News Kannada
Tuesday, February 07 2023

ಕರ್ನಾಟಕ

ಗುಂಡ್ಲುಪೇಟೆ ಬಳಿ ಗೋಶಾಲೆ ಸ್ಥಾಪನೆ

Photo Credit :

ಗುಂಡ್ಲುಪೇಟೆ ಬಳಿ ಗೋಶಾಲೆ ಸ್ಥಾಪನೆ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಬರದ ಹಿನ್ನಲೆಯಲ್ಲಿ ಜಾನುವಾರುಗಳಿಗೆ ಮೇವಿಲ್ಲದೆ ಸಾಕಲು ಕಷ್ಟವಾಗುತ್ತಿರುವ ಕಾರಣದಿಂದ ರೈತರು ಕಸಾಯಿಖಾನೆಗೆ ನೀಡಲು ಮುಂದಾದರೆ ಮತ್ತೆ ಕೆಲವರು ದೂರದ ಊರುಗಳಿಂದ ಹಸಿರು ಮೇವು ತಂದು ಹಾಕುವ ಕಾರ್ಯಕ್ಕೆ ಮುಂದಾಗಿದ್ದು, ಇದೆಲ್ಲವೂ ಕಷ್ಟಕರವಾಗಿರುವುದರಿಂದ ಗೋಶಾಲೆ ನಿರ್ಮಿಸಿ ಎಂದು ರೈತರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದರು.

ಇದೀಗ ಬರಪರಿಸ್ಥಿತಿ ನಿರ್ವಹಣೆಯ ಮೊದಲನೇ ಹೆಜ್ಜೆ ಎಂಬಂತೆ ಜಿಲ್ಲಾಡಳಿತವು ತಾಲೂಕಿನ ಹುತ್ತೂರಿನಲ್ಲಿ ಗೋಶಾಲೆ ಸ್ಥಾಪನೆಗೆ ಮುಂದಾಗಿದ್ದು ಡಿ.10ರಂದು ಚಾಲನೆ ಸಿಗಲಿದೆ. ತಾಲೂಕಿನ ಹುತ್ತೂರು ಕೆರೆಯ ಸಮೀಪದ ಸನಂ 37ರಲ್ಲಿ 3.17 ಎಕರೆ ವಿಸ್ತೀರ್ಣದ ಸರ್ಕಾರಿ ಭೂಮಿಯಲ್ಲಿ ಗೋಶಾಲೆಯನ್ನು ತೆರೆಯಲು ಸರ್ವ ಸಿದ್ಧತೆ ನಡೆದಿದೆ. ಈ ಭೂಮಿಯು ಸರ್ಕಾರಕ್ಕೆ ಸೇರಿದ್ದು ಹಲವಾರು ವರ್ಷಗಳಿಂದ ಒತ್ತುವರಿಯಾಗಿತ್ತು. ಈ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ಸರ್ಕಾರ  ಸ್ವಾಧೀನಪಡಿಸುವುದರೊಂದಿಗೆ ಗೋಶಾಲೆ ಸ್ಥಾಪಿಸಿದೆ.

ಈಗಾಗಲೇ ಭೂಮಿಯನ್ನು ಸಮತಟ್ಟುಗೊಳಿಸುವ ಕಾಮಗಾರಿ ಮುಗಿಸಿ, ಸುತ್ತಲೂ ಸುತ್ತುಗೋಡೆ ನಿರ್ಮಾಣವೂ ಆಗಿದೆ. ಸಿಮೆಂಟ್ ಇಟ್ಟಿಗೆಗಳನ್ನು ಬಳಕೆ ಮಾಡಲಾಗುತ್ತಿದೆ. ತಹಸೀಲ್ದಾರ್ ಕೆ.ಸಿದ್ದು ಹಾಗೂ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಚನ್ನಬಸಪ್ಪ ನೇತೃತ್ವದಲ್ಲಿ ಸಿದ್ಧಗೊಂಡಿದೆ.
ಹುತ್ತೂರು ಕೆರೆಗೆ ಕಬಿನಿ ಮೂಲದಿಂದ ನೀರು ಸರಬರಾಜು ಮಾಡಿ ಜಾನುವಾರುಗಳಿಗೆ ನೀಡಲಾಗುತ್ತದೆ. ಇದೀಗ ಗೋಶಾಲೆ ನಿರ್ಮಾಣವಾಗಿರುವುದರಿಂದ ರೈತರು ಖುಷಿಪಟ್ಟಿದ್ದಾರೆ. ಗೋಶಾಲೆಯಲ್ಲಿ 500 ಜಾನುವಾರುಗಳಿಗೆ ಮೇವು ಹಾಗೂ ನೀರೊದಗಿಸಲು ವ್ಯವಸ್ಥೆ ಮಾಡಲಾಗಿದೆ. ಜಾನುವಾರುಗಳ ಕುಡಿಯುವ ನೀರಿಗಾಗಿ 2 ಅಡಿ 3 ಅಡಿ ಅಲಗಲದ 11 ಸಿಮೆಂಟ್ ತೊಟ್ಟಿಗಳನ್ನು ಅಳವಡಿಸಲಾಗಿದೆ. ಕೊಳ್ಳೇಗಾಲ ತಾಲೂಕಿನಿಂದ 2 ಲಾರಿಗಳಲ್ಲಿ ಮುಸುಕಿನ ಜೋಳದ ಕಡ್ಡಿಗಳನ್ನು ತಂದು ಸಂಗ್ರಹಿಸಲಾಗಿದೆ. ಇನ್ನು ಮುಂದೆ ರೈತರು ಜಾನುವಾರುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವುದು ಕಡಿಮೆಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

See also  ಕೊಡಗು: ಅಪಾಯದಂಚಿನ ನಿವಾಸಿಗಳಿಗೆ ವಿವಿಧ ಪರಿಹಾರ ಕೇಂದ್ರಗಳಲ್ಲಿ ಆಶ್ರಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು