News Kannada
Friday, December 02 2022

ಕರ್ನಾಟಕ

ಮಲೆನಾಡಿನ ಜನರನ್ನು ಬೆಚ್ಚಿಬೀಳಿಸಿದ ಹನಿಟ್ರಾಪ್ ಪ್ರಕರಣ: 6 ಜನರ ಬಂಧನ

Photo Credit :

ಮಲೆನಾಡಿನ ಜನರನ್ನು ಬೆಚ್ಚಿಬೀಳಿಸಿದ ಹನಿಟ್ರಾಪ್ ಪ್ರಕರಣ: 6 ಜನರ ಬಂಧನ

ಈ ಪ್ರಕರಣ ಮಲೆನಾಡಿನಲ್ಲಿ ತಲ್ಲಣವನ್ನು ಮೂಡಿಸಿದೆ. ಪ್ರತಾಂತವಾಗಿರುವ ಮಲೆನಾಡಿನಲ್ಲಿ ಹನಿಟ್ರಾಪ್ ಮೂಲಕ ನಡೆಯುತ್ತಿದ್ದ ದಂಧೆಯ ಕರಾಳ ಮುಖ ಅನಾವರಣವಾಗಿದೆ. ಶ್ರೀಮಂತರನ್ನು ಗುರಿಯಾಗಿಸಿ ನಡೆಯುವ ಹನಿಟ್ರಾಪ್ ಗೆ ಒಳಾಗಿರುವ ಸಂಖ್ಯೆಯೂ ದಿನದಿನಕ್ಕೆ ಬೆಳೆಯುತ್ತಿದೆ. ಸದ್ಯ ಹನಿಟ್ರಾಪ್ ನಡೆಸುತ್ತಿದ್ದವರು ಪೊಲೀಸ್ ಕಾರ್ಯಚಾರಣೆಯಲ್ಲಿ ಸಿಕ್ಕಿಬಂದಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ…

ಹೇಳಿ ಕೇಳಿ ಚಿಕ್ಕಮಗಳೂರು ಜಿಲ್ಲೆ ಪ್ರವಾಸದ್ಯೋಮ ಕ್ಷೇತ್ರದಲ್ಲಿ ದಿನ ದಿನಕ್ಕೆ ಹೆಸರುವಾಸಿಯಾಗುತ್ತಿದೆ. ಇಲ್ಲಿ ರೆಸಾರ್ಟ್, ಹೋಸ್ಟೇಗಳಿಗೆ ಬರವೇ ಇಲ್ಲ, ಲೆಕ್ಕವೇ ಇಲ್ಲದಷ್ಟು ಹೋಸ್ಟೇಗಳು ನಿರ್ಮಾಣವಾಗುತ್ತಿದೆ. ಇದನ್ನೇ ಕೆಲವರು ಅಕ್ರಮ ಚಟುವಟಿಕೆಯ ತಾಣವನ್ನಾಗಿಯೂ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ತೋಟದ ಮನೆಯೊಂದರಲ್ಲಿ ನಡೆದಿರುವ ಘಟನೆ ಇಡೀ ಮಲೆನಾಡಿನ ಜನರನ್ನು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಶ್ರೀಮಂತ ಪುರುಷರನ್ನು ಲೈಂಗಿಕ ಸುಖದ ಆಸೆಗೆ ಇಲ್ಲಿಗೆ ಕರೆತರುತ್ತಿದ್ದರು, ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದನ್ನ ವಿಡಿಯೋ ರೆಕಾರ್ಡ್ ಮಾಡುತ್ತಿದ್ದರು ನಂತರ ಆ ವಿಡಿಯೋವನ್ನಿಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ 6 ಜನರ ತಂಡವನ್ನು ಚಿಕ್ಕಮಗಳೂರಿನ ನರಸಿಂಹರಾಜಪುರ ಪೊಲೀಸರು ಬೇಧಿಸಿದ್ದಾರೆ. ಹನಿಟ್ರಾಪ್ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು 6 ಜನರನ್ನು ಬಂಧಿಸಿದ್ದಾರೆ.

ನರಸಿಂಹರಾಜಪುರ ತಾಲ್ಲೂಕಿನ ತೋಟದ ಮನೆಯೊಂದರಲ್ಲಿ ಹಲವಾರು ಹನಿಟ್ರಾಪ್ ಪ್ರಕರಣಗಳು ನಡೆದಿವೆ ಎಂಬ ಗುಮಾನಿಯ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಮಹಿಳೆಯರೂ ಸೇರಿದಂತೆ 6 ಜನರನ್ನು ಬಂಧಿಸಿದ್ದಾರೆ. ಕಳೆದ 3 ತಿಂಗಳ ಹಿಂದೆಯೇ ಜಿಲ್ಲೆಯಲ್ಲಿ ಹನಿಟ್ರಾಪ್ ಪ್ರಕರಣಗಳು ನಡೆಯುತ್ತಿವೆ ಎಂಬ ಮಾಹಿತಿ ಪೊಲೀಸರಿಗೆ ದೊರೆತಿತ್ತು. ಈ ಬಗ್ಗೆ ಕಾರ್ಯಾಚರಣೆ ನಡೆಸಿದಾಗ ಇದು ಖಚಿತವಾಯಿತಾದರೂ ಯಾರೂ ಸಹ ದೂರು ಸಲ್ಲಿಸದ ಹಿನ್ನೆಲೆ ಪ್ರಕರಣ ದಾಖಲಾಗಿರಲಿಲ್ಲ.

ಆದರೆ ಒಂದು ವಾರದ ಹಿಂದೆ ಶಿವಮೊಗ್ಗದ ವ್ಯಕ್ತಿಯೊಬ್ಬರು ಹನಿಟ್ರಾಪ್ ಗೆ ಬಲಿಯಾಗಿರುವ ವಿಚಾರ ತಿಳಿದ ನಂತರ ಮತ್ತೊಮ್ಮೆ ಪೊಲೀಸರು ಕಾರ್ಯಾಚರಣೆಗೆ ಇಳಿದರು. ಇದೇ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಹನಿಟ್ರಾಪ್ ಬಗ್ಗೆ ದೂರು ಸಲ್ಲಿಸಿದ ನಂತರ ಪೊಲೀಸರಿಗೆ ಹೆಚ್ಚಿನ ಬಲ ಬಂದಿತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ನರಸಿಂಹರಾಜಪುರ ತಾಲ್ಲೂಕಿನ ಪ್ರಕಾಶ್, ನರೇಂದ್ರ, ನಿಜೇಶ್, ಅರುಣ, ಖೈರುನ್ನಿಸ್ಸಾ ಹಾಗೂ ರುಕ್ಸಾನ ಎಂಬುವವರನ್ನು ಬಂಧಿಸಿದ್ದಾರೆ.

ಒಟ್ಟಾರೆಯಾಗಿ ಖೈರುನ್ನಿಸ್ಸಾ ಹಾಗೂ ರುಕ್ಸಾನ ಎಂಬುವವರು ಪಾರ್ಟಿಗಳು, ಇನ್ನಿತರೆ ಕಾರ್ಯಕ್ರಮಗಳಿಗೆ ಹೋಗಿ ಅಲ್ಲಿ ಹಣವಂತರ ಪರಿಚಯ ಮಾಡಿಕೊಳ್ಳುತ್ತಿದ್ದರು. ಆ ನಂತರ ತಮ್ಮ ತೋಟದ ಮನೆಗೆ ಬರುವಂತೆ ಆಹ್ವಾನಿಸಿ ಬಲವಂತವಾಗಿ ಕರೆದೋಯ್ಯುತ್ತಿದ್ದರು. ಅಲ್ಲಿ ಅವರನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸುತ್ತಿದ್ದರು. ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದನ್ನು ಕದ್ದು ಮುಚ್ಚಿ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದರು.ವೀಡಿಯೋ ಚಿತ್ರೀಕರಣ ಮಾಡಿರುವ ವಿಚಾರವನ್ನು ಅವರಿಗೆ ತಿಳಿಸಿ ಅವರಿಂದ ಹಣಕ್ಕಾಗಿ ಬ್ಲಾಕ್ಮೇಲ್ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

ಈ ರೀತಿಯಾಗಿ ಒಬ್ಬೊಬ್ಬರಿಂದ ಲಕ್ಷಾಂತರ ರೂ. ಪಡೆದುಕೊಂಡಿದ್ದಾರೆ. ನರಸಿಂಹರಾಜಪುರ, ಶಿವಮೊಗ್ಗ ಸೇರಿದಂತೆ ಹಲವೆಡೆಯ ಜನ ಈ ಟ್ರಾಪ್ ಗೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ. ಆದರೆ ಮರ್ಯಾದೆ ಹೋಗುತ್ತದೆ ಎಂಬ ಕಾರಣದಿಂದ ಹಲವರು ದೂರು ಸಲ್ಲಿಸುತ್ತಿಲ್ಲ, ಹನಿಟ್ರಾಪ್ ಪ್ರಕರಣಗಳಲ್ಲಿ ಇನ್ನೂ ಯಾರ್ಯಾರು ಬಾಗಿಯಾಗಿದ್ದಾರೆ. ಇದರ ಕದಂಬಬಾಹು ಎಲ್ಲಿಯವರೆಗೆ ಹರಡಿದೆ ಎಂಬುದು ವಿಚಾರಣೆಯ ನಂತರವೇ ತಿಳಿದುಬರಲಿದೆ. ಒಟ್ಟಾರೆ ಮಲೆನಾಡಿನಲ್ಲಿ ಈ ಪ್ರಕರಣ ಭಾರೀ ಸಂಚಲವನ್ನೇ ಮೂಡಿಸಿದೆ.

See also  ಮಹಿಳೆಗೆ ಕರೆ ಮಾಡಿ ಪೀಡಿಸುತ್ತಿದ್ದ ವ್ಯಕ್ತಿಗೆ ಗೂಸಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು