ಕಳೆದ ಐದು ವರ್ಷದ ಹಿಂದೆ ಇದ್ದ ಕಲರ್ ಪುಲ್ ವಾತಾವರಣ ರತ್ನಗಿರಿ ಬೋರೆಯಲ್ಲಿ ಇತ್ತು ಆದ್ರೆ ಈಗಿಲ್ಲ. ವೀಕ್ ಎಂಡ್ ನಲ್ಲಿ ಕಾಲ ಕಳೆಯಲು ನಗರದ ಜನತೆಗೆ ಆಯ್ಕೆ ಮಾಡಿಕೊಳ್ಳುತ್ತಿದ್ದ ಮಹಾತ್ಮ ಗಾಂಧಿ ಪಾರ್ಕ್ ಇದೀಗ ಬೋರು ಹೊಡೆಸುತ್ತಿದೆ.
ಇಲ್ಲಿರುವ ಗತವೈಭವ ಎಲ್ಲಾ ನಾಶವಾಗುತ್ತಿದೆ. ಜೊತೆಗೆ ಹಲವಾರು ವರ್ಷಗಳಿಂದ ಬೆಳೆಸಿದ್ದ ಶ್ರೀಗಂಧದ ಮರಗಳು ಕಳ್ಳತನ ಆಗುತ್ತಿದೆ. ಇದನ್ನು ಯಾರು ಕೇಳದಂತಾಗಿದೆ ಈ ಕುರಿತು ಒಂದು ವರದಿ ಇಲ್ಲಿದೇ ನೋಡಿ.
ಹೌದು.. ಕಳೆದ ಐದು ವರ್ಷದ ಹಿಂದೆ ಚಿಕ್ಕಮಗಳೂರು ನಗರದ ರತ್ನಗಿರಿ ಬೋರೆ ಹೌಸ್ ಪುಲ್ ಆಗಿರುತ್ತಿತ್ತು. ನಗರದ ಜನತೆಯ ನೆಚ್ಚಿನ ತಾಣವಾದ ಮಹಾತ್ಮಗಾಂಧಿ ಪಾರ್ಕ್ ವೀಕ್ ಎಂಡ್ ನಲ್ಲಿ ಪುಟಾಣಿಗಳದ್ದೇ ಕಾರು ಬಾರು. ವಾರದ ಅಂತ್ಯದ ದಿನ ನಗರದ ಜನತೆ ಫ್ರೀಯಾಗಿರಲು ಮೊದಲ ಆಯ್ಕೆ ಮಾಡಿಕೊಳ್ಳುವ ಸ್ಥಳ ಈಗ ಅವ್ಯವಸ್ಥೆಯ ಆಗರವಾಗಿದೆ. ರತ್ನಗಿರಿ ಬೋರೆ ತನ್ನ ಸೌಂದರ್ಯವನ್ನೇ ದಿನದಿಂದ ದಿನಕ್ಕೆ ಕಳೆದುಕೊಳ್ಳುತ್ತಿದೆ.
ರತ್ನಗಿರಿ ಸೌಂದರ್ಯ ಹೆಚ್ಚಿಸುವ ಸಲುವಾಗಿ ಹಲವಾರು ರೀತಿಯ ಬೆಲೆ ಬಾಳುವಂತಹ ಮರಗಳನ್ನು ಬೆಳೆಸಲಾಗಿತ್ತು. ಆದ್ರೆ ಇಲ್ಲಿನ ಅವ್ಯವಸ್ಥೆಯ ಕಾರಣದಿಂದ ಶ್ರೀಗಂಧದ ಮರಗಳು ಕಳ್ಳರ ಪಾಲಾಗುತ್ತಿದೆ. ವರ್ಷಗಟ್ಟಲೆ ಕಷ್ಟು ಪಟ್ಟು ಬೆಳೆಸಿದ ಶ್ರೀಗಂಧದ ಮರಗಳು ರಾತ್ರೋ ರಾತ್ರಿ ಕಳ್ಳತನ ಮಾಡಿದ್ರು ಯಾರೂ ಕೇಳದಂತಾಗಿದೆ. ಸುಮಾರು 10ಕ್ಕೂ ಹೆಚ್ಚು ಬೃಹತ್ ಗಾತ್ರದ ಲಕ್ಷಾಂತರ ರೂ ಬೆಲೆ ಬಾಳುವ ಶ್ರೀಗಂಧದ ಮರಗಳು ಕಳ್ಳತನವಾಗಿದ್ದು ಇಲ್ಲಿನ ಸೆಕ್ಯೂರಿಟಿ ಗಾರ್ಡ್ ಗಳು ನಮಗೆ ಏನು ಗೊತ್ತಿಲ್ಲದಂತೆ ವರ್ತನೆ ಮಾಡುತ್ತಿದ್ದಾರೆ.
ಬೆಳಗ್ಗೆ ಮತ್ತು ಸಂಜೆ ವೇಳೆ ಪಾರ್ಕ್ ನಲ್ಲಿ ವಾಕಿಂಗ್ ಬರುವವರು ಸೆಕ್ಯೂರಿಟಿ ಗಾರ್ಡ್ ಗೆ ಶ್ರೀ ಗಂಧದ ಮರಗಳ ಬಗ್ಗೆ ಕೇಳಿದ್ರೆ ನಿಮ್ಮ ಕೆಲಸ ನೋಡಿಕೊಂಡು ಹೋಗಿ ಎಂಬ ಉಡಾಫೆ ಉತ್ತರ ನೀಡುತ್ತಿದ್ದು ಈ ಶ್ರೀಗಂಧದ ಮರಗಳ ಕಳ್ಳತನದಲ್ಲಿ ಸೆಕ್ಯೂರಿಟಿ ಗಾರ್ಡ್ ಗಳ ಕೈ ವಾಡ ಇರಬೇಕು ಎಂಬ ಸಂಶಯ ಎಲ್ಲರಲ್ಲೂ ಕಾಡುತ್ತಿದೆ. ಪ್ರವಾಸಿಗರ ಸ್ವರ್ಗವಾದ ಚಿಕ್ಕಮಗಳೂರು ಪ್ರವಾಸಿಗರ ನೆಚ್ಚಿನ ತಾಣ. ನಗರದ ಅಣತಿ ದೂರವಿರುವ ರತ್ನಗಿರಿ ಬೋರೆ ಸಾರ್ವಜನಿಕರು ಹಾಗೂ ಪ್ರವಾಸಿಗರಿಲ್ಲದೆ ಹಿಂದಿನಿಂದಲೂ ಸೋರಗುತ್ತಿದೆ. ಕಾರಣ ಜಿಲ್ಲಾಡಳಿತದ ನಿರ್ಲಕ್ಷ್ಯದ ಫಲವಾಗಿ ಬೋರೆಯ ವಾತವರಣ ಬೋರಾಗಿರುವುದೇ ಒಂದೇಡೇ ಕಾರಣವಾಗಿದ್ದರೆ ಇನ್ನೊಂದೆಡೆ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆಕ್ಯೂರಿಟಿ ಗಾರ್ಡ್ ಗಳು ನಮ್ಮಗೇ ಏನು ಸಂಭದವಿಲ್ಲ ಎಂಬತೆ ವರ್ತನೆ ಮಾಡುತ್ತಿರುವುದು ಮತ್ತೋಂದು ಪ್ರಮುಖ ಕಾರಣವಾಗಿದೆ.
ಇದನ್ನೇ ಪ್ರಮುಖ ದಾಳವಾಗಿ ಮಾಡಿಕೊಂಡಿರುವ ಕಳ್ಳರು ರಾತ್ರೋ ರಾತ್ರಿ ಬೆಳೆ ಬಾಳುವಂತಹ ಮರಗಳಿಗೆ ಕೊಡಲಿ ಪೆಟ್ಟು ಕೊಟ್ಟು ಕಳ್ಳತನ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಹತ್ತಾರು ಶ್ರೀಗಂಧದ ಮರಗಳು ಕಣ್ಮರೆಯಾಗಿದ್ದು ದಿನದಿಂದ ದಿನಕ್ಕೆ ಇಲ್ಲಿನ ಶ್ರೀಗಂಧ ಮರಗಳ ಸಂಖ್ಯೆಯಲ್ಲಿ ಇಳಿಮುಖ ಕಂಡು ಬರುತ್ತಿದೆ. ಇದರ ಬಗ್ಗೆ ಯಾರೂ ಕೂಡ ಚಕಾರ ಎತ್ತದೇ ಇರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಒಟ್ಟಾರೆಯಾಗಿ ಹತ್ತಾರು ವರ್ಷಗಳಿಂದ ಕಷ್ಟು ಪಟ್ಟು ಬೆಳೆಸಿರುವ ಶ್ರೀಗಂಧದ ಮರಗಳು ರತ್ನಗಿರಿ ಬೋರೆಯಲ್ಲಿ ಕಳ್ಳತನ ಆಗುತ್ತಿರುವುದು ಇಲ್ಲಿ ವಾಕಿಂಗ್ ಬರುವವರನ್ನ ರೊಚ್ಚಿಗೆಬ್ಬಿಸುವಂತೆ ಮಾಡಿದ್ದು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಯೋಚನೆ ಮಾಡಿದ್ದು ಇಲ್ಲಿನ ಶ್ರೀಗಂಧದ ಮರಗಳ ನಾಪತ್ತೆ ಹೇಗೆ ಆದವು ಎಂಬುದರ ಬಗ್ಗೆ ತನಿಖೆ ಆಗಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.