ಚೆಟ್ಟಳ್ಳಿ: ಜೇನು ಸಾಕಾಣೆಗೆ ಉತ್ತೇಜ ನೀಡುವ ಉದ್ದೇಶದಿಂದ ಅರಣ್ಯ ಇಲಾಖೆ ಫಲಾನುಭವಿಗಳನ್ನು ಗುರುತಿಸಿ ಸುಮಾರು 4 ಸಾವಿರ ಬೆಲೆ ತಗಲುವ ಜೇನು ಪೆಟ್ಟಿಗೆ ಹಾಗು ಅದರಲ್ಲಿ ಜೇನು ಹುಳುಗಳನ್ನು ಸೇರಿಸಿ ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡದವರಿಗೆ ವಿತರಿಸಲಾಗುತ್ತಿದೆ.
ಅರಣ್ಯಇಲಾಖೆಯ ಪ್ರತೀ ವಲಯ ಮಟ್ಟಕ್ಕೂ200 ಜೇನು ಪೆಟ್ಟಿಗೆಯನ್ನು ವಿತರಿಸಲಾಗಿದು ಗುರುತಿಸಿದ ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡದವರಿಗೆ ಜೇನು ಪೆಟ್ಟಿಗೆ, ಹುಳಗಳ ನಿರ್ವಹಣೆ, ಜೇನು ಸಾಕಾಣಿಕೆಯ ಪ್ರಯೋಜನೆಯ ಬಗ್ಗೆ ನುರಿತರಿಂದ ತರಬೇತಿಯನ್ನು ನೀಡಲಾಗುತಿದ್ದು, ಮುಂದಿನ ದಿನಗಳಲ್ಲೂ ಪರಿಶೀಲಿಸುತಿರುವ ಬಗ್ಗೆ ಅರಣ್ಯಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷವೂ ಕೆಲವು ಫಲಾನುಭವಿಗಳಿಗೆ ಜೇನು ಪೆಟ್ಟಿಗೆಯನ್ನು ವಿತರಿಸಲಾಗಿತ್ತು.
ಕರ್ನಾಟಕ ಅರಣ್ಯ ಇಲಾಖೆ ಹಾಗು ಮಡಿಕೇರಿ ವಿಭಾಗ ವತಿಯಿಂದ ಕುಶಾಲನಗರದ ಅರಣ್ಯ ಇಲಾಖೆಯಲ್ಲಿ ಆಯ್ದ 200 ಜೇನು ಕೃಷಿಯ ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡದ ಫಲಾನ್ನು ಗುರುತಿಸಿ2016-17ನೇ ಸಾಲಿನ ಜೇನುಸಾಕಾಣೆ ಪೆಟ್ಟಿಗೆ ವಿತರಣಾ ಸಮಾರಂಭದಡಿ ಪ್ರತಿಯೊಬ್ಬ ಫಲಾನುಭವಿಗೆ 5ಜೇನು ಪೆಟ್ಟಿಗೆಯನ್ನುನೀಡಲಾಗಿದ್ದು ಇದರಿಂದ ಕೊಡಗಿನಲ್ಲಿ ಜೇನುಕೃಷಿಗೆ ಸಹಕಾರ ನೀಡಿದಂತಾಗಲಿದೆಂದು ಅರಣ್ಯ ಇಲಾಖಾಧಿಕಾರಿಗಳು ಹೇಳಿದರು.