ಚಿಕ್ಕಮಗಳೂರು: ಜೂನ್ 27 ರಂದೂ ಚಿಕ್ಕಮಗಳೂರು ನಗರವನ್ನೇ ಬೆಚ್ಚಿ ಬೀಳಿಸಿದ್ದ ಉದ್ಯಮಿ ತೇಜಸ್ ಗೌಡ ಅಪಹರಣ ಪ್ರಕರಣ ಮತ್ತು ಜುಲೈ 5 ರಂದೂ ಆತ್ಮಹತ್ಯೆಗೆ ಶರಣಾಗಿದ್ದ ಡಿವೈಎಸ್ ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪ್ರವೀಣ್ ಖಾಂಢ್ಯನನ್ನು ಇಂದಿನಿಂದ 10 ದಿನಗಳ ಕಾಲ ಸಿಐಡಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ.
ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಆದ ದಿನದಿಂದ ತಲೆ ಮರೆಸಿಕೊಂಡಿದ್ದ ಪ್ರವೀಣ್ ಖಾಂಡ್ಯ ಕಳೆದ ತಿಂಗಳು ಈ ಕೇಸ್ ನಲ್ಲಿ ಬೇಲ್ ಕೂಡ ಪಡೆದುಕೊಂಡಿದ್ದ ಆದ್ರೆ ಕೆಲ ದಿನಗಳ ಹಿಂದೇ ಗ್ರಾಮಾಂತರ ಠಾಣೆಯ ಪೋಲಿಸರು ಇತನನ್ನು ವಶಕ್ಕೆ ಪಡೆದು ಜೈಲಿಗೆ ಕಳುಹಿಸಿದ್ರು ಕಾರಣ 2011 ರಲ್ಲಿ ದತ್ತಾಮಾಲ ಕಾರ್ಯಕ್ರಮದಲ್ಲಿ ಶಾಂತಿ ಕದಡಿದಾಗ ಪೋಲಿಸರ ಕೆಲಸಕ್ಕೆ ಅಡ್ಡಿ ಪಡಿಸಿದ ಹಿನ್ನಲೆಯಲ್ಲಿ ಈತನ ವಿರುದ್ದ ಪ್ರಕರಣ ದಾಖಲಾಗಿತ್ತು.ಹಲವಾರು ಬಾರೀ ವಾರೆಂಟ್ ಇಷ್ಯೂ ಮಾಡಿದ್ರೂ ಕೂಡ ಕೋರ್ಟ್ ಗೆ ಹಾಜರು ಆಗದ ಹಿನ್ನಲೆಯಲ್ಲಿ ಕೋರ್ಟ್ ಈತನಿಗೆ ಕಳೆದ ಕೆಲ ದಿನಗಳ ಹಿಂದೇ ನ್ಯಾಯಾಂಗ ಬಂಧನ ವಿಧಿಸಿತ್ತು.
ಇಂದು ಸಿಐಡಿ ಅಧಿಕಾರಿಗಳು ಕಲ್ಲಪ್ಪ ಹಂಡಿಭಾಗ್ ಮತ್ತು ತೇಜಸ್ ಗೌಡನ ಪ್ರಕರಣಕ್ಕೆ ಸಂಭದಿದಂತೆ ಹೆಚ್ಚಿನ ತನಿಖೆಗಾಗಿ ಜಿಲ್ಲಾ ಜೆಎಮ್ ಎಫ್ ಸಿ ನ್ಯಾಯಾಲಯದಲ್ಲಿ ಇತನನ್ನು ಸಿಐಡಿ ವಶಕ್ಕೆ ಪಡೆಯಲು ಅವಕಾಶ ಕೋರಿದ ಹಿನ್ನಲೆಯಲ್ಲಿ ನ್ಯಾಯಲಯ ಪ್ರವೀಣ್ ಖಾಂಡ್ಯನನ್ನು ಇಂದಿನಿಂದ 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ವಹಿಸಿದ್ದು, ಇದೇ ತಿಂಗಳು 16 ರ ವರೆಗೂ ಪ್ರವೀಣ್ ಖಾಂಡ್ಯ ಸಿಐಡಿ ಅಧಿಕಾರಿಗಳ ವಶದಲ್ಲಿ ಇರುತ್ತಾನೆ ಅಲ್ಲದೇ ಈಗಾಗಲೇ ವಿಚಾರಣೆ ಕೂಡ ಪ್ರಾರಂಭ ಆಗಿದ್ದು ಸಿಐಡಿ ಅಧಿಕಾರಿ ಧರಣೇಂದ್ರ ನೇತೃತ್ವದಲ್ಲಿ ತೇಜಸ್ ಗೌಡ ಅಪಹರಣ ಪ್ರಕರಣ ಮತ್ತು ಡಿವೈಎಸ್ ಪಿ ಕಲ್ಲಪ್ಪ ಹಂಡಿಭಾಗ್ ಪ್ರಕರಣದ ಸಂಭದಿಸಿದಂತೆ ವಿಚಾರಣೆಯನ್ನು ನೆಡೆಸಲಾಗುತ್ತಿದೆ.