News Kannada
Monday, November 28 2022

ಕರ್ನಾಟಕ

ಟಾಟಾ ಕಾಫಿ ಎಸ್ಟೇಟ್ ನಿಂದ ಸರ್ಕಾರಿ ಜಾಗ ಒತ್ತುವರಿ! - 1 min read

Photo Credit :

ಟಾಟಾ ಕಾಫಿ ಎಸ್ಟೇಟ್ ನಿಂದ ಸರ್ಕಾರಿ ಜಾಗ ಒತ್ತುವರಿ!

ಮಡಿಕೇರಿ: ಕೊಡಗಿನ ಹಲವೆಡೆ ಕಾಫಿ ಎಸ್ಟೇಟ್ ಮಾಲೀಕರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು  ಕಾಫಿ ತೋಟವನ್ನಾಗಿ ಮಾರ್ಪಡಿಸಿರುವ ಪ್ರಕರಣಗಳು ನಡೆದಿದ್ದು ಕಂದಾಯ ಇಲಾಖೆ ಅದನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದೆ.

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ದೊಡ್ಡ ದೊಡ್ಡ ಕಾಫಿ ಎಸ್ಟೇಟ್ ಗಳಿದ್ದು, ಅದರ ಮಾಲೀಕರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದು ಇದೀಗ ಬೆಳಕಿಗೆ ಬಂದಿದ್ದು, ಅದನ್ನು ತೆರವುಗೊಳಿಸುವ ಕಾರ್ಯಕ್ಕೆ ತಹಸೀಲ್ದಾರ್ ಆದೇಶದಂತೆ ಸುಂಟಿಕೊಪ್ಪ ನಾಡ ಕಚೇರಿಯ ಸಿಬ್ಬಂದಿ ಮುಂದಾಗಿದ್ದಾರೆ. ಸುಂಟಿಕೊಪ್ಪಕ್ಕೆ ಸಮೀಪದ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಭೂತನಕಾಡು ಊರುಪರಂಬುವಿನಲ್ಲಿ ಟಾಟಾ ಕಾಫಿ ಎಸ್ಟೇಟ್ ನವರು ನಲ್ಲೂರು ಎಸ್ಟೇಟ್ ವಿಭಾಗ ಎಂಬಲ್ಲಿ ಸರ್ವೇ ನಂಬರ್ 126ರಲ್ಲಿ 6.78 ಎಕರೆ ಹಾಗೂ ಸರ್ವೇ ನಂಬರ್ 124 ರಲ್ಲಿ  5.42 ಎಕರೆ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಫಿ ಕರಿಮೆಣಸು ಹಾಗೂ ಸಿಲ್ವರ್ ಗಿಡಗಳನ್ನು ನೆಟ್ಟು ಬೆಳೆಸಿದ್ದರು.

ಈ ಬಗ್ಗೆ 7ನೇ ಹೊಸಕೋಟೆ ಗ್ರಾಪಂ ಹಾಗೂ ಕಂಬಿಬಾಣೆ ಗ್ರಾಪಂನವರು ಕಂದಾಯ ಇಲಾಖೆಗೆ ಮನವಿ ಸಲ್ಲಿಸಿ ಟಾಟಾ ಎಸ್ಟೆಟ್ ನಿಂದ ಸರಕಾರಿ ಪೈಸಾರಿ ಜಾಗ 12 ಎಕರೆ 20 ಸೆಂಟ್ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು ಅದನ್ನು ತೆರವುಗೊಳಿಸಿ ಬಡವರಿಗೆ ಸೂರು ಇಲ್ಲದವರಿಗೆ ಮನೆ ನಿರ್ಮಿಸಿಕೊಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದರು.

ಈ ಸಂಬಂಧ ತಹಸೀಲ್ದಾರ್ ಅವರು ನೀಡಿದ ಸೂಚನೆ ಮೇರೆಗೆ ಸುಂಟಿಕೊಪ್ಪ ನಾಡು ಕಚೇರಿಯ ಪ್ರಭಾರ ಕಂದಾಯ ನಿರೀಕ್ಷಕ ನಾಗೇಶ್ರಾವ್, ಗ್ರಾಮಲೆಕ್ಕಿಗರು, ಸಿಬ್ಬಂದಿ ಟಾಟಾ ಎಸ್ಟೇಟ್ಗೆ ತೆರಳಿ ಒತ್ತುವರಿ ತೆರವಿಗೆ ಮುಂದಾದಾಗ ಟಾಟಾ ತೋಟದ ವ್ಯವಸ್ಥಾಪಕರು ಆಕ್ಷೇಪ ವ್ಯಕ್ತಪಡಿಸಿ ಅವರನ್ನು ವಾಪಾಸ್ಸು ಕಳುಹಿಸಿದ್ದರು.

ಈ ಹಿನ್ನಲೆಯಲ್ಲಿ  ತಹಸೀಲ್ದಾರ್ ಮರು ಆದೇಶ ಹೊರಡಿಸಿದ ಮೇರೆಗೆ ಇದೀಗ ಪೊಲೀಸ್ ರಕ್ಷಣೆಯೊಂದಿಗೆ ನಲ್ಲೂರು ಭೂತನಕಾಡು ಊರುಪರಂಬುವಿನಲ್ಲಿರುವ ಟಾಟಾ ಕಾಫಿ ಎಸ್ಟೇಟ್ ಗೆ ತೆರಳಿ ಸರ್ವೇ ನಂ 126 ರ 6.78 ಎಕ್ರೆ ಜಾಗ ಹಾಗೂ ಸರ್ವೇ ನಂ 124 ರ 5.42 ಎಕ್ರೆ ಜಾಗದ ಕಂದಾಯ ಇಲಾಖೆಗೆ ಸೇರಿದ್ದಾಗಿದೆ. ಈ ಜಾಗಕ್ಕೆ ಯಾರು ಅತಿಕ್ರಮಣ ಮಾಡುವಂತಿಲ್ಲ ಎಂದು ಬೋರ್ಡ್ ಅಳವಡಿಸಿ ಒಟ್ಟಾರೆ 12 ಎಕ್ರೆ 20 ಸೆಂಟು ಜಾಗವನ್ನು ಕಂದಾಯ ಇಲಾಖೆಯ ವಶಕ್ಕೆ ತೆಗೆದುಕೊಂಡಿದೆ.

ಕೊಡಗಿನಲ್ಲಿ ಇಂತಹ ಸರ್ಕಾರಿ ಜಾಗಗಳು ಅದೆಷ್ಟು ಒತ್ತುವರಿಯಾಗಿವೆಯೋ ಕಂದಾಯ ಇಲಾಖೆ ಸಮರ್ಪಕವಾಗಿ ಸರ್ವೇ ನಡೆಸಿ ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ತೆರವುಗೊಳಿಸಿದ್ದೇ ಆದರೆ ಬಡವರಿಗೆ ಸೂರು ಒದಗಿಸಲು ಅನುಕೂಲವಾಗಬಹುದೇನೋ.

See also  ಖಾಸಗಿ ಬಸ್ ಡಿಕ್ಕಿ ಹೊಡೆದು ಕಾಡುಕೋಣ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು