ಚಿಕ್ಕಮಗಳೂರು: ಸರ್ಕಾರಿ ವಾಹನ ಟು ಚಿಕ್ಕಮಗಳೂರು ಡಿಸಿ ಆಫೀಸ್. ಚಿಕ್ಕಮಗಳೂರು ಡಿಸಿ ಆಫೀಸ್ ಟು ಬೆಂಗಳೂರು. ಜನ ನಾಯಕರು ಕಾಲು ಮಣ್ಣೇ ಆಗ್ದಿದ್ರೆ, ಮಣ್ಣಿನ ಮಕ್ಕಳ ಹಸಿವು, ಬಾಯಾರಿಕೆಯ ರೋಧನ ಅದ್ಹೇಗ್ ಗೊತ್ತಾಗುತ್ತೋ ಆ ದೇವರೇ ಬಲ್ಲ. ಇತಿಹಾಸದಲ್ಲಿ ಕಂಡು-ಕೇಳಿಯರದ ಭೀಕರ ಬರದಿಂದ ತತ್ತರಿಸ್ತಿರೋ ಕಾಫಿನಾಡಿನ ಜನಕ್ಕೆ ಬರ ಅಧ್ಯಯನ ತಂಡ ಬರುತ್ತೆಂದಾಗ ಒಂದಷ್ಟು ಆಶಾಭಾವನೆ ಕಟ್ಕೊಂಡಿದ್ರು. ಆದ್ರೆ, ಬಂದ ಪುಟ್ಟು ಹೋದ ಪುಟ್ಟುವಿನಂತಿದ್ದ ಸಚಿವರ ನಡೆ ಕಂಡ ಕಾಫಿನಾಡಿಗರು ಇವ್ರು ಒನ್ ಡೇ ಟ್ರಿಪ್ ಬಂದಿದ್ರ ಅಂದ್ರು.
ಬರ ಬಂದಿರೋದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಗೋ ಅಥವಾ ಜನಸಾಮಾನ್ಯರಿಗೋ ಗೊತ್ತಿಲ್ಲ. ಯಾಕಂದ್ರೆ, ಕಾಗೋಡು ತಿಮ್ಮಪ್ಪ ನೇತೃತ್ವದ ಬರ ಅಧ್ಯಯನ ತಂಡ, ಸ್ಥಳ ಪರಿಶೀಲನೆ ನಡೆಸ್ಲಿಲ್ಲ, ರೈತರ ಸಂಕಷ್ಟ ಕೇಳಲಿಲ್ಲ, ಮಣ್ಣು ಪಾಲಾಗಿರೋ ಬೆಳೆಯನ್ನೂ ನೋಡ್ಲಿಲ್ಲ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸಿ ರೂಂನಲ್ಲಿ ಕೂತೆ ಬರ ಅಧ್ಯಯನ ಮುಗಿಸಿದ್ರು. ಆದ್ರೆ, ಕಡೂರು ಶಾಸಕ ವೈ.ಎಸ್.ವಿ ದತ್ತಾ ಬರ ಅಧ್ಯಯನ ತಂಡ ಬಂದದ್ದು ಸ್ವಾಗತಾರ್ಹ. ಆದ್ರೆ, ಕಾಗೋಡು ತಿಮ್ಮಪ್ಪ ಎಲ್ಲವನ್ನೂ ಮಾಡ್ತೇವೆ, ಕೊಡ್ತೇವೆ ಎಂದು ಮೌಖಿಕವಾಗಿ ಎಲ್ಲಾ ಸಮಸ್ಯೆಗೂ ಪರಿಹಾರ ನೀಡೋದಕ್ಕೆ ಒಪ್ಪಿಕೊಳ್ತಾರೆ. ಆದ್ರೆ, ಲಿಖಿತವಾಗಿ ಏನನ್ನೂ ಮಾಡೋದಿಲ್ಲ. ಅಧಿಕಾರಿಗಳು ಅವ್ರು ಮೌಖಿಕವಾಗಿ ಹೇಳಿದ್ದಾರೆ.
ನಮಗಿನ್ನು ಆರ್ಡರ್ ಬಂದಿಲ್ಲ ಎಂದೇಳಿ ಕೈತೊಳೆದುಕೊಳ್ತಾರೆ. ಆದ್ದರಿಂದ ದಯವಿಟ್ಟು ಕಾಗೋಡು ತಿಮ್ಮಪ್ಪ ಅವ್ರು ಲಿಖಿತ ಆದೇಗೆ ಮಾಡ್ಬೇಕೆಂದು ಮನವಿ ಮಾಡ್ಕೊಂಡ್ರು. ಜಿಲ್ಲೆಯಲ್ಲಿನ ನಾಲ್ಕು ತಾಲೂಕುಗಳನ್ನ ಪರ ಪೀಡಿತ ಪಟ್ಟಿಗೆ ಸೇರ್ಸಿದ್ರು ಯಾವುದೇ ಪ್ರಯೋಜನವಾಗಿಲ್ಲ. ಜನ ಜಾನುವಾರುಗಳು ಕುಡಿಯೋಕೂ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕೆಲ ಗ್ರಾಮಗಳಲ್ಲಿ ಕುಟುಂಬವೊಂದಕ್ಕೆ ವಾರಕ್ಕೆ 200 ಲೀಟರ್ ನೀರು ಕೊಡ್ತಿದ್ದಾರೆ. ಜಾನುವಾರುಗಳು ಕಸಾಯಿ ಖಾನೆ ಪಾಲಾಗ್ತಿವೆ. ಮೇವು ಬ್ಯಾಂಕ್ಗಳಿರೋದು ಬೆರಳೆಣಿಕೆಯಷ್ಟು. ವಾರ್ಷಿಕ ದಾಖಲೆ ಮಳೆ ಬೀಳೋ ತಾಲೂಕುಗಳೇ ಬರದಿಂದ ಕಂಗಾಲಾಗಿದ್ರು, ಸರ್ಕಾರದಿಂದ ಈವರೆಗೆ ಒಂದೇ ಒಂದು ರೂಪಾಯಿ ಹಣ ಬಂದಿಲ್ಲ. ಹೀಗಿರುವಾಗ ಸಚಿವರು ಅದ್ಯಾವ ಸುಖಕ್ಕೆ ಈ ರೀತಿಯ ಬರ ಅಧ್ಯಯನ ನಡೆಸುದ್ರೋ ಗೊತ್ತಿಲ್ಲ. ಸಚಿವರು ಈ ಅಧ್ಯಯನ ಮಾಡಿ ಒಂದಷ್ಟು ಹಣ ಖರ್ಚು ಮಾಡುವ ಬದಲು ಅಲ್ಲೇ ಬೆಂಗಳೂರಿನಲ್ಲೇ ಕೂತು ಇಲ್ಲಿಂದ ವರದಿ ತರಿಸಿಕೊಂಡಿದ್ರೆ ಬಂದೋಗೋ ಖರ್ಚು ಉಳಿಯುತ್ತಿತ್ತು ಎಂದು ರೈತ ಸಮುದಾಯ ಬರ ಅಧ್ಯಯನ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ರಾಜ್ಯದ ಇತರೇ ಜಿಲ್ಲೆಗಳ ರೈತ್ರೆ ಪುಣ್ಯವಂತ್ರು ಅನ್ಸತ್ತೆ. ಯಾಕಂದ್ರೆ, ಸಂಜೆ 7.30ಕ್ಕೆ ಕತ್ತಲಾದ ಮೇಲಾದ್ರು ಪರವಾಗಿಲ್ಲ ಬರ ಅಧ್ಯಯನ ತಂಡ ಸ್ಪಾಟ್ ವಿಜ್ಹಿಟ್ ಮಾಡಿತ್ತು. ಆದ್ರೆ, ಚಿಕ್ಕಮಗಳೂರಿಗೆ ಬಂದ ತಂಡ 3.30ಕ್ಕೆ ಬಂದ್ರು ಎರಡು ಗಂಟೆ ಮೀಟಿಂಗ್ ಮಾಡಿ 5.30ಕ್ಕೆ ಹೊರಟ್ರು. ಅದೇನ್ ಚರ್ಚೆ ಮಾಡುದ್ರೋ ಗೊತ್ತಿಲ್ಲ. ಆದ್ರೆ, ಮುಂದಿನ ದಿನಗಳಲ್ಲಿ ಈ ಪ್ರವಾಸ ಬಂದ ದಾರಿಗೆ ಸುಂಕವಿಲ್ಲ ಎಂಬಂತಾಗದಿದ್ರೆ ಸಾಕು ಅನ್ನೋದು ಚಿಕ್ಕಮಗಳೂರಿಗರ ಆಶಯ.