News Kannada
Monday, September 26 2022

ಕರ್ನಾಟಕ

ಟಿಪ್ಪು ಜಯಂತಿ: ಸೂಕ್ತ ಭದ್ರತೆಗೆ ಸಿಎನ್ಸಿ ಒತ್ತಾಯ - 1 min read

Photo Credit :

ಟಿಪ್ಪು ಜಯಂತಿ: ಸೂಕ್ತ ಭದ್ರತೆಗೆ ಸಿಎನ್ಸಿ ಒತ್ತಾಯ

ಮಡಿಕೇರಿ: ಕೊಡಗಿನ ಜನತೆಯ ತೀವ್ರ ವಿರೋಧದ ನಡುವೆಯೂ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗಿರುವ ಕರ್ನಾಟಕ ರಾಜ್ಯ ಸರ್ಕಾರ ಕಳೆದ ಸಾಲಿನಂತೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಸ್ಥಳೀಯರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನ ಟಿಪ್ಪು ಜಯಂತಿಯ ಸಂದರ್ಭ ನಡೆದ ವಿಧ್ವಂಸಕ ಕೃತ್ಯ ಈ ಬಾರಿ ಮರುಕಳಿಸುವುದಿಲ್ಲ ಎನ್ನುವುದಕ್ಕೆ ಯಾವುದೇ ಖಾತ್ರಿಯಿಲ್ಲ. ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯದ ರಾಜ್ಯಪಾಲ ವಾಜುಬಾಯಿ ವಾಲ, ಮುಖ್ಯ ಕಾರ್ಯದರ್ಶಿಗಳಿಗೆ ಜಿಲ್ಲಾಡಳಿತದ ಮೂಲಕ ಮನವಿ ಮಾಡಿಕೊಳ್ಳಲಾಗಿದೆಯೆಂದು ತಿಳಿಸಿದರು.

ಟಿಪ್ಪು ಜಯಂತಿ ಆಚರಣೆ ಸರ್ಕಾರದ ನಿರ್ಧಾರವಾಗಿರಬಹುದಾದರೆ, ಕೊಡಗಿನ ಜನರ ರಕ್ಷಣೆಯೂ ಅದರ ಜವಾಬ್ದಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಕೇರಳದ ಕಡೆಯಿಂದ ಬರುವ ಕೆಎಲ್ ನೋಂದಣಿಯ ಎಲ್ಲಾ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು ಹಾಗೂ ವಿಧ್ವಂಸಕ ಕೃತ್ಯವೆಸಗುವ ಚಿಂತನೆ ಹೊತ್ತ ವ್ಯಕ್ತಿಗಳು ಐದಾರು ದಿನ ಮುಂಚಿತವಾಗಿ ಜಿಲ್ಲೆಗೆ ಮಾರು ವೇಷದಲ್ಲಿ ಬಂದು ಹೋಂ ಸ್ಟೇ, ಬಂಧುಗಳ ಮನೆ, ಇನ್ನಿತರ ಸ್ಥಳಗಳಲ್ಲಿ ತಂಗುವ ಸಾಧ್ಯತೆಗಳಿದೆ ಎಂದು ಆರೋಪಿಸಿದ ಎನ್.ಯು.ನಾಚಪ್ಪ ಪೊಲೀಸರು ಕಟ್ಟು ನಿಟ್ಟಾಗಿ ತಪಾಸಣೆಗೆ ಒಳಪಡಿಸಬೇಕೆಂದು ಎನ್.ಯು.ನಾಚಪ್ಪ ಒತ್ತಾಯಿಸಿದರು.

ಇದರೊಂದಿಗೆ ತಮ್ಮ ದೈನಂದಿನ ವಹಿವಾಟಿಗಾಗಿ ಕೊಡಗು ಮಾರ್ಗವಾಗಿ ಮೈಸೂರು, ಬೆಂಗಳೂರಿಗೆ ಕಾಸರಗೊಡು, ಕಣ್ಣೂರು, ವಯನಾಡು ಜಿಲ್ಲೆಯ ಜನತೆ ತೆರಳುತ್ತಿದ್ದು, ಇದನ್ನು ನ.10ರ ವರೆಗೆ ನಿರ್ಬಂಧಿಸಿ, ಕಣ್ಣೂರು, ವಯನಾಡಿನ ಜನ ಗೂಡ್ಲೂರು, ಗುಂಡ್ಲುಪೇಟೆ ಮಾರ್ಗವಾಗಿ, ಕಾಸರಗೋಡಿನವರು ಸಕಲೇಶಪುರ ಮಾರ್ಗವಾಗಿ ಮೈಸೂರು, ಬೆಂಗಳೂರಿಗೆ ತೆರಳಲು ಕಟ್ಟು ನಿಟ್ಟಿನ ಸೂಚನೆ ನೀಡಬೇಕೆಂದರು.

ಕೊಡಗಿನ ಗೇಟ್ ಗಳನ್ನು ಸೀಲ್ ಮಾಡಿ :
ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ನ.9 ರಿಂದಲೆ ಕೊಡಗಿನ ಎಲ್ಲಾ ಗೇಟ್ ಗಳನ್ನು ಕಡ್ಡಾಯವಾಗಿ ಸೀಲ್ ಮಾಡಬೇಕೆಂದು ಆಗ್ರಹಿಸಿದ ನಾಚಪ್ಪ ಅವರು, ಕೊಡಗಿನಲ್ಲಿ ಅಶಾಂತಿಯನ್ನು ಸೃಷ್ಟಿಸುವವರನ್ನು ತಡೆಗಟ್ಟಲು ನಾಗರಹೊಳೆ ಚೆಕ್ ಪೊಸ್ಟ್, ತಿತಿಮತಿ, ಸಿದ್ದಾಪುರ, ಕುಶಾಲನಗರ, ಕೊಣನೂರು, ಕರಿಕೆ, ಸಂಪಾಜೆ, ಕೊಡ್ಲಿಪೇಟೆ, ಕುಟ್ಟ ಚೆಕ್ ಪೋಸ್ಟ್ ಗಳನ್ನು ಮುಚ್ಚುವಂತೆ ಆಗ್ರಹಿಸಿದರು.

ಎರಡು ಶತಮಾನಗಳ ಹಿಂದೆ ಟಿಪ್ಪು ಸುಲ್ತಾನ್ ನಿಂದ ದೇವಟ್ ಪರಂಬುವಿನಲ್ಲಿ ನಡೆದ ನರಮೇಧದ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿಗೆ ಜಿಲ್ಲೆಯ ಜನತೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. ಹೀಗಿದ್ದೂ ಸರ್ಕಾರ ತನ್ನ ಹಠಮಾರಿತನದಿಂದ ಜಯಂತಿ ಆಚರಣೆಗೆ ಮುಂದಾಗುತ್ತಿರುವುದು ದುರ್ದೈವ. ಟಿಪ್ಪು ಜಯಂತಿಯ ಬಗ್ಗೆ ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹ ಅವರು ಇದು ಪ್ರಜಾತಂತ್ರಕ್ಕೆ ಮಾರಕವೆಂದು ಆರೋಪಿಸಿದರು.

ರಾಜ್ಯ ಸರ್ಕಾರದ ವಿಷನ್ ಗ್ರೂಪ್ ನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮೋಹನ್ ದಾಸ್ ಪೈ ಅವರು ಟಿಪ್ಪು ಜಯಂತಿಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದ ಖ್ಯಾತ ಇತಿಹಾಸಗಾರ್ತಿ ಕೇಟ್ ಬ್ರಿಟಲ್ ಬ್ಯಾಂಕರ್ ಅವರು ತಮ್ಮ ಗ್ರಂಥದಲ್ಲಿ ಟಿಪ್ಪು ಸ್ವಾತಂತ್ರ್ಯ ಯೋಧನೂ ಅಲ್ಲ, ರಾಷ್ಟ್ರೀಯ ವಾದಿಯೂ ಅಲ್ಲವೆಂದು ತಿಳಿಸಿದ್ದಾರೆ. ಟಿಪ್ಪು ಸುಲ್ತಾನನ್ನು ವೈಭವೀಕರಿಸುವ ಮೂಲಕ ಕೊಡಗಿನಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಪ್ರಮುಖ ವ್ಯಕ್ತಿಗಳ ಚಲನ ವಲನಗಳ ಮೇಲೆ ಗುಪ್ತಚರ ಇಲಾಖೆಗಳಾದ ಐಬಿ, ಎನ್ಐಎ ಮತ್ತು ರಾ ಏಜೆನ್ಸಿಗಳು ನಿಗಾವಹಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ದಿಲೀಪ್, ಪುಲ್ಲೇರ ಕಾಳಪ್ಪ, ಚಂಬಂಡ ಜನತ್ ಹಾಗೂ ಮಂದಪಂಡ ಮನೋಜ್ ಉಪಸ್ಥಿತರಿದ್ದರು.

See also  ಉಳ್ಳಾಲ ತೀರಕ್ಕೆ ತೇಲಿಬಂದ ಲಂಗರು ಹಾಕಿದ್ದ ಬೋಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು