News Kannada
Tuesday, November 29 2022

ಕರ್ನಾಟಕ

ಪಂಚಭೂತಗಳಲ್ಲಿ ಲೀನನಾದ ಹುತಾತ್ಮ ಯೋಧ - 1 min read

Photo Credit :

ಪಂಚಭೂತಗಳಲ್ಲಿ ಲೀನನಾದ ಹುತಾತ್ಮ ಯೋಧ

ವಿರಾಜಪೇಟೆ: ಡಿಸೆಂಬರ್ 18 ರಂದು ಬೆಳಗಿನ ಜಾವ ಹಿಮಾಚಲ ಪ್ರದೇಶದ ಕುಲುಮನಾಲಿ ಇಸ್ಟಿಂಗ್ರಿಯಲ್ಲಿ ದುರ್ಮರಣಕ್ಕಿಡಾದ ವೀರ ಯೋಧ ಕೆ.ಎಸ್ ರಾಜೇಶ್(29) ಅವರ ಪಾರ್ಥಿವ ಶರೀರ ವಿರಾಜಪೇಟೆ ತಾಲೂಕಿನ ಬೇತ್ರಿಯ ಕಾವೇರಿ ನದಿಯ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಪಂಚಭೂತಗಳಲ್ಲಿ ಲೀನವಾಯಿತು.
ವೀರ ಯೋಧ ರಾಜ್ಯ ಮಟ್ಟದ ಅಥ್ಲೀಟ್ಕ್ ನಯಕ್ ಕೆ ಎಸ್ ರಾಜೇಶ್ ರವರು ವಿರಾಜಪೇಟೆಯ ಭೇತ್ರಿ ಗ್ರಾಮದ ಕೂಲಿ ಕಾರ್ಮಿಕರಾದ ಶಶಿ ಹಾಗೂ ವತ್ಸಲ ದಂಪತಿಗಳ ಪುತ್ರನಾಗಿದ್ದು ಕಳೆದ ಹತ್ತು ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

Last rites of soldier who died in Kullu-Manali performed in Virajpet-118ರ ಮುಂಜಾನೆ 4 ಗಂಟೆಯ ಸುಮಾರಿಗೆ ಶಿಬಿರದಿಂದ ಹೊರ ಬಂದಾಗ ಕಾಲುಜಾರಿ ನುರಾರು ಮೀಟರ್ ಆಳದ ಪ್ರಪಾತಕ್ಕೆ ಬಿದ್ದು ಹುತಾತ್ಮರಾಗಿದ್ದರು. ಬೆಳಗಿನ ಜಾವ 2.30 ಗಂಟೆಗೆ ಆಗಮಿಸಿದ ಪಾರ್ಥಿವ ಶರೀರವನ್ನು ತಾಲೂಕು ತಹಶೀಲ್ದಾರ್ ಮಹಾದೇವಸ್ವಾಮಿ ಹಾಗೂ ಕಾಕೋಟುಪರಂಬು ಗ್ರಾಮ ಪಂಚಾಯಿತಿ ಸದಸ್ಯ ಮಂಡೇಟಿರ ಅನಿಲ್, ಗ್ರಾಮಸ್ಥರಾದ ರಾಬಿನ್ ದೇವಯ್ಯ, ಪವನ್, ಗಣಪತಿ, ವಿವೇಕ್, ಚೇತನ್, ಬಿಪಿನ್ ಇವರುಗಳು ಬರಮಾಡಿಕೊಂಡರು ಸಾರ್ವಜನಿಕ ದರ್ಶನಕ್ಕಾಗಿ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮೈದಾನದ ರಂಗ ಮಂಟಪದಲ್ಲಿ ಇರಿಸಲಾಯಿತು. ವೀರ ಯೋಧನಿಗೆ ವಿರಾಜಪೇಟೆ ಶಾಸಕ ಕೆ.ಜಿ ಬೊಪಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ ಹರೀಶ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಡಿಕೇರಿ ಶಾಸಕ, ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್ ಗಣಪತಿ, ತಾಲೂಕು ಪಂಚಾಯಿತಿ ಸದಸ್ಯೆ ಸೀತಮ್ಮ, ಕಾಕೋಟುಪರಂಬು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತಾ, ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಬಿ.ಟಿ ಪ್ರದೀಪ್, ವಿರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ, ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ನಂಜಪ್ಪ ,ಕಾಂಗ್ರೇಸ್ ಮುಖಂಡರಾದ ಪಟ್ಟಡ ರಂಜಿ ಪೂಣಚ್ಚ. ರಾಜೇಶ್ ಪದ್ಮನಾಭ್,ಸೇರಿದಂತೆ ಹಲವಾರು ಗಣ್ಯರು ಅಂತಿಮ ನಮನ ಸಲ್ಲಿಸಿದರು. 10.30 ಗಂಟೆಗೆ ಕಾಕೋಟುಪರಂಬುವಿನಿಂದ ಬೇತ್ರಿಯ ವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಯಿತು. 11.30 ಗಂಟೆಗೆ ಜಿಲ್ಲಾ ಪೋಲಿಸ್ ಮೂರು ಸುತ್ತು ಕುಶಲತೋಪು ಸಿಡಿಸಿ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು. ಲಾಸ್ ನಾಯಕ್ ಕೂತಂಡ ಬೋಪಣ್ಣ ಪತ್ನಿ ಶಿಲ್ಪಾ ಅವರಿಗೆ ರಾಷ್ಟ್ರ ಧ್ವಜವನ್ನು ಹಸ್ತಾಂತರಿಸಿ ಸೇನಾ ಗೌರವವನ್ನು ನೀಡಿದರು. ಪತ್ನಿ ಶಿಲ್ಪಾ ,ತಾಯಿ ವತ್ಸಾಲ, ತಂದೆ ಶಶಿ ಕುಟುಂಬಸ್ಥರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.

ರಾತ್ರಿ ಪತ್ನಿ ಶಿಲ್ಪಾರೊಂದಿಗೆ 18 ನಿಮಿಷ ಮಾತನಾಡಿದ್ದಾರೆ. ಬೆಳಗ್ಗಿನ ಜಾವ 6 ಗಂಟೆಗೆ ನೋಡಿದಾಗ ರಾಜೇಶ್ ಇರಲಿಲ್ಲ. ಎಲ್ಲಾ ಕಡೆಗಳಲ್ಲಿ ಹುಡುಕಾಡಿದೇವು. ಅವರ ಬಳಿ ಇದ್ದ ಕರ್ನಾಟಕ ಸಿಮ್ ಪೋನ್ ಹಾಸಿಗೆಯ ಮೇಲಿತ್ತು. ಹಿಮಾಚಲ ಪ್ರದೇಶದ ಸಿಮ್ಗೆ ಪೋನ್  ಮಾಡಿದಾಗ ಡೇರೆಯ ಹೊರಗೆ ಅನತಿ ದೂರದದಲ್ಲಿ ರಿಂಗಾಗುತ್ತಿತ್ತು. ಪೋನ್ ಬಳಿಯಲ್ಲಿ ಒಂದು ಚಪ್ಪಲಿ ಮಾತ್ರ ಇತ್ತು. ಹಿರಿಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿ ಹುಡುಕಾಡಿದಾಗ ಅಂದಾಜು 300 ಅಡಿ ಗುಂಡಿಯಲ್ಲಿ ಮರದ ಬುಡದಲ್ಲಿ ದೇಹ ಸಿಕ್ಕಿಹಾಕಿಕೊಂಡಿತ್ತು. ಅ ಸಂದರ್ಭ ಜೀವ ಇರಲಿಲ್ಲ. ನಂತರ ಲೋಕಲ್ ಪೋಲಿಸರಿಗೆ ಸುದ್ದಿಮುಟ್ಟಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಇಲ್ಲಿಗೆ ದೇಹವನ್ನು ತರಲಾಗಿದೆ ಎಂದು ಪಾರ್ಥಿವ ಶರೀರ ತಂದ ಜೊತೆಗಾರ ರಫೀಕ್ ಮಾಹಿತಿ ನೀಡಿದರು.

See also  ಗುಂಡ್ಲುಪೇಟೆ ಯಲ್ಲಿ ಚಿರತೆ ಪ್ರತ್ಯಕ್ಷ, ಆತಂಕದಲ್ಲಿ ಜನರು

ಮೃತ ರಾಜೇಶ್ ಸೇನೆಯಲ್ಲಿದ್ದರೂ ಕೂಡ ರಾಜೇಶನ ಪೋಷಕರು ಕೂಲಿ ಕಾರ್ಮಿರಾಗಿದ್ದಾರೆ. ಮಗನ ಸಾವಿನ ಸುದ್ದಿ ಕೇಳಿ ಕುಟುಂಬದ ಆದಾರ ಸ್ಥಂಬವೇ ಕಳಚಿ ಬಿದ್ದ ಕಾರಣ ಏನು ಮಾಡಲಾಗದ ಸ್ಥಿತಿ ಒದಗಿ ಬಂತು. ಆಗ ನೇರವಿಗೆ ಬಂದವರೆ ಊರಿನ ಜನ ಹಾಗೂ ಕಾಕೋಟುಪರಂಬು ಗ್ರಾಮ ಪಂಚಾಯಿತಿ. 18 ರಂದು ಸಾವಿನ ಸುದ್ದಿ ತಿಳಿದ ತಕ್ಷಣ ಆಸ್ತಿ ಅಂತಸ್ತು, ಧರ್ಮ, ಜಾತಿ ಲೆಕ್ಕಾಚಾರವನ್ನು ಬದಿಗೊತ್ತಿ ದೇಶಕ್ಕಾಗಿ ಮಡಿದ ವೀರ ಯೋಧನ ಕುಟುಂಬಕ್ಕೆ ನೆರವಾದರು. ಇರಲು ಸೂರಿಲ್ಲದೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಮನೆಯಲ್ಲಿ ಪಾರ್ಥಿವ ಶರೀರ ಇಡಲು ಸ್ಥಳಾವಕಾಶದ ಕೊರತೆ ಇದ್ದ ಕಾರಣ ಕಾಕೋಟುಪರಂಬು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸ್ಥರು ಸಭೆ ನಡೆಸಿ ಶಾಲಾ ಮೈದಾನದಲ್ಲಿ ಇರಿಸಿ ಅಂತಿಮ ನಮನವನ್ನು ಸಲ್ಲಿಸುವಂತೆ ತೀರ್ಮಾನ ತೆಗೆದುಕೊಂಡು ಅಂತ್ಯ ಸಂಸ್ಕಾರ ಸಂಪೂರ್ಣ ಜವಬ್ದಾರಿಯನ್ನು ಹೊತ್ತುಕೊಂಡು ಕಡೆಯ ಗಳಿಗೆಯವರೆಗೆ ಜವಾಬ್ದಾರಿಯನ್ನು ನಿಭಾಯಿಸಿ ಜನಪ್ರತಿನಿಧಿಗಳು ಸೇರಿದಂತೆ ಎಲ್ಲಾರ ಪ್ರಶಂಸೆಗೆ ಪಾತ್ರರಾದರು.

ಮೃತ ಯೋಧ ಕಾಕೋಟುಪರಂಬು ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿ ಹಿನ್ನಲೆಯಲ್ಲಿ ಶಾಲೆಯ ಎದುರು ಇರುವ ಮೈದಾನದಲ್ಲಿ ಅಂತಿಮ ನಮನಕ್ಕೆ ಅವಕಾಶ ಮಾಡಲಾಯಿತು. ಮೃತರ ಗೌರವಾರ್ಥ ಶಾಲೆಗೆ ರಜೆ ನೀಡಲಾಯಿತು. ಸುತ್ತಮತ್ತಲ ಶಾಲೆಗಳಾದ ಕಾಕೋಟುಪರಂಬು ಪ್ರೌಡಶಾಲೆ, ಅರಮೇರಿ ಎಸ್.ಎಂ.ಎಸ್ ವಿದ್ಯಾಸಂಸ್ಥೆ, ಮೂರ್ನಾಡು ವಿದ್ಯಾಸಂಸ್ಥೆಯ ಎನ್ಸಿ.ಸಿ ಘಟಕ ಗೌರವ ಸೂಚಿಸಲಾಯಿತು. ಗ್ರಾಮ ಪಂಚಾಯಿತಿ, ಕೆನರಾ ಬ್ಯಾಂಕ್, ವಿ.ಎಸ್.ಎಸ್,ಎನ್ ಬ್ಯಾಂಕ್ ಗಳ ಪಾರ್ಥಿವ ಶರೀರ ತೆಗೆಯುವವರೆಗೆ ಬಂದ್ ಮಾಡಿ ಗೌರವ ಸೂಚಿಸಿದರು.

ರಾಜ ನೀ ನನ್ನ ಬುಟ್ಟ್ಟ್ ಪೋಯಿಟಿಯಾ, ಎಣಿಕಪ್ಪಾ. ನಾ ಎಪ್ಪುಡಿ ಇರ್ಕನದ್, ಎಣಿಕಪ್ಪಾ. ತಿಂಗಳ ಸಂಬಳದಲ್ಲಿ ನಿಮ್ಮ ಕಷ್ಟಗಳನ್ನು ತೀರಿಸುತೇನೆ ಅಂತ ಹೇಳಿ ಮೂರು ತಿಂಗಳ ಹಿಂದೆ ಬಂದು ಹೋಗಿದ್ದ. ಎದ್ದೇಳು ಮಗನೇ ಒಂದು ಬಾರಿ ಏದ್ದೇಳು. ಅಂತ ತಾಯಿ ವತ್ಸಲಾ ತನ್ನ ದು:ಖವನ್ನು ಮಲೆಯಾಳ, ಕನ್ನಡ, ತಮಿಳ್ ಮಿಶ್ರಿತ ಭಾಷೆಯಲ್ಲಿ ರೋಧಿಸುತ್ತಿದ್ದ ದೃಶ್ಯ ಮನಕಲಕುತ್ತಿತ್ತು.

ಮೃತ ರಾಜೇಶ್ ಅಂತ್ಯ ಸಂಸ್ಕಾರಕ್ಕಾಗಿ ತಾಲೂಕು ಆಡಳಿತದಿಂದ ಐದು ಸಾವಿರ ಮತ್ತು ಸೇನೆಯಿಂದ ಐದು ಸಾವಿರ ನಗದನ್ನು ಸ್ವೀಕರಿಸುವಾಗ ಇದೇಂತ ಅನ್ಯಾಯ, ದಿನ ಮಾರು ಬಾರಿ ಪೋನ್ ಮಾಡುತ್ತಿದ್ದರು. ಮುಂದಿನ ತಿಂಗಳು 2ಕ್ಕೆ ಊರಿಗೆ ಬರುತೇನೆ ಚೆನೈಗೆ ಹೋಗಿ ಬರಲು ಟ್ರೈನ್ ಟಿಕೇಟ್ ಬುಕ್ ಮಾಡಿಸಿದ್ದರು ಸಾರ್, ದೇವರು ಎಂತಹ ಅನ್ಯಾಯ ಮಾಡಿದ್ದಾರೆ. ನೀವು ಎಷ್ಟೆ ಹಣ ಕೊಟ್ಟರು ನನ್ನ ಗಂಡ ಬರುತಾನೇಯೆ ಎಂದು ಪತ್ನಿ ಶಿಲ್ಪಾ ದು:ಖ ಸಹಿಸಲಾಗದೆ ಚೀರಾಡುತ್ತಿದ್ದರು.

ಮನೆಯ ಆಧಾರ ಸ್ಥಂಬವನ್ನೆ ಕಳೆದುಕೊಂಡ ಕುಟುಂಬವನ್ನು ಸಂತೈಸುವುದು ಜಿಲ್ಲಾಡಳಿತದ ಕೆಲಸವಾಗಿದೆ. ಅದರಲ್ಲೂ ಸೇನೆಯಲ್ಲಿ ಮೃತ ಪಟ್ಟ ಯೋದನ ಪಾರ್ಥಿವ ಶರೀರವನ್ನು ನಿರ್ಲಕ್ಷೀಸಿದ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಯ ಕಾರ್ಯ ವೈಖರಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಅಧಿಕಾರಿಗಳ ವಿರುದ್ದ ಮುಖ್ಯಮಂತ್ರಿಗಳಿಗೂ ದೂರು ನೀಡುತ್ತೇನೆ ಎಂದು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಹೇಳಿದರು.

See also  ಮಹಿಳಾ ಗೋಡೆ ಕಾರ್ಯಕ್ರಮ:  ರಾಜ್ಯದಲ್ಲಿ 40 ಲಕ್ಷ ಮಹಿಳೆಯರು ಭಾಗಿ

ಹಿಂದಿನ ವಾಜಪೇಯಿ ಸರ್ಕಾರ ಇದ್ದಾಗ ಸೇನೆಯ ಕರ್ತವ್ಯದಲ್ಲಿ ಯೋಧ ಮೃತ ಪಟ್ಟರೆ ಅವರ ಪಾರ್ಥಿವ ಶರೀರವವನ್ನು ಸಕಲ ಸರ್ಕಾರಿ ಗೌರವಗಳೋಂದಿಗೆ ಬರಮಾಡಿಕೊಂಡು ಅಂತ್ಯ ಸಂಸ್ಕಾರ ನಡೆಸುವವರೆಗೆ ಜಿಲ್ಲಾಡಳಿತ ಮುತುವರ್ಜಿ ವಹಿಸಬೇಕು ಎಂದು ಆದೇಶ ಹೊರಡಿಸಿದೆ. ಕಳೆದ ಮೂರು ದಿನಗಳ ಹಿಂದೆಯೇ ಜಿಲ್ಲೆಯ ಯೋಧ ಸೇನೆಯಲ್ಲಿ ಮೃತ ಪಟ್ಟಿರುವ ವಿಚಾರ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆಗೆ ಗೊತ್ತಿದೆ. ಸೌಜನ್ಯಕ್ಕಾದರೂ ಮೃತ ಕುಟುಂಬವನ್ನು ಸಂತೈಸಲಿಲ್ಲ. ಇಂತಹ ಅಧಿಕಾರಿಗಳ ವರ್ತನೆಯನ್ನು ಖಂಡಿಸುತ್ತೇನೆ. ಕಾಟಚಾರಕ್ಕಾಗಿ ಸರ್ಕಲ್ ಇನ್ಸ್ಪೆಕ್ಟರ್ನನ್ನು ಕಳುಹಿಸಿದ್ದಾರೆ. ಮೃತ ಕುಟುಂಬದವರು ಕಡು ಬಡವರಾಗಿರುವುದರಿಂದ ಮತ್ತು ಸೂರಿಲ್ಲದ ಕಾರಣ ನೀವೇಶನ ಹಾಗೂ ಮೃತರ ಪತ್ನಿ ಎಂ.ಎ ಬಿಎಡ್ ಆಗಿರುವುದರಿಂದ ಸರ್ಕಾರಿ ಕೆಲಸ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ವೀರ ಯೋಧನ ಪಾರ್ಥಿವ ಶರೀರವನ್ನು ಅಂತಿಮ ನಮನ ಸಲ್ಲಿಸಿದ ನಂತರ ಮಾತನಾಡಿದ ವಿಧಾನ ಪರೀಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಗೆ ಮಾತನಾಡಿ ಮಾನ್ಯ ಮುಖ್ಯ ಮಂತ್ರಿಗಳೊಂದಿಗೆ ಮಾತನಾಡಿ ರಾಜ್ಯ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಮತ್ತು ಮೃತರ ಪತ್ನಿಗೆ ಸರ್ಕಾರಿ ಉದ್ಯೋಗ ದೊಕಿಸಿಕೊಡಲು ಪ್ರಯತ್ನಿಸುವದಾಗಿ ತಿಳಿಸಿದರು.
      
    
 
 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು