಕುಂಡಿಕೆ ಬಳಿ ಮಹಾ ಸಂಕಲ್ಪ ಪೂಜೆ ನಡೆಯಿತು. ಮಹಾಮಂಗಳಾರತಿ ನೆರವೇರುತ್ತಿರುವಂತೆಯೆ ನಾಡಿನ ಅನ್ನದಾತೆ ಕಾವೇರಿ ತೀರ್ಥರೂಪಿಣಿಯಾಗಿ ಹೊರಹೊಮ್ಮಿದಳು.

ಸಂಸದ ಪ್ರತಾಪ್ ಸಿಂಹ, ಮಂಡ್ಯದ ಮಾಜಿ ಸಂಸದೆ, ಚಲನಚಿತ್ರ ನಟಿ ರಮ್ಯ, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಮಡಿಕೇರಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಮಂಡ್ಯ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರುಗಳಾದ ಅಪ್ಪಾಜಿ ಗೌಡ, ಶ್ರೀಕಂಠೇಗೌಡ, ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಲ್ಪನಾ, ಕಾಂಗ್ರೆಸ್ ಪ್ರಮುಖ ಬ್ರಿಜೇಶ್ ಕಾಳಪ್ಪ, ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಜಿಪಂ ಸದಸ್ಯರಾದ ಕೆ.ಪಿ. ಚಂದ್ರಕಲಾ, ಕವಿತಾ ಪ್ರಭಾಕರ್ ಸೇರಿದಂತೆ ಹಲವು ಗಣ್ಯರು ಭಕ್ತಿಯ ಕ್ಷಣಕ್ಕೆ ಸಾಕ್ಷಿಯಾದರು.

ಕಾವೇರಿ ಮಾತೆಗೆ ಆಭರಣಗಳ ಅಲಂಕಾರ:

ಕಾವೇರಿ ಮಾತೆಗೆ ಅರಸರ ಆಡಳಿತಾವಧಿಯಲ್ಲಿ ನೀಡಲಾಗಿದ್ದ ಅತ್ಯಮೂಲ್ಯವಾದ ಬೆಳ್ಳಿಯ ಪ್ರಭಾವಳಿ, ಬೆಳ್ಳಿಯ ಪೀಠ, ಚಿನ್ನದ ಮೂರು ಅಂತಸ್ತಿನ ಕೊಡೆ, ಎರಡು ಚಿನ್ನದ ಪತಾಕೆ, ಚಿನ್ನದ ಸೂರ್ಯ ಮತ್ತು ಚಂದ್ರಪಾನ ಎನ್ನುವ ಅತ್ಯಾಕರ್ಷಕ ಆಭರಣಗಳು ಮತ್ತು ಹೂಗಳಿಂದ ಬ್ರಹ್ಮ ಕುಂಡಿಕೆಯನ್ನು ಅಲಂಕರಿಸಲಾಗಿತ್ತು.

ಸಂಪ್ರದಾಯದಂತೆ ತೀರ್ಥೋದ್ಭವಕ್ಕೆ ಅರ್ಧ ಗಂಟೆಗೆ ಮುಂಚಿತವಾಗಿ ಭಾಗಮಂಡಲದ ಶ್ರೀ ಭಗಂಡೇಶ್ವರ ಸನ್ನಿಧಿಯ ತಕ್ಕಮುಖ್ಯಸ್ಥರಾದ ಬಳ್ಳಡ್ಕ ಅಪ್ಪಾಜಿ ಮತ್ತು ದೇವಸ್ಥಾನದ ಪ್ರಮುಖರು ಮಂಗಳವಾದ್ಯಗಳೊಂದಿಗೆ, ತಲಕಾವೇರಿಯ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ ಅವರೊಂದಿಗೆ ತಲಕಾವೇರಿಗೆ ಆಗಮಿಸಿದರು. ತೀರ್ಥೋದ್ಭವದ ಬಳಿಕ ಬೆಳ್ಳಿಯ ತಂಬಿಗೆಯಲ್ಲಿ ಕಾವೇರಿಯ ತೀರ್ಥವನ್ನು ಕುಂಡಿಕೆಯಿಂದ ಪ್ರಥಮವಾಗಿ ಸಂಗ್ರಹಿಸಿ ಭಾಗಮಂಡಲದ ಶ್ರೀ ಭಗಂಡೇಶ್ವರನಿಗೆ ಅಭಿಷೇಕ ಮಾಡಲು ಕೊಂಡೊಯ್ದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಜೇಂದ್ರ ಪ್ರಸಾದ್ ಉಸ್ತುವಾರಿಯಲ್ಲಿ ಅತ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ತೀರ್ಥೋದ್ಭವದ ಹಂತದಲ್ಲಿ ಯಾವುದೇ ನೂಕು ನುಗ್ಗಲಿಗೆ ಅವಕಾಶವಾಗದಂತೆ ಪೊಲೀಸರು ಅಗತ್ಯ ಬ್ಯಾರಿಕೇಡ್ ಗಳನ್ನು ನಿರ್ಮಿಸಿದ್ದರು. ಈ ಬಾರಿ ಭಕ್ತರು ವಿರಳ ಸಂಖ್ಯೆಯಲ್ಲಿದ್ದರು.

See also  ಪರಮೇಶ್ವರ್ ಗೃಹ ಖಾತೆ ಬದಲಾವಣೆ ಹೈಕಮಾಂಡ್ ನಿರ್ಧಾರ: ಸಿದ್ದರಾಮಯ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು