ಮಡಿಕೇರಿ: ವಿಧಾನ ಸಭಾ ಮಾಜಿ ಅಧ್ಯಕ್ಷ ಹಾಗೂ ಪ್ರಸ್ತುತ ವಿರಾಜಪೇಟೆ ಕ್ಷೇತ್ರದ ಶಾಸಕ ಕೊಂಬಾರನ ಜಿ.ಬೋಪಯ್ಯ ಹಾಗೂ ಕುಂತಿ ದಂಪತಿ ಜೇಷ್ಠ ಪುತ್ರಿ ಪ್ರಜ್ಞಾ ಹಾಗೂ ಬೆಂಗಳೂರಿನ ಚೆಟ್ಟಿಮಾಡ ಪ್ರಭಾ ಮತ್ತು ದಿ. ಕಾರ್ಯಪ್ಪ ಅವರ ಪುತ್ರ ವೈಭವ ಇವರ ವಿವಾಹ ಸಮಾರಂಭವು ಜ.29 ರಂದು ಮಡಿಕೇರಿಯ ಕ್ರಿಸ್ಟಲ್ ಹಾಲ್ ನಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ವಿವಾಹ ಸಮಾರಂಭಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ರಾಜ್ಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ತಿನ ಅಧ್ಯಕ್ಷ ಡಿ.ಹೆಚ್.ಶಂಕರ್ ಮೂರ್ತಿ, ಶಾಸಕ ಅಪ್ಪಚ್ಚು ರಂಜನ್, ಮಾಜಿ ಉಪಮುಖ್ಯ ಮಂತ್ರಿ ಆರ್.ಅಶೋಕ್, ಮಾಜಿ ಸಚಿವ, ಚಿತ್ರ ನಟ ಅಂಬರೀಶ್, ಮಾಜಿ ಸಚಿವರಾದ ಸಿ.ಟಿ.ರವಿ, ವಿ.ಸೋಮಣ್ಣ, ಎಂ.ಸಿ.ನಾಣಯ್ಯ, ಬಿ.ಎ.ಜೀವಿಜಯ, ಮಾಜಿ ಸಂಸದೆ ತೇಜಸ್ವಿ ರಮೇಶ್, ಎಂ.ಎಲ್.ಸಿಗಳಾದ ಸುನಿಲ್ ಸುಬ್ರಮಣಿ, ಚಿಕ್ಕಮಗಳೂರು ಎಂ.ಎಲ್.ಸಿ ಪ್ರಾಣೇಶ್, ಮಾಜಿ ಎಂಎಲ್.ಸಿ ಅರುಣ್ ಮಾಚಯ್ಯ, ಕೆ.ಪಿ.ಎಸ್.ಸಿ ಆಯುಕ್ತ ಶ್ಯಾಮ್ ಭಟ್ ಸೇರಿದಂತೆ ಹಲವಾರು ರಾಜಕಾರಣಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಆಗಮಿಸಿ ನೂತನ ದಂಪತಿಗೆ ಶುಭ ಹಾರೈಸಿದರು