ಚಿಕ್ಕಮಗಳೂರು: ದತ್ತಾತ್ರೇಯ ದರ್ಶನಕ್ಕೆಂದು ಕೆಲವು ಹಿಂದೂ ಭಕ್ತರು ದತ್ತ ಪೀಠಕ್ಕೆ ತೆರಳಿದ್ದಾಗ ಡಿ.28 ರಂದು ಸುಮಾರು 12:30 ರಿಂದ 2 ಗಂಟೆ ಸಮಯದಲ್ಲಿ ಗುಹೆಯೊಳಗೆ ಹಲವು ಮುಸಲ್ಮಾನರು ನಮಾಜ್ ಸಲ್ಲಿಸುತ್ತಿದ್ದುದು ಕಂಡು ಬಂದಿದ್ದು, ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಶ್ರೀರಾಮಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ತಿಳಿಸಿದ್ದಾರೆ.
ಕಾನೂನಿನ ಪ್ರಕಾರ ಪೀಠದಲ್ಲಿ ಗುಹೆಯ ಆಸುಪಾಸು 100 ಮೀಟರ್ ದೂರದಲ್ಲಿ ಯಾವುದೇ ಪ್ರಾರ್ಥನೆ, ಸಭೆಗಳನ್ನು ಮಾಡಬೇಕಾಗಿರುವುದು. ಆದರೆ ಸದರಿ ಸ್ಥಳದಲ್ಲಿ ಕಾನೂನು ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ದಯಮಾಡಿ ಗುಹೆಯಲ್ಲಿ ಅಳವಡಿಸಿರುವಂತಹ ಸಿ.ಸಿ. ಟಿ.ವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿ ಕಾನೂನು ಉಲ್ಲಂಘಿಸಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಎಂದು ಒತ್ತಾಯಿಸಿದ್ದಾರೆ.