ಚಿಕ್ಕಮಗಳೂರು: ಹೊರವಲಯದ ತೇಗೂರು ಗ್ರಾಮದಲ್ಲಿ ನೂರಾರು ಕುಟುಂಬಗಳು ವಾಸವಿದೆ. ಇಲ್ಲಿನ ಎಲ್ಲಾ ಗರಿಷ್ಟ ಕುಟುಂಬಗಳು ಪ್ರತಿನಿತ್ಯ ಹಾಲನ್ನು ಮಾರಿಯೇ ಜೀವನ ಸಾಗಿಸಬೇಕು ಆದ್ರೆ ನರೇಂದ್ರ ಮೋದಿ 500 ಮತ್ತು 1000 ಮುಖ ಬೆಲೆಯ ನೋಟ್ ಬ್ಯಾನ್ ಮಾಡಿದ ಮೇಲೆ ಇಲ್ಲಿನ ಜನರು ಸಂಕಷ್ಟಕ್ಕೆ ಸಿಲುಕ್ಕಿದ್ದು ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಹೌದು.. ಚಿಕ್ಕಮಗಳೂರಿನ ಹೊರವಲಯದ ತೇಗೂರು ಗ್ರಾಮದಲ್ಲಿ ನೂರಾರು ಕುಟುಂಬಗಳು ವಾಸವಿದೆ. ಇಲ್ಲಿನ ಗರಿಷ್ಟ ಮಟ್ಟದ ಕುಟುಂಬಗಳು ಹಸುವನ್ನು ಕಟ್ಟಿ ಹಾಲನ್ನು ಮಾರಿ ತಮ್ಮ ನಿತ್ಯ ಜೀವನ ಸಾಗಿಸುತ್ತಿದ್ದಾರೆ. ಆದ್ರೆ ಕಳೆದ ನವೆಂಬರ್ 8 ರಿಂದ ಇವರ ಜೀವನದಲ್ಲಿ ಏರುಪೇರು ಉಂಟಾಗಿದೆ. ಸರಿಯಾಗಿ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ, ಇದಕ್ಕೆ ಕಾರಣ ಪ್ರಧಾನಿ ಮಾಡಿದ ನೋಟ್ ಬ್ಯಾನ್ ನಿಂದ ಇವರಿಗೆ ಚಿಲ್ಲರೆ ಸಿಗದೇ ಕಂಗಾಲು ಆಗಿದ್ದಾರೆ.
ಡೈರಿಗೆ ಹಾಲು ಹಾಕಿದ್ರು ಸಹ ಅವರಿಗೆ ಹಣ ಸಿಗುತ್ತಿಲ್ಲ. ಇದರಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಇಲ್ಲಿನ ನೂರಾರು ಕುಟುಂಬಗಳು ಮತ್ತು ಇಲ್ಲಿನ ರೈತರು, ಪ್ರತಿನಿತ್ಯ ಹಾಲು ಕೊಡುವ ಜಾನುವಾರುಗಳಿಗೆ ಆಹಾರ ನೀಡಬೇಕು ಆದ್ರೆ ಆಹಾರ ತರುವುದಕ್ಕೆ ದುಡ್ಡಿಲ್ಲ, ಹಾಲನ್ನು ಹಾಕಿಸಿಕೊಳ್ಳುವಂತಹ ಡೈರಿಗಳು ಸರಿಯಾಗಿ ಹಣವನ್ನು ಪಾವತಿ ಮಾಡುತ್ತಿಲ್ಲ.
ಇದರಿಂದ ಕಂಗಾಲಾಗಿರುವ ರೈತರು ಏನು ಮಾಡದಂತಹ ಸ್ಥಿತಿಯಲ್ಲಿದ್ದಾರೆ. ಪ್ರತಿನಿತ್ಯದ ಜೀವನ ಸಾಗಿಸಲು ಕಷ್ಟದಾಯಕವಾಗಿದೆ. ಆದ್ರೆ ಮುಂದಿನ ದಿನಗಳಲ್ಲಿ ಎಲ್ಲರಿಗೂ ಒಳ್ಳೆಯಾಗುತ್ತದೇ ಏನೋ ಎಂಬ ಆಶಾಭಾವನೆಯನ್ನು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ಇದೇ ರೀತಿಯ ಲಕ್ಷಣಗಳು ಮುಂದುವರೆದರೇ ಕಷ್ಟದಾಯಕವಾಗಲಿದೆ ಎಂದೂ ತಮ್ಮ ಭಾವನೆಗಳನ್ನು ಹೊರಹಾಕುತ್ತಿದ್ದಾರೆ. ಒಟ್ಟಾರೆಯಾಗಿ ಪ್ರಧಾನಿ ಮೋದಿಯವರು ಮಾಡಿದಂತಹ ನೋಟ್ ಬ್ಯಾನ್ ನಿಂದ ರೈತರು ಒಂದು ಕಡೆ ಕಷ್ಟ ಅನುಭವಿಸುವಂತಾಗಿದ್ದು ಹಾಲು ಮಾರಾಟ ಮಾಡುವ ರೈತರಿಗೂ ಈ ಬಿಸಿ ತಟ್ಟಿದೆ. ಈ ಸಮಸ್ಯೆ ಯಾವಾಗಾಗ ಪರಿಹಾರ ಆಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.