ಮಂಡ್ಯ: ಮದ್ದೂರು ತಾಲೂಕಿನ ತೊಪ್ಪನಹಳ್ಳಿಯಲ್ಲಿ ನಡೆದಿರುವ ಜೆಡಿಎಸ್ ಕಾರ್ಯಕರ್ತರ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.
ಮೇಲ್ನೋಟಕ್ಕೆ ತಣ್ಣಗೆ ಆದಂತೆ ಕಂಡು ಬಂದರೂ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಆರಂಭವಾದ ಜಗಳ ರಾಜಕೀಯ ತಿರುವುಪಡೆದುಕೊಂಡು ಇಬ್ಬರು ಜೆಡಿಎಸ್ ಕಾರ್ಯಕರ್ತರ ಹೆಣ ಬೀಳುವ ಮೂಲಕ ಅಂತ್ಯಕಂಡಿತ್ತು. ಇದರಿಂದ ಇಡೀ ಗ್ರಾಮದಲ್ಲಿ ಉದ್ವಿಘ್ನ ಪರಿಸ್ಥಿತಿ ನಿಮರ್ಾಣವಾಗಿತ್ತು. ಪರಿಸ್ಥಿತಿ ಹತೋಟಿ ಮೀರದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಈ ನಡುವೆ ಆರೋಪಿ ಕುಮಾರ್ ಅವರ ತಾಯಿ ಪುಟ್ಟಲಿಂಗಮ್ಮ ಅವರು ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಹಳೇ ದ್ವೇಷಕ್ಕೆ ನನ್ನ ಮಗನ ಹೆಸರನ್ನು ಸೇರಿಸಿ ತೊಂದರೆ ನೀಡುತ್ತಿದ್ದಾರೆ. ನಿಮಗೆ ಒಳ್ಳೆಯದಾಗುವುದಿಲ್ಲ, ನಾಶವಾಗುತ್ತೀರಿ ಎಂದು ಅವಾಚ್ಯ ಶಬ್ದಗಳಿಂದ ಮೃತ ಮುತ್ತುರಾಜು ಅವರ ಮನೆಗೆ ತೆರಳಿ ಮುತ್ತುರಾಜು ಪತ್ನಿ ಶ್ವೇತಾ ಅವರೊಂದಿಗೆ ಜಗಳವಾಡಿದ್ದಾರೆ.
ಈ ಕುರಿತು ಶ್ವೇತಾ ದೂರಿನ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪುಟ್ಟಲಿಂಗಮ್ಮ ಅವರನ್ನು ವಶಕ್ಕೆ ತೆಗೆದುಕೊಂಡು, ವಿಚಾರಣೆಗಾಗಿ ಪಟ್ಟಣ ಪೊಲೀಸ್ ಠಾಣೆಗೆ ಕರೆದೊಯ್ದರು. ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಾಲ್ಕು ಕೆಎಸ್ಆರ್ಪಿ ಹಾಗೂ 4 ಜಿಲ್ಲಾ ಮೀಸಲು ತುಕಡಿಯನ್ನು ಡಿವೈಎಸ್ಪಿ ಥಾಮಸ್ ಅವರ ನೇತೃತ್ವದಲ್ಲಿ ನಿಯೋಜಿಸಲಾಗಿದೆ. ಇಡೀ ಊರು ಪೊಲೀಸ್ ಬಂದೋಬಸ್ತ್ನಲ್ಲಿದೆ