ಚಿಕ್ಕಮಗಳೂರು: ಇತ್ತೀಚಿಗೆ ಚಿಕ್ಕಮಗಳೂರಿನ ದತ್ತಾ ಮಾಲ ಅಭಿಯಾನದಲ್ಲಿ ಶ್ರೀ ರಾಮಸೇನೆ ಸಂಘಟನೆಯಿಂದ ಆಚರಿಸಿದ ದತ್ತಾಮಾಲ ಕಾರ್ಯಕ್ರಮದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರ ಮೇಲೆ ಕೇಸ್ ದಾಖಲು ಮಾಡಲಾಗಿತ್ತು.
ಕೇಸ್ ಗಾಗಿ ಬಂದಂತಹ ಸಂದರ್ಭದಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ದತ್ತಾಮಾಲ ಕಾರ್ಯಕ್ರಮಕ್ಕೆ 70 ಜನ ನಾಗ ಸಾಧುಗಳು ಆಗಮಿಸಿದ್ದರು.ಇದರಲ್ಲಿ 4 ಜನ ನಾಗಸಾಧುಗಳಿಗೆ ಗುಹೆಯೊಳಗೆ ಪೂಜೆ ಮಾಡಲು ಅವಕಾಶ ಮಾಡಕೊಡಿ ಎಂದು ಕೇಳಿಕೊಂಡಿದ್ವಿ,ಅದರಲ್ಲಿ ಒಬ್ಬರಿಗೂ ಅವಕಾಶ ನೀಡಿರಲಿಲ್ಲ. ಆಗ ನಾವು ಓತ್ತಾಯ ಮಾಡಿದ್ವಿ, ಇದರಿಂದ ನಮ್ಮ ಮೇಲೆ ಕೇಸ್ ಹಾಕಿದ್ರು. ಕೋರ್ಟ್ ಆಜ್ಞೆ ಉಲ್ಲಂಘಟನೆ ಸರ್ಕಾರಿ ಕೆಲಸಕ್ಕೆ ಆಡಚಣೆ ಮಾಡಿದ್ವಿ ಎಂದು ಕೇಸ್ ದಾಖಲು ಮಾಡಿದ್ದು, ಇದನ್ನು ಖಂಡಿಸುತ್ತೇನೆ. ಅನಾವಶ್ಯಕವಾಗಿ ತಾವು ಬಚಾವ್ ಆಗಲು ನಮ್ಮನ್ನು ಬಲಿ ಪಶು ಮಾಡುತ್ತಿದ್ದಾರೆ.ಮತ್ತೇ ನಾನು ಇದನ್ನು ಸ್ವಾಗತ ಮಾಡುತ್ತಿದ್ದು, ಚಿಕ್ಕಮಗಳೂರಿನಲ್ಲಿ ನಾವು ಸಂಘಟನೆ ಬಲ ಪಡಿಸಬೇಕಾಗಿದೆ.ನಮ್ಮ ಕೇಸ್ ಇದ್ದ ದಿನಾಂಕದಂದೂ ಚಿಕ್ಕಮಗಳೂರಿಗೆ ಬಂದೂ ಕೋರ್ಟ್ ಗೆ ಬರಲು ಅದೇ ದಿನ ಸಂಘಟನೆ ಮಾಡಲು ಅನುಕೂಲ ಆಗುತ್ತದೆ.ಇದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
ನಂತರ ಮೌಡ್ಯ ತಡೆಯನ್ನು ಕುರಿತು ಮಾತನಾಡಿದ ಪ್ರಮೋದ್ ಮುತಾಲಿಕ್ ಯಾವ ಪಟ್ಟಬಂದ್ರ ಹಿತಾಸಕ್ತಿಯಿಂದ ಮೂಡನಂಭಿಕೆ ಮೌಢ್ಯವನ್ನು ತಡೆಯಲು ಸಾಧ್ಯವಿಲ್ಲ. ಕಾಂಗ್ರೇಸ್ ಪಕ್ಷದಲ್ಲಿ ಮೌಢ್ಯದ ನಂಬಿಕೆ ಇರೋರು ಸಾಕಷ್ಟು ಜನ ಇದ್ದಾರೆ.ಇದರಲ್ಲಿ ಮುಖ್ಯಮಂತ್ರಿಗಳು ಸೇರಿದ್ದಾರೆ. ನಿಷೇಧ ಮಾಡಲು ಹೊರಟಿರೋದು ಮೂರ್ಖತನ, ಕಾನೂನಿನ ಮೂಲಕ ರದ್ದು ಮಾಡಲು ಹೋರಟಿರೋದು ತಪ್ಪು,ಶಿಕ್ಷಣದ ಮೂಲಕ ಸರಿಮಾಡಿದ್ರೇ ಒಳ್ಳೆಯದಾಗುತ್ತೆ. ಎಂದೂ ಚಿಕ್ಕಮಗಳೂರಿನಲ್ಲಿ ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.