News Kannada
Tuesday, November 29 2022

ಕರ್ನಾಟಕ

ಎಪಿಎಂಸಿ ಚುನಾವಣೆ: ಶಾಂತಿಯುತ ಮತದಾನ, ನಾಳೆ ಮತ ಎಣಿಕೆ - 1 min read

Photo Credit :

ಎಪಿಎಂಸಿ ಚುನಾವಣೆ: ಶಾಂತಿಯುತ ಮತದಾನ, ನಾಳೆ ಮತ ಎಣಿಕೆ

ಮಡಿಕೇರಿ:  ಕೃಷಿಕ ಸಮುದಾಯದ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕೊಡಗಿನ ಮಡಿಕೇರಿ, ಕುಶಾಲನಗರ ಮತ್ತು ಗೋಣಿಕೊಪ್ಪಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ 32 ಕ್ಷೇತ್ರಗಳಿಗೆ ಗುರುವಾರ ಶಾಂತಿಯುತ ಮತದಾನ ನಡೆಯಿತು.

ಮೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಒಟ್ಟು 37 ಸ್ಥಾನಗಳಲ್ಲಿ 5 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿರುವುದರಿಂದ 32 ಕ್ಷೇತ್ರಗಳಿಗಷ್ಟೆ ಚುನಾವಣೆ ನಡೆದಿದ್ದು, ಈ ಕ್ಷೇತ್ರಗಳಲ್ಲಿ ಒಟ್ಟು 80 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗಾಗಿ ವಿವಿಧ ಪಕ್ಷಗಳ ಬೆಂಬಲದೊಂದಿಗೆ ಹಾಗೂ ಸ್ವತಂತ್ರವಾಗಿ ಕಣಕ್ಕಿಳಿದಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ಒಟ್ಟು 74,977 ಮತದಾರರಿದ್ದು, ಮತದಾನ ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿದ್ದ 97 ಮತಗಟ್ಟೆಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನೊಂದಿಗೆ ಬೆಳಗ್ಗೆ 8 ರಿಂದ ಸಂಜೆ 4ಗಂಟೆಯವರೆಗೆ ನಡೆಯಿತು. ಮತ ಎಣಿಕೆ ಕಾರ್ಯ ಜ.14 ರಂದು ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟಗೊಳ್ಳಲಿದೆ.

ವರ್ತಕರ ಕ್ಷೇತ್ರದಲ್ಲಿ 37 ಮತದಾರರು: ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವರ್ತಕರ ಕ್ಷೇತ್ರದ ಚುನಾವಣೆಯ ಮತದಾನಕ್ಕೆ ಕನಿಷ್ಠ 37 ಮತದಾರರಿದ್ದು, ಮತದಾನ ಪ್ರಕ್ರಿಯೆ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ನಡೆಯಿತು. ಬೆರಳೆಣಿಕೆಯ ಮತದಾರರಿದ್ದರೂ, ಇರುವವರನ್ನು ತಮ್ಮತ್ತ ಸೆಳೆೆಯುವ ಪ್ರಯತ್ನವನ್ನು ವಿವಿಧ ಪಕ್ಷಗಳು ತಮ್ಮ ಅಭ್ಯರ್ಥಿಯ ಪರವಾಗಿ ಚುನಾವಣಾ ಕೇಂದ್ರದ ಹೊರ ಭಾಗ ನಡೆಸುತ್ತಿದ್ದುದು ಕಂಡು ಬಂತು.

ವರ್ತಕರ ಈ ಕ್ಷೇತ್ರದಲ್ಲಿ  ಬಿಜೆಪಿ ಬೆಂಬಲಿತ  ಡಿ.ಎಸ್. ಅನಿಲ್ ಕುಮಾರ್ ಹಾಗೂ ಕಾಂಗ್ರೆಸ್ ಬೆಂಬಲಿತ ಎಂ.ಎ.ಮಹಮ್ಮದ್ ಶಾಲಿ ಸ್ಪರ್ಧಿಸಿದ್ದಾರೆ.

ಅವಿರೋಧ ಆಯ್ಕೆಯ ಸ್ಥಾನಗಳು: ಮಡಿಕೇರಿ ತಾಲ್ಲೂಕಿನಲ್ಲಿ ಕೃಷಿಕರ ಕ್ಷೇತ್ರದಲ್ಲಿ ನರಿಯಂದಡ, ನಾಪೋಕ್ಲು ಮತ್ತು ಮರಗೋಡು-3, ಸಹಕಾರ ಸಂಸ್ಕರಣ ಸಂಘಗಳ ಕ್ಷೇತ್ರಗಳು-1, ವೀರಾಜಪೇಟೆ ತಾಲ್ಲೂಕಿನಲ್ಲಿ ಪೊನ್ನಂಪೇಟೆ-1, ಒಟ್ಟು 4 ಕೃಷಿಕರ ಕ್ಷೇತ್ರಕ್ಕೆ ಹಾಗೂ ಸಹಕಾರ ಸಂಸ್ಕರಣ ಸಂಘಗಳ ಕ್ಷೇತ್ರ -1 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ.

ಮತ ಎಣಿಕೆ : ಮತ ಎಣಿಕಾ ಕಾರ್ಯ ಜ.14 ರಂದು ಬೆಳಿಗ್ಗೆ 8  ಗಂಟೆಯಿಂದ ಪ್ರಾರಂಭವಾಗಲಿದೆ. ಮಡಿಕೇರಿ ತಾಲ್ಲೂಕಿನ ಮತ ಎಣಿಕೆ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ, ವೀರಾಜಪೇಟೆ ತಾಲ್ಲೂಕಿನ ಮತ ಎಣಿಕೆ ಅಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ಸೋಮವಾರಪೇಟೆ ತಾಲ್ಲೂಕಿನ ಮತ ಎಣಿಕೆ ಅಲ್ಲಿನ ಜೂನಿಯರ್ ಕಾಲೇಜ್ ನಲ್ಲಿ ನಡೆಯಲಿದೆ.

See also  ಕೇರಳದ ಜನತೆ ಕೋಮುವಾದಿ ಪಕ್ಷಕ್ಕೆ ಅವಕಾಶ ಕೊಡಬಾರದು: ಸಿದ್ಧರಾಮಯ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು