News Kannada
Saturday, January 28 2023

ಕರ್ನಾಟಕ

ಹಿಮಾಚಲ ಪ್ರದೇಶದಲ್ಲಿ ಕೊಡಗಿನ ಯೋಧ ದುರ್ಮರಣ

Photo Credit :

ಹಿಮಾಚಲ ಪ್ರದೇಶದಲ್ಲಿ ಕೊಡಗಿನ ಯೋಧ ದುರ್ಮರಣ

ಮಡಿಕೇರಿ: ಹಿಮಾಚಲ ಪ್ರದೇಶದ ಕುಲುಮನಾಲಿಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಜಿಲ್ಲೆಯ ಯೋಧರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

Soldier from Kodagu meets his end in hills of Kullu-Manali-1ವೀರಾಜಪೇಟೆ ತಾಲ್ಲೂಕಿನ ಬೇತ್ರಿ ಗ್ರಾಮದ ನಿವಾಸಿ ಶಶಿ ಮತ್ತು ವತ್ಸಲ ದಂಪತಿಗಳ ಪುತ್ರ ಕೆ.ಎಸ್.ರಾಜೇಶ್(29) ಎಂಬುವವರೆ ದುರ್ಮರಣಕ್ಕೀಡಾಗಿರುವ ಯೋಧ. ಇವರ ಪಾರ್ಥಿವ ಶರೀರ ಮಂಗಳವಾರ ಅಥವಾ ಬುಧವಾರ ಬರುವ ಸಾಧ್ಯತೆಗಳಿದೆ. 2007ರಲ್ಲಿ ಎಂಇಜಿಗೆ ಸೇರ್ಪಡೆಗೊಂಡಿದ್ದ ರಾಜೇಶ್ ಕುಲುಮನಾಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಡಿ.17 ರಂದು ರಾತ್ರಿ ಮೂತ್ರ ವಿಸರ್ಜನೆಗೆಂದು ತೆರಳಿದ್ದವರು ವಾಪಾಸಾಗದೆ ಇದ್ದುದನ್ನು ಗಮನಿಸಿದ ಸಹಪಾಠಿಗಳು ಹೊರತೆರಳಿ ಪರಿಶೀಲಿಸಿದಾಗ ರಾಜೇಶ್ ಅವರು ಬೆಟ್ಟದಿಂದ ಉರುಳಿ ಸಾವನ್ನಪ್ಪಿರುವುದು ಗೋಚರಿಸಿತು. ಸುಮಾರು 500 ಮೀ. ಆಳದಲ್ಲಿ ಮೃತದೇಹ ಕಂಡು ಬಂದಿದ್ದು, ತಲೆ ಹಾಗೂ ಬೆನ್ನಿಗೆ ತೀವ್ರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

ರಾಜೇಶ್ ಮೂತ್ರ ವಿಸರ್ಜನೆಗೆಂದು ತೆರಳಿದ್ದಾಗ ಬೆಟ್ಟದಿಂದ ಕೆಳಕ್ಕುರುಳಿ ಸಾವನ್ನಪ್ಪಿರಬಹುದೆಂದು ಸಹಪಾಠಿಗಳು ಅಭಿಪ್ರಾಯಪಟ್ಟಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ಕುಲುಮನಾಲಿಯಲ್ಲಿ ಮೈನಸ್ -17 ಡಿಗ್ರಿ ಉಷ್ಣಾಂಶವಿರುವುದರಿಂದ ಯೋಧನ ಮೃತದೇಹ ಸಾಗಾಟಕ್ಕೆ ಅಡಚಣೆ ಉಂಟಾಗಿದೆ ಎಂದು ತಿಳಿದು ಬಂದಿದೆ. ಮುಖ್ಯ ಕೇಂದ್ರ್ರ ಪನಾಲಿ ಕೋಸ್ಟ್ ಗೆ ಮೃತದೇಹ ತಲುಪಲು 300 ಕಿ.ಮೀ. ಕ್ರಮಿಸಬೇಕು. ಅಲ್ಲಿಂದ ಚಂಡೀಘಡಕ್ಕೆ ಸೋಮವಾರ ಬಂದು, ಬಳಿಕ ಬೆಂಗಳೂರು ಮಾರ್ಗವಾಗಿ ಎರಡು ದಿನಗಳಲ್ಲಿ ಮೃತ ದೇಹ  ಸ್ವಗ್ರಾಮಕ್ಕೆ ಬರುವ ಸಾಧ್ಯತೆಗಳಿದೆ.

ಡಿ.17 ರಂದು ರಾಜೇಶ್ ಮೂತ್ರ ವಿಸರ್ಜನೆಗೆ ತೆರಳುವ ಮೊದಲು ಪತ್ನಿ ಶಿಲ್ಪ ಅವರೊಂದಿಗೆ 18 ನಿಮಿಷಗಳ ಕಾಲ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಮೃತರು ಪತ್ನಿ ಹಾಗೂ ಒಂದು ವರ್ಷ 8 ತಿಂಗಳ ಪುತ್ರಿ ಇಂಚರಾಳನ್ನು ಅಗಲಿದ್ದಾರೆ. ಯೋಧ ರಾಜೇಶ್ ಅವರ ತಂದೆ ಮತ್ತು ತಾಯಿ ಕೂಲಿ ಕಾರ್ಮಿಕರಾಗಿದ್ದು, ಪತ್ನಿ ಹಾಗೂ ಪುತ್ರಿ ಬೇತ್ರಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಮೃತರಿಗೆ ಇಬ್ಬರು ಸಹೋದರಿಯರು ಇದ್ದಾರೆ.

See also  ಕೈಗಾ ಅಣುಸ್ಥಾವರಕ್ಕೆ ಡಿಸಿ ಹರೀಶಕುಮಾರ ಭೇಟಿ    
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು