ಚಿಕ್ಕಮಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆಂದು ಬಂದು, ಉಡ ಬೇಟೆಯಾಡಿ, ಪ್ರಕರಣದಲ್ಲಿ ಸಿಕ್ಕಿಹಾಕೊಂಡಿದ್ದ ನಾಲ್ವರು ರಕ್ಷಣೆಗೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಅಳಿಯ ನಿಂತಿದ್ದಾರೆ ಅನ್ನೋ ಆರೋಪ ಕೇಳಿಬರುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಕೊಪ್ಪ ರಕ್ಷಿತಾ ಅರಣ್ಯ ವಿಭಾಗದಲ್ಲಿ ಹೊಸ ವರ್ಷದ ಆಚರಣೆಯ ಹಿನ್ನಲೆಯಲ್ಲಿ ಉಡ ಬೇಟೆಯಾಡಿ ಕೊಂದು ಅದರ ಭಕ್ಷ್ಯವನ್ನು ಸಿದ್ದಾರ್ಥ್ ಅವರ ರೆಸಾರ್ಟ್ ನಲ್ಲಿ ಪಾರ್ಟಿ ಮಾಡೋ ಮೂಲಕ ಮಾಡಿದ್ದರು ಎಂಬ ಆರೋಪ ಕೇಳಿ ಬರುತ್ತಿದ್ದು, ನಂತರ ಅದರ ಫೋಟೋವನ್ನ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದರು. ಈ ಸಂಬಂಧ ಬಾಳೆಹೊನ್ನೂರು ಅರಣ್ಯ ವಿಭಾಗದಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ರಜಿಯಾ ಶಬ್ನಮ್ ಗೆ ನ ಬಾಳೆಹೊನ್ನೂರು ಸಮೀಪವಿರುವ ರೆಸಾರ್ಟ್ ನಲ್ಲಿ ಮ್ಯಾನೇಜರ್ ನಿಶ್ಚಿತ್ ಸೇರಿದಂತೆ ಹಲವರು ಆರೋಪಿಗಳನ್ನ ರಕ್ಷಿಸಲಾಗುತ್ತದೆಯೆಂದು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್ ತನಿಖೆ ನಡೆಸುವಂತೆ ಬೆಂಗಳೂರಿನಲ್ಲಿ ಮುಖ್ಯ ಅರಣ್ಯಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.