ಚಿಕ್ಕಮಗಳೂರು: ಪೋಲಿಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿರುವ ಚಿಕ್ಕಮಗಳೂರಿನ ಇಬ್ಬರೂ ಪೋಲಿಸ್ ಅಧಿಕಾರಿಗಳು ಶ್ಲಾಘನೀಯ ಸೇವೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಮುಖವಾಗಿ 1994 ರಲ್ಲಿ ಪೋಲಿಸ್ ಇಲಾಖೆಯಲ್ಲಿ ಸೇವೆಗೆ ಸೇರಿದ ಕೆ,ಆರ್ ಸುನೀತ ಅವರು ಇಲಾಖೆಯಲ್ಲಿ ಸಾಕಷ್ಟು ಜನ ಮನ್ನಣೆಗಳಿಸುವಂತಹ ಕೆಲಸ ಮಾಡಿದ್ದು ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೇ ಎ.ಎಸ್.ಐ ಯಿಂದ ಪಿ.ಎಸ್.ಐ ಆಗಿ ಬಡ್ತಿಯನ್ನು ಹೊಂದಿದ್ದು ಪ್ರಸ್ತುತ ಎನ್.ಆರ್.ಪುರ ತಾಲೂಕಿನ ಪೋಲಿಸ್ ಠಾಣೆಯಲ್ಲಿ ಠಾಣಾಧಿಕಾರಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಅಲ್ಲದೇ ಇನ್ನೋಬ್ಬ ಅಧಿಕಾರಿ ಕೆ,ಪುದ್ದ ಅವರು ಕೂಡ ಶ್ಲಾಘನೀಯ ಸೇವೆ ಪ್ರಶಸ್ತಿಗೆ ಭಾಜನರಾಗಿದ್ದು ಇವರು ಪೋಲಿಸ್ ಇಲಾಖೆಯಲ್ಲಿ 1985 ರಿಂದ ಸೇವೆಯನ್ನು ಸಲ್ಲಿಸುತ್ತಿದ್ದು. ಇಲಾಖೆಯಲ್ಲಿ ಸಲ್ಲಿಸಿರುವ ಸೇವೆಯನ್ನು ಮನಗಂಡು ಅವರಿಗೂ ಶ್ಲಾಘನೀಯ ಸೇವೆ ಪ್ರಶಸ್ತಿಯನ್ನು ವಿತರಿಸಲಾಗುತ್ತಿದೆ. ಇವರು ಸಹ ಎ.ಎಸ್. ಐ ಯಿಂದ ಪಿ.ಎಸ್.ಐ ಯಾಗಿ ನಾಲ್ಕು ತಿಂಗಳ ಹಿಂದೇ ಬಡ್ತಿಯನ್ನು ಪಡೆದಿದ್ದು ಕೊಪ್ಪ ತಾಲೂಕಿನ ಹರಿಹರಪುರ ಪೋಲಿಸ್ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇದೇ ತಿಂಗಳ 26ರ ಗಣರಾಜ್ಯೋತ್ಸವ ದಿನದಂದು ಬೆಂಗಳೂರಿನಲ್ಲಿ ಪ್ರಶಸ್ತಿಯನ್ನು ಸ್ವೀಕಾರ ಮಾಡಲಿದ್ದು ಈ ಇಬ್ಬರೂ ಅಧಿಕಾರಿಗಳಿಗೆ ಜಿಲ್ಲಾ ಎಸ್ವಿ ಅಣ್ಣಮಲೈ ಅವರು ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ.