ಕಾರ್ಮಿಕರು ಒಂದುಗೂಡಿ ಸಹಕಾರಿ ಸಾರಿಗೆ ಆರಂಭಿಸುವ ಮೂಲಕ ಸಾರಿಗೆ ಕ್ಷೇತ್ರದಲ್ಲಿ ಕಾಂತ್ರಿಕಾರಕ ಹೆಜ್ಜೆ ಮೂಡಿಸಿದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿನ ಸಹಕಾರ ಸಾರಿಗೆಗೆ (ಜನವರಿ 3ರಂದು) ಬೆಳ್ಳಿಹಬ್ಬದ ಸಂಭ್ರಮ. ಕಾರ್ಮಿಕರೇ ಮಾಲೀಕರು ಆಗಿರುವ ಈ ಸಂಸ್ಥೆ ಸಾಗಿದ ಪರಿ ನಿಜಕ್ಕೂ ಅಚ್ಚರಿ. ಏಷ್ಯಾದಲ್ಲೇ ಇದೊಂದು ವಿನೂತನ ಪ್ರಯೋಗ. ಏಷ್ಯಾದಲ್ಲೇ ಮಾದರಿಯಾಗಿರುವ ಸಹಕಾರ ಸಾರಿಗೆ ಸಂಸ್ಥೆಯ ಯಶೋಗಾಥೆ ಇಲ್ಲಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ…
ಅದು 90 ರ ದಶಕ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಭಾಗದ ಸಾರಿಗೆ ವಲಯದಲ್ಲಿ ಏಕಸಾಮ್ಯ ಸ್ಥಾಪಿಸಿದ್ದ ಶಂಕರ್ ಟ್ರಾನ್ಸ್ ಪೋರ್ಟ್ ಸಂಸ್ಥೆ ನೌಕರರು ಕನಿಷ್ಟ ವೇತನ ಇತರೆ ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಬೀದಿಗೆ ಇಳಿದರು. ಪರಸ್ಪರ ಮಾತುಕತೆ-ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥ ಪಡಿಸುವ ಬದಲು ಮಾಲೀಕರು ಬೀಗಮುದ್ರೆ ಹಾಕಿದರು. ಇದರಿಂದ ಕಾರ್ಮಿಕರು ಬೀದಿಪಾಲಾದ್ರು. ಕಾರ್ಮಿಕ ಮುಖಂಡರಾದ ಬಿ.ಕೆ.ಸುಂದರೇಶ್, ಎಚ್.ಎಂ.ರೇಣುಕಾಚಾರ್ಯ ಇವರು ನೆರವಿಗೆ ಧಾವಿಸಿದರು. ಇನ್ನೊಬ್ಬರ ಅಧೀನದಲ್ಲಿ ಕಾರ್ಯನಿರ್ವಹಿಸುವ ಬದಲಾಗಿ ಕಾರ್ಮಿಕರೇ ಏಕೆ ಸಂಸ್ಥೆಯನ್ನು ನಡೆಸಬಾರದು ಎಂಬ ಚಿಂತನೆ ಮೂಡಿತು.
ಪರಸ್ಪರ ಸಮಲೋಚನೆ, ಸಾಧಕ-ಬಾಧಕಗಳನ್ನು ಚರ್ಚಿಸಿ 1991 ರಂದು ಸಹಕಾರ ಸಾರಿಗೆ ಸಂಸ್ಥೆಯನ್ನು ಕಟ್ಟಲಾಯಿತು. ಕಾಮಿ೯ಕರು ಮಾಲಿಕರಾದರೆ ಎಷ್ಟು ಚೆಂದ ಅಲ್ವಾ.. ಹೌದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಸಹಕಾರಿ ಸಂಸ್ಥಯಲ್ಲಿ ಕಾಮಿ೯ಕರೇ ಮಾಲಕರು. ಮಲೆನಾಡು ಭಾಗದ ಶೃಂಗೇರಿ ಕೊಪ್ಪ ಕಳಸ ಎನ್ ಆರ್ ಪುರ ಈ ಭಾಗದ ಜನರ ಜೀವನಾಡಿಯಾಗಿ ದಿನದ 24 ಗಂಟೆ ಹಗಲು ರಾತ್ರಿಯನ್ನದೇ ನಿರಂತರ ಸೇವೆ ನೀಡುವ ಒಂದು ಖಾಸಗೀ ಸಂಸ್ಥೆ, ಸಹಕಾರಿ ಸಾರಿಗೆ ಸಂಸ್ಥೆ.
ಮಲೆನಾಡಿನಲ್ಲಿ ಸರಕಾರಿ ಬಸ್ಸುಗಳಿಗೆ ಕಾಯುತ್ತಿದ್ದರೆ ನೀವು ಮನೆ ಮುಟ್ಟುವುದೇ ಕಷ್ಟ. ಅಂತಹ ಪರಿಸ್ಥಿಯಲ್ಲಿ 1990 ದಶಕದಲ್ಲಿ ಕಾಮಿ೯ಕರ ಕನಸಿನ ಕುಸಾಗಿ ಹುಟ್ಟಿದ ಈ ಸಹಕಾರ ಸಾರಿಗೆ ಬಸ್ಸು ಇಂದು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಇಂದು ರಾಜ್ಯ ಮಾತ್ರವಲ್ಲ ಏಷಿಯಾದಲ್ಲೆಯೇ ಪ್ರಸಿದ್ಧಿ ಪಡೆಯುತ್ತಿದೆ. ಒಟ್ಟು 80 ಕ್ಕೂ ಹೆಚ್ಚು ಬಸ್ ಗಳನ್ನು ಈ ಸಂಸ್ಥೆ ಈಗ ಹೊಂದಿದೆ. ಒಟ್ಟಾರೆಯಾಗಿ ಸಹಕಾರ ಸಂಘದ ಸಾರಿಗೆ ಉದ್ಯಮದಲ್ಲಿ ಇದರ ಕಾಯ೯ಚಟುವಟಿಕೆ ಪ್ರಥಮ ಪ್ರಯೋಗ ಎಂದು ಜಪಾನ್ ದೇಶದ ಸಹಕಾರ ರಂಗದಿಂದ ಉತ್ತಮ ಸೇವಾ ಸಂಸ್ಥೆ ಎಂಬ ಬಿರುದನ್ನು ಪಡೆದಿದೆ.
ಒಟ್ಟಾರೆ ಏಷಿಯಾ ಖಂಡದಲ್ಲೇ ಈ ಸಹಕಾರಿ ಕ್ಷೇತ್ರ ಹೆಸರು ವಾಸಿಯಾಗಿದ್ದು. ಮಲೆನಾಡಿನ ಕುಗ್ರಾಮಗಳ ಹಳ್ಳಿಗರ ಪಾಲಿಗೆ ಒಂದು ಜೀವ ನದಿಯಾದ ಕೊಪ್ಪ ಸಹಕಾರಿ ಬಸ್ಸುಗಳು ಒಂದು ಮಾದರಿ ಅಷ್ಟೇ ಅಲ್ಲ ಮಲೆನಾಡಿನ ಆಥಿ೯ಕ -ಸಾಮಾಜಿಕ ಬೆಳವಣಿಗೆಯ ಕೈ ದಿವಿಗೆ ಎನ್ನಬಹುದು. ಎಲ್ಲರಿಗೂ ರಿಯಾಯಿತಿ ಪಾಸು ಕೊಡುವ ಈ ಹಸಿರು ಬಸ್ಸುಗಳು ಇಂದಿನ ಆಥಿ೯ಕ ಬಿಕ್ಕಟ್ಟಿನ ಅಥ೯ ಶಾಸ್ತ್ರಕ್ಕೆ ಭಾಷ್ಯ ಬರೆದ ಹೆಗ್ಗಳಿಕೆ ಕೊಪ್ಪದ ಸಹಕಾರಿ ಬಸ್ಸುಗಳಿಗೆ ಸಲ್ಲುತ್ತದೆ.