ಹಾಸನ: ಮನೆಯಲ್ಲಿ ಮಲಗಿದ್ದ ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ ತಲೆಮರೆಸಿಕೊಂಡಿದ್ದ ಅಸ್ಸಾಂನ ಕಾಮುಕನನ್ನು ಸಕಲೇಶಪುರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಕಲೇಶಪುರ ತಾಲೂಕಿನ ಕಾಡುಮನೆ ಎಸ್ಟೇಟ್ ನಲ್ಲಿ ಬುಧವಾರ ರಾತ್ರಿ ಘಟನೆ ನಡೆದಿತ್ತು. ಕಾಫಿ ತೋಟ ಕೆಲಸಕ್ಕೆಂದು ಬಂದಿದ್ದ ಅಸ್ಸಾಂ ಮೂಲದ ಬಿಸ್ರಾ ಪ್ರಜಾ (35) ಎಂಬ ಕಾಮುಕನೇ ಮಗುವಿನ ಮೇಲೆ ಅತ್ಯಾಚಾರ ಎಸಗಿದ ನೀಚ.
ಎಸ್ಟೇಟ್ ನಲ್ಲಿ ವಾಸವಿದ್ದ ಈತ ಪಕ್ಕದ ಮನೆಯ ಮಗು ಬುಧವಾರ ರಾತ್ರಿ ಮಲಗಿದ್ದ ಸಂದರ್ಭ ಅದರ ಮೇಲೆ ಕಾಮತೃಷೆ ತೀರಿಸಿದ್ದ ಮಗು ಚೀರಾಡಿ ಅಕ್ಕಪಕ್ಕದವರು ಬರುತ್ತಿದ್ದಂತೆಯೇ ಅಲ್ಲಿಂದ ನಾಪತ್ತೆಯಾಗಿದ್ದನು.
ಕಾಮುಕನ ಕೃತ್ಯದಿಂದ ಮಗು ಅಸ್ವಸ್ಥಗೊಂಡಿದ್ದರಿಂದ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಡೆಸಲಾಗಿತ್ತಲ್ಲದೆ, ವೈದ್ಯಕೀಯ ಪರೀಕ್ಷೆ ಸಂದರ್ಭ ಅತ್ಯಾಚಾರ ಎಸಗಿರುವುದು ದೃಢವಾಗಿತ್ತು.
ಮಗುವಿನ ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು, ನಾಪತ್ತೆಯಾಗಿದ್ದ ಆರೋಪಿಗಾಗಿ ಬಲೆ ಬೀಸಿದ್ದು, ಬುಧವಾರ ರಾತ್ರಿ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಗುರುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.