News Kannada
Wednesday, February 01 2023

ಕರ್ನಾಟಕ

ಐತಿಹಾಸಿಕ ವಿಷ್ಣು ಸಮುದ್ರ ಕೆರೆ ಏರಿಯಲ್ಲಿ ನೀರಿನ ಒರತೆ: ಯಳನಾಡು ಸ್ವಾಮಿಗಳ ಭೇಟಿ

Photo Credit :

ಐತಿಹಾಸಿಕ ವಿಷ್ಣು ಸಮುದ್ರ ಕೆರೆ ಏರಿಯಲ್ಲಿ ನೀರಿನ ಒರತೆ: ಯಳನಾಡು ಸ್ವಾಮಿಗಳ ಭೇಟಿ

ಕಡೂರು: ತಾಲ್ಲೂಕಿನ ಹೇಮಗಿರಿಯ ತಪ್ಪಲಿನ ಐತಿಹಾಸಿಕ ವಿಷ್ಣು ಸಮುದ್ರ ಕೆರೆ ಏರಿಯಲ್ಲಿ ನೀರಿನ ಒರತೆ ಕಾಣಿಸಿಕೊಂಡಿರುವುದು ಜನತೆಯನ್ನು ಅಚ್ಚರಿಗೊಳಿಸಿ ಸಾವಿರಾರು ಜನರು ದಿನ ನಿತ್ಯ ಭೇಟಿ ನೀಡುತ್ತಿದ್ದರ ಹಿನ್ನೆಲೆಯಲ್ಲಿ ಯಳನಾಡು ಸಂಸ್ಥಾನದ ಜ್ಞಾನ ಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮಿಗಳು ಸ್ಥಳಕ್ಕೆ ಭೇಟಿ ನೀಡಿ ಹರಿಯುತ್ತಿರುವ ಗಂಗೆಯ ಸ್ಥಳವನ್ನು ವೀಕ್ಷಿಸಿದರು.

Fresh water spring in rough terrain of Kadur taluk mesmerizes many-1ಹೇಮಗಿರಿ ಬೆಟ್ಟದ ಮಲ್ಲಿಕಾರ್ಜುನ ಸ್ವಾಮಿ ದೇಗುಲದ ತಪ್ಪಲಿನಲ್ಲಿ ಕಳೆದ 20 ದಿನಗಳಿಂದ ಕೆರೆ ಏರಿಯಿಂದ ನೀರು ಒಸರುತ್ತಿರುವುದನ್ನು ಕಂಡ ಹಲವರು ಅಚ್ಚರಿಯಿಂದ ಒಂದೆರಡು ಕಡೆ ಬಗೆದು ನೋಡಿದ್ದಾರೆ. ಇಡೀ ಪ್ರದೇಶದಲ್ಲಿ ಸುಮಾರು ಹತ್ತಾರು ಕಡೆ ನೆಲವನ್ನು ಸ್ವಲ್ಪ ಬಗೆದರೂ ನೀರು ಉಕ್ಕುತ್ತಿರುವುದನ್ನು ಕಂಡು ಆಶ್ಚರ್ಯಕ್ಕೊಳಗಾಗಿದ್ದಾರೆ. ವಿಷಯ ಹರಡಿ ನೂರಾರು ಜನರು ಹೇಮಗಿರಿ ಕೆರೆಗೆ ಭೇಟಿ ನೀಡಿ ನೆಲದಲ್ಲಿ ನೀರು ಉಕ್ಕುತ್ತಿರುವುದನ್ನುಕಂಡು ವಿಸ್ಮಯಗೊಂಡಿದ್ದಾರೆ. ಹಲವರು ಅಲ್ಲಲ್ಲೆ ಚಿಕ್ಕ ಗುಂಡಿ ತೆಗೆದು ನೀರು ಉಕ್ಕುತ್ತಿರುವುದನ್ನು ಕಂಡು ಸಂತಸಗೊಂಡು ಗಂಗಾ ಪೂಜೆ ನೆರವೇರಿಸಿದ್ದಾರೆ.

ಹಲವರು ಬಾಟಲಿಗಳಲ್ಲಿ ನೀರು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿತು. ಸತತ ಬರಗಾಲದಿಂದ ಕಂಗೆಟ್ಟಿರುವ ಕಡೂರು ಪ್ರದೇಶದ ಜನರಿಗೆ ಈ ವಿಚಿತ್ರ ವಿದ್ಯಾಮಾನ ಮುಂದಿನ ದಿನಗಳಲ್ಲಿ ಒಳ್ಳೆಯ ಸಮೃದ್ಧ ಮಳೆಯಾಗುವ ಸೂಚನೆ ಎಂಬ ನಂಬಿಕೆ ಮೂಡಿಸಿದೆ. ಅಂತರ್ಜಲವಿಲ್ಲದೆ ಸಾವಿರ ಅಡಿ ಕೊರೆದರೂ ನೀರು ಸಿಗುವುದು ಅನುಮಾನವಾಗಿದೆ. ಅಂತಹ ಸಮಯದಲ್ಲಿ ಇಷ್ಟು ಮೇಲ್ಮಟ್ಟದಲ್ಲಿ ನೀರಿನ ಒರತೆ ಕಂಡು ಬಂದಿರುವುದು ಒಂದು ರೀತಿ ದೇವರ ವರ ಮತ್ತು ಪವಾಡವೇ ಸರಿ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

See also  ಹೊಳೆಗೆ ಉರುಳಿ ಬಿದ್ದ ಕಾರು: ಯುವಕ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು