ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಒಂದು ಮನ ಕಲಕುವ ಘಟನೆ ಜರುಗಿದ್ದು ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ನಿನ್ನೆ ತಾಯಿ ಮತ್ತು ಮಗು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಕೊಪ್ಪ ತಾಲೂಕಿನ ತೆಂಗಿನ ಮನೆ ಗ್ರಾಮದಲ್ಲಿ ಶ್ರೀ ದೇವಿ (30) ಮತ್ತು ಆಕೆಯ ಮಗ ಪಾರ್ಥ (5) ಇಬ್ಬರೂ ಸೀತಾ ನದಿಗೆ ಹಾರಿ ಆತ್ಮ ಹತ್ಯೆ ಮಾಡಿಕೊಂಡಿದ್ದ ಕಾರಣ ಕೇಳಿದ್ರೇ ನೀವೆ ಬೆಚ್ಚಿ ಬೀಳ್ತೀರಾ… ಆ ಕಾರಣ ಏನು ಎಂಬುದರ ಕುರಿತು ಒಂದು ವರದಿ ಇಲ್ಲಿದೇ ನೋಡಿ.
ಹೌದು.. ನಿನ್ನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ತೆಂಗಿನ ಮನೆ ಗ್ರಾಮದ ಬಲಿ ಸೀತಾ ನದಿಯಲ್ಲಿ ತಾಯಿ ಮತ್ತು ಮಗು ಇಬ್ಬರೂ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು ಇದಕ್ಕೆ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎಂದೂ ಹೇಳಲಾಗುತ್ತಿತ್ತು. ಆದ್ರೆ ಶ್ರೀದೇವಿ ಕುಟುಂಬದವರು ಆ ಆತ್ಮಹತ್ಯೆಯ ರಹಸ್ಯ ಬಿಚ್ಚಿಟ್ಟಿದ್ದಾರೆ.
2010 ರಲ್ಲಿ ಶ್ರೀದೇವಿ ಮತ್ತು ಪ್ರದೀಪ್ ಎಂಬ ವ್ಯಕ್ತಿಗೆ ವಿವಾಹ ಮಾಡಿಕೊಡಲಾಗಿತ್ತು. ಇಬ್ಬರೂ ಜೀವನ ಸುಖವಾಗಿಯೇ ನಡೆಸುತ್ತಿದ್ದರು. ಆದ್ರೆ ಪ್ರದೀಪ್ ಗೆ 2005 ರಲ್ಲಿಯೇ ಏಡ್ಸ್ ಕಾಯಿಲೆಗೆ ತುತ್ತಾಗಿದ್ದು ಆ ರೋಗದಿಂದ ನರಳುತ್ತಿದ್ದು ಏಡ್ಸ್ ಅಂತಹ ಕಾಯಿಲೆ ಇದ್ದರೂ ಮದುವೆ ಆಗುವ ಸಂದರ್ಭದಲ್ಲಿ ಸತ್ಯವನ್ನು ಹೇಳದೇ ಶ್ರೀದೇವಿಯನ್ನು ಮದುವೆ ಆಗಿದ್ದನು. ಆದ್ರೆ ಕಳೆದ ಎರಡೂ ಮೂರು ವರ್ಷದಿಂದಾ ಆರೋಗ್ಯದಲ್ಲಿ ಏರುಪೇರು ಆದಾಗ ಟಿಬಿ ಕಾಯಿಲೆ ಬಂದಿದೆ ಎಂದೂ ಸುಳ್ಳು ಹೇಳಿದ್ದಾನೆ. ಆದ್ರೆ ಕೆಲ ದಿನಗಳ ಹಿಂದೇ ಪ್ರದೀಪ ಆರೋಗ್ಯವನ್ನು ಮಣಿಪಾಲ್ ಆಸ್ವತ್ರೆಯಲ್ಲಿ ತಪಾಸಣೆ ಮಾಡಿಸಿದಾಗ ಆತನಿಗೆ ಏಡ್ಸ್ ರೋಗ ಇರುವುದು ಕಂಡು ಬಂದಿದೆ.ಎಂದೂ ಶ್ರೀದೇವಿ ಮನೆಯವರು ಪ್ರದೀಪ್ ಮೇಲೆ ಆರೋಪ ಮಾಡುತ್ತಿದ್ದಾರೆ.
ಶ್ರೀದೇವಿಗೆ ಪ್ರದೀಪ್ ಮನೆಯವರು ನಿತ್ಯ ಕಿರುಕುಳ ನೀಡುತ್ತಿದ್ದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿದ್ದಾರೆ ಎಂದೂ ಆರೋಪ ಮಾಡುತ್ತಿದ್ದಾರೆ. ಪ್ರದೀಪ್ ಮನೆಯವರು ಒಬ್ಬಬ್ಬರಂತೆ ಆಕೆಗೆ ಕಿರುಕುಳ ನೀಡಿದ ಪರಿಣಾಮ ಏನು ಮಾಡದ ಸ್ಥಿತಿಗೆ ಹೋಗಿದ್ದಳು ಶ್ರೀದೇವಿ ನಂತರ ಮಣಿಪಾಲ್ ನಲ್ಲಿ ಗಂಡನಿಗೆ ಏಡ್ಸ್ ಕಾಯಿಲೆ ಇದೆ, ಅದು 2005 ರಿಂದಲೇ ಇತ್ತು ಎಂಬುದು ತಿಳಿದ ಕೂಡಲೇ ದಿಗ್ಬ್ರಮೆ ಒಳಗಾಗಿದ್ದು ನಿನ್ನೆ ಗಂಡನಿಗೆ ಇರುವ ಕಾಯಿಲೆ ಮತ್ತು ಆತನ ಮನೆಯವರು ಶ್ರೀದೇವಿಗೆ ನೀಡುತ್ತಿದ್ದ ಕಿರುಕುಳದ ಕುರಿತು ಡೆತ್ ನೋಟ್ ಬರೆದಿಟ್ಟು ತಾಯಿ ಮತ್ತು ಮಗು ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದು, ನನ್ನ ಸಾವಿಗೆ ಪ್ರದೀಪ್ ಮತ್ತು ಕುಟುಂಬದವರೇ ಕಾರಣ ಎಂದೂ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎಂದು ಶ್ರೀ ದೇವಿ ಮನೆಯವರು ಆರೋಪ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಕೌಟುಂಬಿಕ ಕಲಹದಿಂದ ಈ ಅವಘಡ ಸಂಭವಿಸಿದೆ ಎಂದೂ ಹೇಳಲಾಗುತ್ತಿತ್ತು. ಆದ್ರೆ ಗಂಡನಿಗೆ ಏಡ್ಸ್ ರೋಗ, ಮನೆಯವರ ಕಿರುಕುಳದಿಂದ ಸತ್ತಿದ್ದಾಳೆ ಎಂದು ಈಗ ಶ್ರೀದೇವಿ ಮನೆಯವರು ಆರೋಪ ಮಾಡುತ್ತಿದ್ದು ಪ್ರದೀಪ್ ಕುಟುಂಬದರ ವಿರುದ್ದ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ದೂರು ದಾಖಲು ಮಾಡಿದ್ದಾರೆ.