News Kannada
Tuesday, September 27 2022

ಕರ್ನಾಟಕ

ಸತತ 17 ದಿನಗಳ ಪ್ರತಿಭಟನೆಯ ಬಳಿಕ ಶಾಂತಿಗೆ ಜಾರಿದ ದಿಡ್ಡಳ್ಳಿ ! - 1 min read

Photo Credit :

ಸತತ 17 ದಿನಗಳ ಪ್ರತಿಭಟನೆಯ ಬಳಿಕ ಶಾಂತಿಗೆ ಜಾರಿದ ದಿಡ್ಡಳ್ಳಿ !

ಸಿದ್ದಾಪುರ: ಸತತ 17 ದಿನಗಳ ಪ್ರತಿಭಟನೆಯ ಬಳಿಕ ಇದೀಗ ಆದಿವಾಸಿಗಳು ಶ್ರಾಂತಿಗೆ ಜಾರಿದ್ದು, ದಿಡ್ಡಳ್ಳಿಯಲ್ಲಿ ಯಾವುದೇ ಪ್ರತಿಭಟನೆ, ದಿಕ್ಕಾರ ಘೋಷಣೆಗಳಿಲ್ಲದೆ ಬಿಕೋ ಎನ್ನುತ್ತಿದೆ.

ಮಾಲ್ದಾರೆ ಸಮೀಪದ ದಿಡ್ಡಳ್ಳಿ ಅರಣ್ಯ ಪ್ರದೇಶದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದ ಆದಿವಾಸಿಗಳನ್ನು ಅರಣ್ಯ ಇಲಾಖೆ ಬೆಳ್ಳಂಬೆಳಗೆ ತೆರವುಗೊಳಿಸಿ, ಗುಡಿಸಲನ್ನು ಕೆಡವಿತ್ತು. ಈ ಸಂದರ್ಭ ಕೆಲವು ಆದಿವಾಸಿಗಳು ಬೆತ್ತಲೆ ಪ್ರತಿಭಟನೆಯನ್ನು ನಡೆಸಿದ್ದು, ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಬಳಿಕ ಸತತ 17 ದಿನಗಳ ಕಾಲ ಪ್ರತಿಭಟನೆ ನಡೆಸಿದ ಆದಿವಾಸಿಗಳು ಸಮಾಜ ಕಲ್ಯಾಣ ಸಚಿವ ಆಂಜನೇಯ ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಪರಿಹಾರ ನೀಡುವ ಭರವಸೆ ನೀಡಿದ್ದು, ತಾತ್ಕಾಲಿಕ ವ್ಯವಸ್ಥೆಗೆ 1 ಕೋಟಿ ರೂ ಹಣ ಬಿಡುಗಡೆ ಮಾಡುವ ಭರವಸೆಯ ಮೇರೆಗೆ ಆದಿವಾಸಿಗಳು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದುಕೊಂಡರು.

ಕಳೆದ 2 ವಾರಗಳಿಂದ ದಿಡ್ಡಳ್ಳಿಯಲ್ಲಿ ಪ್ರತಿಭಟನೆ, ದಿಕ್ಕಾರ ಘೋಷಣೆ ಹಾಗೂ ಹೋರಾಟ ಗೀತೆಗಳು ಮೊಳಗಿದ್ದು, ಇದೀಗ ಪ್ರತಿಭಟನೆ ಹಿಂಪಡೆದ ಹಿನ್ನೆಲೆಯಲ್ಲಿ ಯಾವುದೇ ಘೋಷಣೆಗಳು ಇಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಸಮಾನ್ಯವಾಗಿತ್ತು. ಬಹುತೇಕ ಆದಿವಾಸಿಗಳು ತಮ್ಮ ಆಹಾರದ ಬಳಿಕ ನಿದ್ರೆಗೆ ಜಾರಿದ್ದು, ಹಲವು ದಿನದ ಪ್ರತಿಭಟನೆಗಳ ಬಳಿಕ ವಿಶ್ರಾಂತಿ ಪಡೆದುಕೊಂಡರು. ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದು, ಕೆಲವರು ತಮ್ಮ ಗುಡಿಸಲನ್ನು ಸರಿಪಡಿಸುತ್ತಿದ್ದರು. ಮತ್ತೊಂದೆಡೆ ಪ್ರತಿಭಟನೆಗಾಗಿ ಸಿದ್ದಪಡಿಸಲಾಗಿದ್ದ ದಿಕ್ಕಾರ ಘೋಷಣೆ ಬರೆದ ಫಲಕಗಳ ರಾಶಿ ಒಂದೆಡೆ ಬಿದ್ದಿತ್ತು.

ದಿಡ್ಡಳ್ಳಿ ಆಶ್ರಮ ಶಾಲೆಯಲ್ಲಿ ಒಟ್ಟು 105 ಮಕ್ಕಳು ವ್ಯಾಸಾಂಗ ಮಾಡುತ್ತಿದ್ದು, ಪ್ರತಿಭಟನೆಯ ಹಿನ್ನೆಯಲ್ಲಿ ಬಹುತೇಕ ಮಕ್ಕಳು ಶಾಲೆ ಬರುತ್ತಿರಲಿಲ್ಲ. ಪ್ರತಿಭಟನೆ ಮುಗಿದರೂ ಒಟ್ಟು 105 ಮಕ್ಕಳಲ್ಲಿ ಕೇವಲ 25 ಮಕ್ಕಳು ಮಾತ್ರ ಶಾಲೆಗೆ ಹಾಜರಾಗಿದ್ದಾರೆ.  ದಿಡ್ಡಳ್ಳಿ ಆಶ್ರಮ ಶಾಲೆಯ ಸುತ್ತಮುತ್ತಲ ಪ್ರದೇಶದಲ್ಲಿ ಹಾಗೂ ಮಾಲ್ದಾರೆ ಪೊಲೀಸ್ ತಪಾಸಣಾ ಕೇಂದ್ರದ ಬಳಿ ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಶೌಚಾಲಯ, ಆಹಾರ ವ್ಯವಸ್ಥೆ: ದಿಡ್ಡಳ್ಳಿ ನಿರಾಶ್ರಿತರಿಗೆ ಮೂಲಭೂತ ಸೌಕರ್ಯ ಹಾಗೂ ಆಹಾರ ವಿತರಿಸಲು ಸಮಾಜ ಕಲ್ಯಾಣ ಸಚಿವ ಆಂಜನೇಯ ಆದೇಶ ನೀಡಿದ್ದು, ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಿರಾಶ್ರಿತರಿಗೆ ದಿನದ ಮೂರು ಹೊತ್ತು ಆಹಾರ ವಿತರಿಸಲಾಗುತ್ತಿದೆ. ಪ್ರತಿ ದಿನ  ಸುಮಾರು 750 ಮಂದಿಗೆ ಆಹಾರ ತಯಾರಿಸಲಾಗುತ್ತಿದ್ದು, ಮದ್ಯಾಹ್ನ ಹಾಗೂ ರಾತ್ರಿ ವೇಳೆಯಲ್ಲಿ ಊಟ ನೀಡಲಾಗುತ್ತಿದೆ.

ಮಾತ್ರವಲ್ಲದೇ ಆಶ್ರಮ ಶಾಲೆಯ ತಡೆಗೋಡೆಯ ಬದಿಯಲ್ಲಿ 5 ನೂತನ ಶೌಚಾಲಯ ನಿರ್ಮಿಸಲಾಗಿದ್ದು, ಪುರುಷರು ಹಾಗೂ ಮಹಿಳೆಯರಿಗೆ ಒಂದೇ ಪ್ರದೇಶದಲ್ಲಿ ಶೌಚಾಲಯ ನಿರ್ಮಿಸಿದ್ದು, ಇದರಿಂದ ಮಹಿಳೆಯರಿಗೆ ಕೊಂಚ ತೊಂದರೆಯುಂಟಾಗುತ್ತಿದೆ ಎಂದು ಆದಿವಾಸಿಗಳು ದೂರಿದ್ದಾರೆ. ಕುಡಿಯುವ ನೀರಿನ ನಲ್ಲಿಯ ವ್ಯವಸ್ಥೆ ಮಾಡಲಾಗಿದ್ದು, ಆದಿವಾಸಿಗಳು ವಾಸವಾಗಿರುವ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ.

ವಿತರಿಸದ ಪ್ಲಾಸ್ಟಿಕ್ ಹೊದಿಕೆ: ಆದಿವಾಸಿಗಳಿಗೆ ಮಳೆ ಹಾಗೂ ಚಳಿಯಲ್ಲಿ ಪ್ಲಾಸ್ಟಿಕ್ ಹೊದಿಕೆ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದು, ಸಮಾಜ ಕಲ್ಯಾಣ ಇಲಾಖೆ ಇದಕ್ಕೆ ಸ್ಪಂದಿಸಿರಲಿಲ್ಲ. ಬಳಿಕ ಸಚಿವರ ಮುಂದೆಯೇ ಸಮಾಜ ಕಲ್ಯಾಣ ಇಲಾಖಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಆದಿವಾಸಿಗಳು ಅಧಿಕಾರಿಯನ್ನು ಎತ್ತಂಗಡಿ ಮಾಡಬೇಕೆಂದು ಒತ್ತಾಯಸಿದ್ದರು. ಪ್ರತಿಭಟನೆ ಹಿಂಪಡೆದ ಬಳಿಕ ಈವರೆಗೂ ಪ್ಲಾಸ್ಟಿಕ್ ಹೊದಿಕೆ ನೀಡಲಾಗಿಲ್ಲ. ಆದಿವಾಸಿಗಳು ತಮ್ಮ ಕುಟುಂಬದ ಮಾಹಿತಿಯ ಪ್ರತಿಗಳನ್ನು ನೀಡಬೇಕು ಎಂದು ತಿಳಿಸಿದ್ದರೂ ನೀಡಲಿಲ್ಲ. ಹೀಗಾಗಿ ಪ್ಲಾಸ್ಟಿಕ್ ಹೊದಿಕೆಯನ್ನು ನೀಡಿಲ್ಲ. ಒಟ್ಟು 577 ಪ್ಲಾಸ್ಟಿಕ್ ಹೊದಿಗೆ ಖರೀಧಿಸಲಾಗಿದ್ದು, ಹೆಸರು ನೀಡಿದ ಬಳಿಕ ನೀಡಲಾಗುವುದು ಎಂದು ಇಲಾಖೆಯ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.

See also  ಮಡಿಕೇರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ದಿನಾಚರಣೆ

ನಕ್ಸಲ್ ನಿಗ್ರಹ ದಳದಿಂದ ಗಸ್ತು: ದಿಡ್ಡಳ್ಳಿಯ ಪ್ರತಿಭಟನೆಯಲ್ಲಿ ನಕ್ಸಲರು ಭಾಗವಹಿಸುತ್ತಿದ್ದಾರೆ ಎಂದು ಕೆಲ ಸಂಘಟನೆ ಹಾಗೂ ಜನಪ್ರತಿನಿಧಿಗಳು ಆರೋಪಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ನಿಷೇದಾಜ್ಞೆ ಜಾರಿಮಾಡಿದ್ದು, ದಿಡ್ಡಳ್ಳಿಯಲ್ಲಿ ನಕ್ಸಲ್ ನಿಗ್ರಹ ದಳ ಬೀಡುಬಿಟ್ಟಿತ್ತು. ಆದರೇ ದಕ್ಷಿಣ ವಲಯ ಪೊಲೀಸ್ ಮಹಾ ನಿರ್ದೇಶಕ ಬಿ.ಕೆ ಸಿಂಗ್ ಮಾದ್ಯಮ ಹೇಳಿಕೆಯಲ್ಲಿ ದಿಡ್ಡಳ್ಳಿಯಲ್ಲಿ ಯಾವುದೇ ನಕ್ಸಲರು ಇಲ್ಲ ಎಂದು ಹೇಳಿದ್ದು, ಇಂದು ಕೂಡ ನಕ್ಸಲ್ ನಿಗ್ರಹ ದಳದ 2 ವಾಹನ ದಿಡ್ಡಳ್ಳಿಯಲ್ಲಿ ಗಸ್ತು ತಿರುಗುತ್ತಿದ್ದ ದೃಶ್ಯ ಕಂಡುಬಂತು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು