ಮಡಿಕೇರಿ: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ರಂಗಾಯಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಕಾಲೇಜು ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧಾ ಕಾರ್ಯಕ್ರಮ ಗಮನಸೆಳೆಯಿತು.
ವಿರಾಜಪೇಟೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡದಿಂದ ಸಿ.ಎಸ್.ಪೂಣಚ್ಚ ಅವರ ನಿರ್ದೇನದಲ್ಲಿ ಜಾಗೃತಿ ನಾಟಕ ಹಾಗೂ ಎಂ.ಎನ್. ವನಿತ್ ಕುಮಾರ್ ನಿರ್ದೇಶನ ಕುಡಿಯ ನೃತ್ಯ ಪ್ರದರ್ಶನ, ವಿರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ಅಮ್ಮೆಣಿಚಂಡ ಪ್ರವೀಣ್ ಅವರ ನಿರ್ದೇಶನದಲ್ಲಿ ಸುಂದರತಾಣ ನಾಟಕ ಹಾಗೂ ಸಿ.ಎಸ್. ಪೂಣಚ್ಚ ನಿರ್ದೇಶನದಲ್ಲಿ ಕತ್ತಿಯಾಟ್, ಸುಂಟಿಕೊಪ್ಪ ಸ.ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಂದ ಡಾ. ಸುಕನ್ಯಾ ಎಸ್.ಡಿ ಅವರ ನಿರ್ದೇಶನದಲ್ಲಿ ಕಫನ್ ನಾಟಕ ಹಾಗೂ ಜಯಶ್ರಿ ಎಸ್ ಅವರ ನಿರ್ದೇಶನದಲ್ಲಿ ಜಾನಪದ ನೃತ್ಯ ಹಾಗೂ ಕೂಡಿಗೆ ಸ.ಪ.ಪೂ ಕಾಲೇಜು ವಿದ್ಯಾರ್ಥಿಗಳಿಂದ ಪ್ರಕಾಶ್ ಬಿ. ನಿರ್ದೇಶನದ ಆಷಾಢಭೂತಿ ನಾಟಕ ಮತ್ತು ಎಂ.ಸಿ.ರಮೇಶ್ ಅವರ ನಿರ್ದೇಶನದಲ್ಲಿ ಜಾನಪದ ನೃತ್ಯ ಮಾಡಿ ನೆರೆದವರ ಮನಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ಬಿ.ಸಿ.ಶಂಕರಯ್ಯ, ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಜಾನಪದ ಪರಿಷತ್ ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷರಾದ ಎಚ್.ಟಿ.ಅನಿಲ್, ಜಿಲ್ಲಾ ವಾತರ್ಾಧಿಕಾರಿ ಚಿನ್ನಸ್ವಾಮಿ, ಭಾರತೀಯ ವಿದ್ಯಾಭವನ ವ್ಯವಸ್ಥಾಪಕರಾದ ಪಿ.ಪಿ.ಸೋಮಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್, ಜಿಲ್ಲಾ ಸಂಚಾಲಕರಾದ ಇ.ರಾಜು ಇನ್ನಿತರರು ಇದ್ದರು.