ಮಡಿಕೇರಿ : ದಿಡ್ಡಳ್ಳಿಯಲ್ಲಿ ಆದಿವಾಸಿಗಳಿಗೆ ವಂಚಿಸಿ ಹಣ ವಸೂಲಾತಿ ಮಾಡಿರುವ ಪ್ರಕರಣಕ್ಕೆ ಸಂಬಂದಿಸಿದಂತೆ ಸೂಕ್ತ ತನಿಖೆಯಾಗಬೇಕು, ಸರ್ಕಾರ ನೀಡಿರುವ 1 ಕೋಟಿ ರು. ಅನುದಾನ ನಿಜವಾದ ಆದಿವಾಸಿಗಳ ಕಲ್ಯಾಣ ಯೋಜನೆಗಳಿಗೆ ಬಳಕೆಯಾಗಬೇಕು, ಹೊರಗಿನ ಸಂಘಟನೆಗಳು ದಿಡ್ಡಳ್ಳಿಯಲ್ಲಿ ನಿರಾಶ್ರಿತರಿಗೆ ತಪ್ಪು ಮಾರ್ಗದರ್ಶನ ನೀಡುತ್ತಾ ಬೆಳೆಗಾರರ ವಿರುದ್ದ ಹೋರಾಟಕ್ಕೆ ಎತ್ತಿ ಕಟ್ಟುತ್ತಿರುವ ಹಿನ್ನಲೆಯಲ್ಲಿ ಪರಿಸ್ಥಿತಿ ಸುಧಾರಿಸುವವರೆಗೂ ದಿಡ್ಡಳ್ಳಿಯಲ್ಲಿ ಜಿಲ್ಲಾಡಳಿತ ಸೆ.144 ನ್ನು ಮುಂದುವರೆಸಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ.
ಸಣ್ಣ ಬೆಳೆಗಾರರ ಸಂಘ, ಮಾಲ್ದಾರೆ ಗ್ರಾ.ಪಂ. ಆಯೋಜಿಸಿದ್ದ ಆದಿವಾಸಿಗಳು, ಕಾಫಿ ಬೆಳೆಗಾರರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಮಾತನಾಡಿದ ಆದಿವಾಸಿ ಸಂಘಟನೆಯ ನಾಯಕಿ, ಗ್ರಾ.ಪಂ. ಸದಸ್ಯೆ ಇಂದಿರಾ, ಬೇರೆ ಬೇರೆ ಕಡೆಗಳಿಂದ ದಿಡ್ಡಳ್ಳಿಗೆ ಬಂದು ತಾವೂ ಆದಿವಾಸಿಗಳು ಎಂದು ಸುಳ್ಳು ಹೇಳುತ್ತಾ ಸರ್ಕಾರದಿಂದ ಸೌಕರ್ಯ ಪಡೆಯುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಮಾಲ್ದಾರೆ ವ್ಯಾಪ್ತಿಯ ಮೂಲ ಆದಿವಾಸಿಗಳು ಅವಕಾಶ ನೀಡುವುದಿಲ್ಲ. ದಿಡ್ಡಳ್ಳಿ ಮಾತ್ರವಲ್ಲ ಜಿಲ್ಲೆಯಾದ್ಯಂತ ಹಲವಾರು ವರ್ಷಗಳಿಂದಲೂ ನಿರಾಶ್ರಿತರಾಗಿಯೇ ಇರುವ ಎಲ್ಲಾ ಆದಿವಾಸಿಗಳಿಗೆ ಸಕಾ9ರ ಕೂಡಲೇ ಸೂರು ಮತ್ತು ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು.
ಅಕ್ರಮವಾಗಿ ಮೀಸಲು ಅರಣ್ಯದಲ್ಲಿ ಬಂದು ನೆಲಸಿದ್ದಲ್ಲದೇ ಇದು ತಮ್ಮದೇ ಕಾಡು ಎಂದು ಹೇಳುತ್ತಿದ್ದಾರೆ. ಕಾಫಿ ಬೆಳೆಗಾರರು ಮತ್ತು ತೋಟ ಕಾಮಿ9ಕರು ಉತ್ತಮ ಸೌಹಾರ್ದ ಸಂಬಂಧ ಹೊಂದಿದ್ದರು. ಈ ಸಂಬಂಧವನ್ನೇ ಕೆಡಿಸಲಾಗುತ್ತಿದೆ. ಹೊರಗಿನಿಂದ ಬಂದ ಸಂಘಟನೆಗಳು ತೋಟ ಮಾಲೀಕರ ವಿರುದ್ದ ಆದಿವಾಸಿಗಳನ್ನು ಹೋರಾಟಕ್ಕೆ ಎತ್ತಿಕಟ್ಟುತ್ತಿದೆ. ಆದರೆ ಮೂಲ ಆದಿವಾಸಿಗಳಾದ ನಾವು ಇದನ್ನು ವಿರೋಧಿಸುತ್ತೇವೆ ಎಂದು ಇಂದಿರಾ ಹೇಳಿದರು. ಮಾಲೀಕರೊಂದಿಗೆ ಸಂಬಂಧ ಹಾಳಾಗುತ್ತಿರುವ ಕಾರಣದಿಂದಲೇ ಈಗಾಗಲೇ ಕೆಲವು ತೋಟಗಳಲ್ಲಿ ಆದಿವಾಸಿಗಳಿಗೆ ಕೂಲಿ ಕೆಲಸವನ್ನೇ ನೀಡುತ್ತಿಲ್ಲ. ಹೋರಾಟಕ್ಕೆ ಪ್ರೇರೇಪಿಸಿದ ಸಂಘಟನೆಗಳ ಉದ್ದೇಶ ಕಾರ್ಮಿಕರನ್ನು ಬೀದಿ ಪಾಲು ಮಾಡುವುದೇ ಎಂದೂ ಇಂದಿರಾ ಪ್ರಶ್ನಿಸಿದರು. ಈ ರೀತಿಯ ಒಡಕುಟುಂಬ ಮಾಡುತ್ತಿರುವ ಸಂಘಟನೆಗಳ ವಿರುದ್ದ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳುವಂತೆಯೂ ಇಂದಿರಾ ಆದಿವಾಸಿಗಳ ಪರವಾಗಿ ಒತ್ತಾಯಿಸಿದರು.
6 ತಿಂಗಳ ಹಿಂದೆ ಬಂದು ದಿಡ್ಡಳ್ಳಿಯಲ್ಲಿ ಅಕ್ರಮವಾಗಿ ಕಾಡು ಅತಿಕ್ರಮಿಸಿಕೊಂಡು ನೆಲೆಸಿದವರ ಬಗ್ಗೆ ಅನುಕಂಪ ತೋರಿ ಎಲ್ಲಾ ಸೌಲಭ್ಯ ಕೊಡುತ್ತಿರುವ ಸರ್ಕಾರಕ್ಕೆ ಮೂಲ ಆದಿವಾಸಿಗಳನ್ನು ಈವರೆಗೂ ಕಾಣಲಿಲ್ಲವೇ. ಮೂಲ ಆದಿವಾಸಿಗಳಿಗೆ ಸ್ಪಂದಿಸುವ ಇಚ್ಚೆ ಸಕಾ9ರಕ್ಕಿರಲಿಲ್ಲವೇ ಎಂದೂ ಇಂದಿರಾ ಪ್ರಶ್ನಿಸಿದರು.
ಬೆತ್ತಲೆ ಪ್ರತಿಭಟನೆ ಮಾಡುವ ಮೂಲಕ ಮುತ್ತಮ್ಮ ಮಾನವ ಹಕ್ಕು ಉಲ್ಲಂಘಿಸಿದ್ದಾರೆ. ಹೀಗಾಗಿ ಮುತ್ತಮ್ಮ ವಿರುದ್ದ ಕೂಡಲೇ ಕ್ರಮ ಕೈಗೊಳ್ಳುವಂತೆಯೂ ಇಂದಿರಾ ಒತ್ತಾಯಿಸಿದರು. ಬೆತ್ತಲೆ ಪ್ರತಿಭಟನೆ ಮಾಡಿದರೆ ಮಾತ್ರ ಸಲವತ್ತು ಸಿಗುತ್ತದೆ ಎಂಬ ನಿರ್ಧಾರ ಸಕಾ9ರದ್ದೇ ಎಂದೂ ಇಂದಿರಾ ಕಟುವಾಗಿ ಪ್ರಶ್ನಿಸಿದರು.
ವಿರಾಜಪೇಟೆ ತಾ.ಪಂ. ಸದಸ್ಯೆ, ಚಿನ್ನಮ್ಮ ಮಾತನಾಡಿ, ನಿರಾಶ್ರಿತರ ನಾಯಕರೆನಿಸಿಕೊಂಡು ಪ್ರತಿಭಟನೆ ನಡೆಸುತ್ತಾ ತೋಟ ಮಾಲೀಕರ ವಿರುದ್ದ ಕಾರ್ಮಿಕರನ್ನು ಎತ್ತಿಕಟ್ಟುತ್ತಿರುವ ಮುತ್ತಮ್ಮ ಮತ್ತು ಅಪ್ಪಾಜಿ ಎಂಬ ಅಕ್ಕ, ತಮ್ಮ ಅನೇಕರಿಂದ ದಿಡ್ಡಳ್ಳಿಯಲ್ಲಿ ನಿವೇಶನ ಕೊಡಿಸುವುದಾಗಿ ನಂಬಿಸಿ ಸಾವಿರಾರು ರುಪಾಯಿ ಹಣ ಪಡೆದಿದ್ದಾರೆ. ಸೂರಿನಾಸೆಯಲ್ಲಿ ತಲಾ ಕುಟುಂಬಗಳು 5 ಸಾವಿರ ರುಪಾಯಿ ನೀಡಿದೆ. ಕೂಡಲೇ ಈ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಇವರ ಸುಳ್ಳು ಹೋರಾಟ ನಂಬಿಕೊಂಡು ರಾಜಕಾರಣಿಗಳು ತಂಡೋಪತಂಡವಾಗಿ ದಿಡ್ಡಳ್ಳಿಗೆ ಬಂದಿದ್ದಾರೆ. ಸಿದ್ದರಾಮಯ್ಯ ಮತ್ತು ಮೋದಿ ಬರೋದು ಮಾತ್ರ ಬಾಕಿಯಿದೆ ಎಂದೂ ಚಿನ್ನಮ್ಮ ವ್ಯಂಗ್ಯವಾಗಿ ಹೇಳಿದರು.
ಕೊಡಗಿನ ಎಲ್ಲಾ ಮೂಲನಿವಾಸಿ ಆದಿವಾಸಿಗಳಿಗೂ ಸರ್ಕಾರ ತಲಾ 3.50 ಸೆಂಟ್ ನಿವೇಶನ ನೀಡಬೇಕು. ದಿಡ್ಡಳ್ಳಿಯಲ್ಲಿ ಅಕ್ರಮವಾಗಿ ಅರಣ್ಯ ಜಾಗ ಅತಿಕ್ರಮಣ ಮಾಡಿದವರಿಗೆ ಮಾತ್ರ ನಿವೇಶನ ನೀಡುವುದನ್ನು ತಾವೆಲ್ಲಾ ವಿರೋಧಿಸುವುದಾಗಿ ಹೇಳಿದ ಚಿನ್ನಮ್ಮ, ಯಾವ ಖಾಸಗಿ ತೋಟದವರು ಸರ್ಕಾರಿ ಜಾಗ ಅತಿಕ್ರಮಣ ಮಾಡಿದ್ದಾರೆ ಎಂಬುದನ್ನು ಅಪ್ಪಾಜಿ ತೋರಿಸಲಿ. ಅಪ್ಪಾಜಿ ಯಾವೆಲ್ಲಾ ರೀತಿ ಅಕ್ರಮ ಮಾಡಿದ್ದಾರೆ ಎಂಬುದನ್ನು ತಾವು ಬಹಿರಂಗಪಡಿಸುವುದಾಗಿ ಚಿನ್ನಮ್ಮ ಹೇಳಿದರು.
ಆದಿವಾಸಿ ಮಹಿಳೆ ಸರಸು ಮಾತನಾಡಿ, ಮೂಲನಿವಾಸಿಗಳ ನೋವನ್ನು ಕೂಡ ಸರ್ಕಾರ ಗಮನಿಸಲೇಬೇಕು. ಅಪ್ಪಾಜಿ – ಮುತ್ತಮ್ಮ ಮುಗ್ದ ಜನರಿಂದ ಹಣ ವಸೂಲಾತಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಯಾಗಲಿ ಎಂದು ಒತ್ತಾಯಿಸಿದರು. ಮಾಲ್ದಾರೆ ಗ್ರಾ.ಪಂ.ನಲ್ಲಿ ಹಲವಾರು ವಷ9ಗಳಿಂದ 600 ಕ್ಕೂ ಅಧಿಕ ಕುಟುಂಬಗಳಿಗೆ ಅರಣ್ಯ ಹಕ್ಕು ಪತ್ರ ನೀಡಲು ಬಾಕಿಯಿದೆ. ಈ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಿ. ಅಲ್ಲಿಯವರೆಗೂ ಸಕಾ9ರ ದಿಡ್ಡಳ್ಳಿ ನಿರಾಶ್ರಿತರಿಗೆ ನೀಡಿರುವ 1 ಕೋಟಿ ರು. ಅನುದಾನ ಬಳಕೆಯಾಗಬಾರದು ಎಂದೂ ಸರಸು ಒತ್ತಾಯಿಸಿದರು.
ಮಾಲ್ದಾರೆ ಗ್ರಾ.ಪಂ. ಮಾಜಿ ಸದಸ್ಯ ಬಿಜು ಬಿದ್ದಪ್ಪ ಮಾತನಾಡಿ, ದಿಡ್ಡಳ್ಳಿಯಲ್ಲಿ ಅರಣ್ಯ ಮಾಫಿಯಾ ತಲೆಎತ್ತಿದೆ. ಬೆತ್ತಲೆಯಾಗಿ ಓಡಾಡಿದರೆ ಅಂಥವರಿಗೆ ಮಾನಸಿಕ ಅಸ್ವಸ್ಥರು ಎನ್ನುತ್ತಾರೆ. ಹೀಗಾಗಿ ಬೆತ್ತಲೆ ಓಡಿದ ಮುತ್ತಮ್ಮಳಿಗೆ ಸೂಕ್ತ ಚಿಕಿತ್ಸೆ ನೀಡಿ ಎಂದು ಒತ್ತಾಯಿಸಿದರಲ್ಲದೇ, ಆದಿವಾಸಿಗಳ ಹೆಸರಿನಲ್ಲಿ ಬೇರೆಯವರು ದಿಡ್ಡಳ್ಳಿಗೆ ಬಂದು ಅರಣ್ಯ ಜಾಗ ಅತಿಕ್ರಮಣ ಮಾಡಿಕೊಳ್ಳುತ್ತಿದ್ದಾರೆ. ಇಂಥವರ ವಿರುದ್ದ ಸಕಾ9ರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ತೋಟ ಮಾಲೀಕರ ವಿರುದ್ದ ಜೀತ, ಕಾರ್ಮಿಕರಿಗೆ ಕಿರುಕುಳ ಎಂಬಿತ್ಯಾದಿ ಆರೋಪ ಮಾಡಿದವರಿಗೆ ಜೀತದ ಅಥ9ವೇ ಗೊತ್ತಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದ ಬಿಜುಬಿದ್ದಪ್ಪ, ತೋಟ ಮಾಲೀಕರು ಕಾಮಿ9ಕರಿಗೆ ಕನಿಷ್ಟ ವೇತನಕ್ಕಿಂತ ಹೆಚ್ಚೇ ಸಂಬಳ ನೀಡುತ್ತಿದ್ದಾರೆ. ಹೀಗಿದ್ದರೂ ಅನಗತ್ಯವಾಗಿ ತೋಟ ಮಾಲೀಕರ ವಿರುದ್ದ ಆರೋಪ ಮಾಡಿರುವುದು ಸರಿಯಲ್ಲ ಎಂದರಲ್ಲದೇ ಆದಿವಾಸಿಗಳ ಬಗ್ಗೆ ಅಷ್ಟೊಂದು ಕಾಳಜಿಯಿದ್ದರೆ ಅಪ್ಪಾಜಿಯೇ ತನ್ನ ಸ್ವಂತ ಜಾಗದಲ್ಲಿ ಎಲ್ಲರಿಗೂ ಜಮೀನು ನೀಡಲಿ. ಹೇಗಿದ್ದರೂ ಅಪ್ಪಾಜಿ ಸರ್ಕಾರದಿಂದ ನಿಗಧಿಗಿಂತ ಹೆಚ್ಚಿನ ಜಮೀನನ್ನು ಪಡೆದಿದ್ದಾರೆ. ಈ ಬಗ್ಗೆಯೂ ತನಿಖೆಯಾಗಲಿ ಎಂದು ಒತ್ತಾಯಿಸಿದರು.
ತಟ್ಟಳ್ಳಿ ಹಾಡಿ ನಿವಾಸಿ ಗೀತಾ ಮಾತನಾಡಿ, ತಲತಲಾಂತರಗಳಿಂದ ನಾವೆಲ್ಲಾ ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೇವೆ. ಹೀಗಿರುವಾಗ ಕಾರ್ಮಿಕರು ಮತ್ತು ಮಾಲೀಕರ ನಡುವಿನ ಉತ್ತಮ ಬಾಂಧವ್ಯಕ್ಕೆ ಹೊರಗಿನಿಂದ ಬಂದ ಸಂಘಟನೆಗಳು ಹುಳಿ ಹಿಂಡಿದ್ದು ಸರಿಯಲ್ಲ. ಇಂಥ ಸಂಘಟನೆಗಳು ಕೊಡಗಿಗೆ ಕಾಲಿಡುವುದೇ ಬೇಕಾಗಿಲ್ಲ ಎಂದರು. ಪಶು ಸಂಗೋಪನಾ ಇಲಾಖೆಯ ನಿವೃತ್ತ ಅಧಿಕಾರಿ ಡಾ.ಗಣಪತಿ ಮಾತನಾಡಿ, ಕಾರ್ಮಿಕರನ್ನು ಬೆಳೆಗಾರರ ವಿರುದ್ದ ಎತ್ತಿ ಕಟ್ಟುವ ಷಡ್ಯಂತ್ರದ ಹಿಂದೆ ಹೊರಜಿಲ್ಲೆಗಳ ಸಂಘಟನೆಗಳ ಕೈವಾಡ ಸ್ಪಷ್ಟವಾಗಿದೆ. ಸುಳ್ಳು ಆರೋಪ ಮಾಡಿದ ಇಂಥ ಸಂಘಟನೆಗಳ ವಿರುದ್ದ ಜಿಲ್ಲಾಡಳಿತ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಕಾಫಿ ಬೆಳೆಗಾರರು ಖಳರಲ್ಲ. ನಿಜವಾದ ಖಳರನ್ನು ಹಿರೋಗಳಂತೆ ಬಿಂಬಿಸಲಾಗುತ್ತಿದೆ. ನೈಜ ತನಿಖೆಯಿಂದ ಈ ವಿಚಾರ ಸ್ಪಷ್ಟವಾಗಲಿದೆ ಎಂದು ಹೇಳಿದರು.
ದಿಡ್ಡಳ್ಳಿಯಲ್ಲಿ ನಕ್ಸಲರಿಲ್ಲ ಎನ್ನಲಾಗುತ್ತಿದೆ. ಆದರೆ ನಕ್ಸಲರು ತಾವು ನಕ್ಸಲರು ಎಂದು ಬ್ಯಾಡ್ಜ್ ಹಾಕಿಕೊಂಡು ಬರೋದಿಲ್ಲ. ದಿಡ್ಡಳ್ಳಿಯಲ್ಲಿ ಖಂಡಿತಾ ನಕ್ಸಲ್ ಪ್ರಚೋದನೆಯ ಹೋರಾಟ ನಡೆದಿದೆ ಎಂದೂ ಡಾ.ಗಣಪತಿ ಸ್ಪಷ್ಟಪಡಿಸಿದರು. ಯಾರದ್ದೋ ಮಾತಿಗೆ ಕಟುಬಿದ್ದ ಆದಿವಾಸಿಗಳು ಮತಾಂತರವಾದರೆ ಆದಿವಾಸಿಗಳಿಗೆ ದೊರಕುವ ಯಾವುದೇ ಸೌಲಭ್ಯಗಳು ಸಿಕ್ಕುವುದಿಲ್ಲ ಎಂದು ಗಣಪತಿ ಎಚ್ಚರಿಸಿದರು. ಸಣ್ಣ ಬೆಳೆಗಾರರ ಸಂಘದ ಅಧ್ಯಕ್ಷ ಚೇರಂಡ ನಂದಾ ಸುಬ್ಬಯ್ಯ ಮಾತನಾಡಿ, ಮಾಲ್ದಾರೆ ವ್ಯಾಪ್ತಿಯಲ್ಲಿ 680 ಅರ್ಜಿದಾರರು ಅರಣ್ಯ ಹಕ್ಕು ಪತ್ರ ಪಡೆಯಲು ಅರ್ಹರಿದ್ದಾರೆ. ಹೀಗಿರುವಾಗ ಸರ್ಕಾರ ದಿಡ್ಡಳ್ಳಿಯಲ್ಲಿ ಅರಣ್ಯ ಜಾಗ ಅತಿಕ್ರಮಣ ಮಾಡಿಕೊಂಡವರಿಗೆ ನಿವೇಶನ ನೀಡುವುದಾಗಿ ಹೇಳಿ ಕಾನೂನನ್ನೇ ತಿರುಚಲು ಮುಂದಾಗಿದೆ ಎಂದು ದೂರಿದರು. ಆದಿವಾಸಿಗಳ ಹೋರಾಟಕ್ಕೆಂದು ಸಂಗ್ರಹಿಸಲಾದ ಹಣ ನಕ್ಸಲ್ ಬೆಂಬಲಿತ ಸಂಘಟನೆಗಳ ಪಾಲಾಗುತ್ತಿದೆ ಎಂದೂ ನಂದಾ ಆಕ್ರೋಷ ವ್ಯಕ್ತಪಡಿಸಿದರು. ದಿಡ್ಡಳ್ಳಿಯ ಸಮಸ್ಯೆ ಬಗೆಹರಿಯುವುದು ನಕ್ಸಲ್ ಬೆಂಬಲಿತ ಸಂಘಟನೆಗಳಿಗೆ ಬೇಕಾಗಿಲ್ಲ. ಹೀಗಾಗಿಯೇ ಆದಿವಾಸಿಗಳಿಗೆ ತಪ್ಪು ಮಾಹಿತಿ ನೀಡಿ ಹೋರಾಟದ ದಾರಿಯನ್ನೇ ಮಾಲೀಕರ ವಿರುದ್ದದ ಹೋರಾಟವಾಗಿ ಬದಲಾಯಿಸಲಾಗಿದೆ ಎಂದೂ ನಂದಾ ಸುಬ್ಬಯ್ಯ ದೂರಿದರು.
ಜಿ.ಪಂ. ಮಾಜಿ ಅಧ್ಯಕ್ಷ, ಕಾಂಗ್ರೆಸ್ ಹಿರಿಯ ಮುಖಂಡ ಜಮ್ಮಡ ಕರುಂಬಯ್ಯ ಮಾತನಾಡಿ, ನಾಯಿಗೆ ಮೂಳೆ ಹಾಕಿದಂತೆ ಸರ್ಕಾರ ದಿಡ್ಡಳ್ಳಿಯ ಹೋರಾಟಗಾರರಿಗೆ 1 ಕೋಟಿ ರು. ಅನುದಾನ ನೀಡಿದೆ. ಈ ಅನುದಾನ ನಿಜಕ್ಕೂ ಸದುಪಯೋಗವಾಗಬೇಕು. ದಿಡ್ಡಳ್ಳಿಯಲ್ಲಿ ನಿಯಮ ಮೀರಿ ನೆಲೆಗೊಂಡವರು ಈ ಹಣದ ಪ್ರಯೋಜನ ಪಡೆಯುವ ಬದಲಿಗೆ ನೈಜ ಆದಿವಾಸಿಗಳಿಗೆ ಈ ಅನುದಾನದ ಉಪಯೋಗ ದೊರಕುವಂತಾಗಬೇಕೆಂದು ಒತ್ತಾಯಿಸಿದರು. ಸುಪ್ರಿಂಕೋರ್ಟ್ ಆದೇಶದನ್ವಯವೇ ದಿಡ್ಡಳ್ಳಿಯಲ್ಲಿ ಅತಿಕ್ರಮಿತರನ್ನು ಅರಣ್ಯದಿಂದ ತೆರವುಮಾಡಲಾಗಿದೆ. ಹೀಗಾಗಿ ಕಾನೂನು ಉಲ್ಲಂಘಿಸಿದವರಿಗೆ ಸರ್ಕಾರ ಕೋಟಿಗಟ್ಟಲೆ ಹಣದ ನೆರವು ನೀಡಿದ್ದೇ ಆದಲ್ಲಿ ಮುಂದೆ ಎಲ್ಲರೂ ಕಾನೂನು ಉಲ್ಲಂಘಿಸಿಯಾರು ಎಂದೂ ಜೆ.ಎ.ಕರುಂಬಯ್ಯ ಆತಂಕ ವ್ಯಕ್ತಪಡಿಸಿದರು.
ದಿಡ್ಡಳ್ಳಿ, ಮಾಲ್ದಾರೆ ವ್ಯಾಪ್ತಿಯಲ್ಲಿ ಸೆ.144 ರಂತೆ ನಿಷೇಧಾಜ್ಞೆ ವಿಧಿಸದೇ ಹೋಗಿದ್ದಲ್ಲಿ ಹೊರಗಿನಿಂದ ಬಂದ ಸಂಘಟನೆಗಳು ಕೊಡಗನ್ನೇ ಹಾಳುಗೆಡಹುತ್ತಿದ್ದವು. ಹೀಗಾಗಿ ನಿರಾಶ್ರಿತರನ್ನು ಜಿಲ್ಲಾಡಳಿತ ಸರಿಯಾಗಿ ಗುರುತಿಸಿ ನೋಂದಣಿ ಕಾಯಂ ಕೈಗೊಳ್ಳುವವರೆಗೂ ದಿಡ್ಡಳ್ಳಿ ವ್ಯಾಪ್ತಿಯಲ್ಲಿ ಸೆ.144 ಜಾರಿಯಲ್ಲಿರುವಂತೆ ಸಕಾ9ರಕ್ಕೆ ಸಲಹೆ ನೀಡುವುದಾಗಿ ಕರುಂಬಯ್ಯ ಹೇಳಿದರು. ಮಂತ್ರಿಗಿಂತಲೂ ಗ್ರಾ.ಪಂ.ಗಳಿಗೆ ಅಧಿಕಾರ ಹೆಚ್ಚಾಗಿದೆ. ಹೀಗಾಗಿ ಮಾಲ್ದಾರೆ ಗ್ರಾ.ಪಂ. ತನಗಿರುವ ಅಧಿಕಾರ ಬಳಸಿಕೊಳ್ಳಬೇಕು. ಕಾನೂನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದೂ ಪಂಚಾಯತ್ ಆಡಳಿತಗಾರರಿಗೆ ಕರುಂಬಯ್ಯ ಸಲಹೆ ನೀಡಿದರು.
ವೀರಾಜಪೇಟೆ ತಹಶೀಲ್ದಾರ್ ಅವರಿಗೆ ಸಭಾ ನಿರ್ಣಯಗಳನ್ನು ಸಕಾ9ರಕ್ಕೆ ಸಲ್ಲಿಸುವಂತೆ ಸ್ಥಳದಲ್ಲಿ ನೀಡಲಾಯಿತು. ವಿರಾಜಪೇಟೆ ತಹಶೀಲ್ದಾರ್, ಮಹದೇವಸ್ವಾಮಿ, ತಾಲೂಕು ಐಟಿಡಿಪಿ ಅಧಿಕಾರಿ ಚಿಕ್ಕಬಸಪ್ಪ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಿರಣ್ ಫಡ್ನೇಕರ್, ಪಂಚಾಯತ್ ಅಧ್ಯಕ್ಷೆ ರಾಣಿ, ಉಪಾಧ್ಯಕ್ಷ ರಾಜು, ಪಂಚಾಯತ್ ಸದಸ್ಯರಾದ ರಾಣಿ, ಅಜ್ಜನಿಕಂಡ ರಘು ಕರುಂಬಯ್ಯ, ಸತೀಶ್, ಗ್ರಾಮಲೆಕ್ಕಿಗ ಮಂಜುನಾಥ್, ಕಾಫಿ ಬೆಳಗಾರ ಬೋಪಣ್ಷ , ಗಣೇಶ್ ಸೇರಿದಂತೆ ನೂರಾರು ಬೆಳೆಗಾರರು, ಆದಿವಾಸಿಗಳು ಪಾಲ್ಗೊಂಡಿದ್ದರು. ವೃತ್ತ ನಿರೀಕ್ಷಕ ಮೇದಪ್ಪ, ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಸಂತೋಷ್ ನೇತ?ತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.