ಸಿಲಿಕಾನ್ ಸಿಟಿ ಜನರು ಸೇರಿದಂತೆ ನಗರವಾಸಿಗಳು ಮಲೆನಾಡಿನಲ್ಲಿ ಹೊಸ ವರ್ಷವನ್ನುಆಚರಣೆ ಮಾಡಲು ಸಿದ್ದತೆ ನಡೆಸುತ್ತಿದ್ದಾರೆ. ದೈನಂದಿನ ಜಂಜಾಟದಿಂದ ಮುಕ್ತರಾಗಲು ಪ್ರಶಾಂತ ಸ್ಥಳಗಳಿಗೆ ಹೋಗಲು ಇಚ್ಚಿಸಿದ್ದು, ಅದರಲ್ಲೂ ಚಿಕ್ಕಮಗಳೂರಿನಲ್ಲಿ ಹೆಚ್ಚು ಜನಪ್ರಿಯವಾಗಿರುವ ಹೋಂ ಸ್ಟೇಗಳಿಂತೂ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಕಳೆದ ಒಂದು ವಾರದ ಮುಂಚೆಯೇ ರೂಮ್ ಗಳನ್ನು ಬುಕ್ ಮಾಡಿ ಮಾಗಿ ಚಳಿಯ ಜೊತೆ ಹೊಸ ವರ್ಷವನ್ನು ಸ್ಪೇಷಲ್ ಆಗಿ ಆಚರಣೆ ಮಾಡಲು ತಯಾರಿಯಲ್ಲಿ ಇದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೇ ನೋಡಿ…
ಹೌದು.. ಎತ್ತನೋಡಿದರೂ ಅತ್ತ ಪ್ರಕೃತಿ ರಮಣೀಯ ನೋಟ. ಅಂತಹ ಸೌಂದರ್ಯದ ಗಣಿ ಮಲೆನಾಡ ಭಾಗವಾದ ಚಿಕ್ಕಮಗಳೂರು ಜಿಲ್ಲೆ ಹೊಂದಿದೆ. ಪ್ರವಾಸಿಗರ ಸ್ವರ್ಗವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಈ ಜಿಲ್ಲೆ. ಪ್ರವಾಸೋದ್ಯಮ ಅಭಿವೃದ್ದಿ ಹಾಗೂ ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ದೃಷ್ಠಿಯಿಂದ ಸರ್ಕಾರ ಜಾರಿಗೆ ತಂದಿರುವ ಹೋಂ ಸ್ಟೇ ಯೋಜನೆ ಯಶಸ್ಸಿನತ್ತ ಸಾಗಿದ್ದು ಬೃಹತ್ ಉದ್ಯಮವಾಗಿ ಬೆಳೆಯುತ್ತಿದೆ.
ಸದ್ಯ ಮುಂದಿನ ದಿನಗಳಲ್ಲಿ ಹೊಸ ವರ್ಷ ಬರಲಿದ್ದು ಇದಕ್ಕಾಗಿ ಪ್ರವಾಸಿಗರು ಹೋಂಸ್ಟೇ ಗಳತ್ತ ಮುಖಮಾಡಿದ್ದಾರೆ. ಈಗಾಗಲೇ ಶೇಕಾಡ 9೦ ರಷ್ಷು ಬುಕ್ಕಾಗಿದ್ದು ನ್ಯೂ ಇಯರ್ ನ ಸ್ಪೇಷಲ್ಲಾಗಿ ಮಲೆನಾಡಿನ ಪ್ರಕೃತಿಯ ಸೌಂದರ್ಯದ ಜೊತೆ ಕಾಲ ಕಳೆಯುಲು ಆಗಮಿಸುತ್ತಿದ್ದಾರೆ. ಕಾಫಿ ತೋಟಗಳಲ್ಲಿ ಸದ್ದಿಲ್ಲದೆ ತಲೆ ಎತ್ತುತ್ತಿರುವ ಹೋಂ ಸ್ಟೇಗಳು ಪ್ರವಾಸಿಗರನ್ನು ಆಕರ್ಷಿಸಲು ತಮ್ಮದೆಯಾದ ವೆಬ್ ಸೈಟ್ ಸೃಷ್ಟಿಕೊಂಡಿವೆ. ಅದರ ಮೂಲಕ ಪ್ರವಾಸಿಗರನ್ನು ಸಂಪರ್ಕಿಸುತ್ತಿವೆ.
ಮದ್ಯಮ ವರ್ಗದ ಜನರಿಗೆ ಹೋಂ ಸ್ಟೇ ಅಷ್ಟೇನೂ ದುಬಾರಿಯಲ್ಲ. ಒಂದು ದಿನಕ್ಕೆ ಒಬ್ಬ ವ್ಯಕ್ತಿಗೆ 2500 ರಿಂದ 3500ವರೆಗೆ ಬಾಡಿಗೆ ಪಡೆಯುಲಾಗುತ್ತದೆ. ಅದರಲ್ಲಿ ಶೇಕಾಡ 10 ರಷ್ಷು ದರವನ್ನು ಸರ್ಕಾರಕ್ಕೆ ತೆರಿಗೆ ಕಟ್ಟುತ್ತಾರೆ. ಹೀಗಾಗಿ ಮಲೆನಾಡಿನಲ್ಲಿ ಇರುವ ಹೋಂ ಸ್ಟೇಗಳಿಗೆ ಈಗ ಶುಕ್ರದಿಸೆ ಆರಂಭವಾಗಿದೆ. ಹೊಸ ವರ್ಷವನ್ನು ವಿನೂತವಾಗಿ ಆಚರಣೆ ಮಾಡಲು ಜಿಲ್ಲೆಯಲ್ಲಿ ಇರುವ 200 ಕ್ಕೂ ಹೆಚ್ಚು ಹೋಂ ಸ್ಟೇಗಳಲ್ಲಿ ಈಗಾಲೇ 90 ರಷ್ಷು ಬುಕ್ ಕಾರ್ಯ ಮುಗಿದಿದೆ. ಒಟ್ಟಾರೆಯಾಗಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗಿದೆ. ಪ್ರಕೃತಿ ಸೌಂದರ್ಯ ಸವಿಯಲು ಆಗಮಿಸುವ ಪ್ರವಾಸಗರಿಗೆ ಹೋಂ ಸ್ಟೇಗಳು ವರದಾನವಾಗಿದೆ. ಪ್ರವಾಸಿಗರಿಗೆ ಪ್ರಕೃತಿ ಮಧ್ಯೆ ವಾಸ್ತವ್ಯ ಮಾಡುವಂತಹ ಸೌಲಭ್ಯವನ್ನು ಹೋಂ ಸ್ಟೇಗಳು ನೀಡುತ್ತಿವೆ. ಇನ್ನು ಹೊಸವರ್ಷದ ಗುಂಗಿನಲ್ಲಿ ಆಗಮಿಸುವ ಪ್ರವಾಸಿಗರಿಗೆ ಮಾಗಿ ಚಳಿ ಜೊತೆ ನೂತನ ವರ್ಷವನ್ನು ಬರಮಾಡಿಕೊಳ್ಳಬಹುದು.