ಚಿಕ್ಕಮಗಳೂರು: ನಗರದ ನಾಗಲಕ್ಷ್ಮಿ ಚಿತ್ರ ಮಂದಿರದ ಎದುರು ಪಟಾಕಿ ಸಿಡಿಸಿದವರ ಮೂಲಕವೇ ಸ್ವಚ್ಚಗೊಳಿಸುವಂತೆ ಮಾಡಿದ ಬೆನ್ನಲ್ಲಿಯೇ ಮೂಡಿಗೆರೆ ಪಟ್ಟಣದಲ್ಲಿ ಪೊಲೀಸ್ ಠಾಣೆ ಎದುರೇ ಅನುಮತಿ ರಹಿತವಾಗಿ ಪಟಾಕಿ ಸಿಡಿಸಿದರೂ ಪೊಲೀಸರು ಯಾರೂ ಕೂಡ ಕಮಕ ಕಿಮಕ್ ಅನ್ನದಿರುವುದು ಕಂಡು ಬಂದಿದೆ.
ಎಸ್ಪಿ ಅಣ್ಣಾಮಲೈ ನಗರದ ಇಂದಿರಾಗಾಂಧಿ ರಸ್ತೆಯಲ್ಲಿ ನಾಗಲಕ್ಷ್ಮೀ ಚಲನಚಿತ್ರ ಮಂದಿರದ ಎದುರು ಲೀ ಹೆಸರಿನ ಚಲನಚಿತ್ರದ ಬಿಡುಗಡೆ ಸಮಯದಲ್ಲಿ ಅಭಿಮಾನಿಗಳು ಪಟಾಗಿ ಸಿಡಿಸಿದ್ದರು. ಅದೇ ದಾರಿಯಲ್ಲಿ ಬಂದ ಎಸ್ಪಿ ಕೆ. ಅಣ್ಣಾಮಲೈ ಇದನ್ನು ಕಂಡು ವಾಹನ ನಿಲ್ಲಿಸಿ ವಿಚಾರಿಸಿದರು. ಅನಂತರ ಪಟಾಕಿ ಸಿಡಿಸಿದವರ ಮೂಲಕವೇ ಸ್ಥಳವನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಅಣ್ಣಾಮಲೈ ಸ್ವಚ್ಚಗೊಳಿಸುವಂತೆ ಮಾಡಿದ ಘಟನೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನೊಂದು ಕಡೆಗೆ ಮೂಡಿಗೆರೆ ಪಟ್ಟಣದ ಗೆಂಡೆಹಳ್ಳಿ ರಸ್ತೆಯಲ್ಲಿ ಪೊಲೀಸ್ ಠಾಣೆಯ ಮುಂಭಾಗದ ವೃತ್ತದ ಬಳಿ ಪಟಾಕಿ ಸಿಡಿಸಿದರೂ ಪೊಲೀಸರು ಚಕಾರ ಎತ್ತಿಲ್ಲ. ಪಟಾಕಿ ಸಿಡಿಸಲು ಅನುಮತಿಯನ್ನು ಮುಂಚಿತವಾಗಿ ಪೊಲೀಸ್ ಇಲಾಖೆಯಿಂದ ಪಡೆದಿಲ್ಲ. ಮೂಡಿಗೆರೆಯಲ್ಲಿ ಪಟಾಕಿ ಸಿಡಿಸಿರುವ ಪಟಾಕಿ ಸ್ಪೋಟದ ನಂತರ ಛಿದ್ರಗೊಂಡಿರುವ ಹೋದ ಪೇಪರ್ ಗಳು ಕಸದ ರಾಶಿಯಾಗಿ ವೃತ್ತದ ತುಂಬಾ ಹರಡಿರುವುದು ಕಂಡು ಬಂದಿದೆ. ನೆರೆದಿದ್ದ ಜನರನ್ನು ಯಾರು, ಯಾಕೆ ಪಟಾಕಿ ಸಿಡಿಸಿದ್ದಾರೆ ಎನ್ನುವುದು ಆಸುಪಾಸಿನ ಜನರಿಗೆ ಗೊತ್ತಿಲ್ಲ.
ಒಂದು ಕಡೆ ಸರಕಾರ ಸ್ವಚ್ಚತೆಗೆ ಮಹತ್ವ ನೀಡಿ ವ್ಯಾಪಕ ಪ್ರಚಾರ ನಡೆಸುತ್ತಿದ್ದು, ಕೋಟ್ಯಂತರ ರೂ.ಗಳನ್ನು ವ್ಯಹಿಸುತ್ತಿದೆ. ಈ ನಡುವೆ ವಿವಿಧ ಸಂಘಟನೆಗಳು ಅಲ್ಲಲ್ಲಿ ಕಸವನ್ನು ತೆರವುಗೊಳಿಸುವಂತೆ ಮಾಧ್ಯಮಗಳಲ್ಲಿ ಸುದ್ದಿ ಸಹಿತ ಚಿತ್ರಗಳು ಪ್ರಕಟವಾಗುವುದನ್ನು ನಾವು ಕಾಣುತ್ತೇವೆ. ಆದರೆ ಸ್ವಚ್ಚವುಳ್ಳ ಪ್ರದೇಶದ ರಸ್ತೆಯಲ್ಲಿ ಪಟಾಕಿ ಸಿಡಿಸಿ ಸ್ವಚ್ಚತೆಗೆ ಭಂಗ ತರುವುದು ಯಾವ ನ್ಯಾಯ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದ.