ಚಿಕ್ಕಮಗಳೂರು: ರಾಜ್ಯದಲ್ಲೆಡೆ ಸರಿಯಾದ ಸಮಯಕ್ಕೆ ಮಳೆಬಾರದೇ ನೀರಿಗಾಗಿ ತತ್ತರ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಮಲೆನಾಡು ಜಿಲ್ಲೆಯಾದ ಚಿಕ್ಕಮಗಳೂರಿನಲ್ಲಿಯೂ ಹನಿ ಹನಿ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದ್ದು ಕುಡಿಯುವ ನೀರಿಗಾಗಿಯೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿರುವ ಕುರಿತು ಒಂದು ವರದಿ ಇಲ್ಲಿದೇ ನೋಡಿ…
ಹೌದು.. ರಾಜ್ಯದಲ್ಲಿ ಈ ಬಾರಿ ಎಂದೂ ಬಾರದ ಭೀಕರ ಬರಗಾಲ ಆವರಿಸಿದೆ. ರಾಜ್ಯದ ಎಲ್ಲಾ ಜಲಾಶಯಗಳು ನೀರಿಲ್ಲದೆ ಒಣಗ ತೊಡಗಿದೆ. ಹನಿ ಹನಿ ನೀರಿಗಾಗಿಯೂ ಪರದಾಡುವಂತಹ ಸ್ಥಿತಿ ನಿರ್ಮಾಣ ಆಗಿದೆ. ಭೀಕರ ಬರಗಾಲದ ಛಾಯೆ ಚಿಕ್ಕಮಗಳೂರಿಗೂ ಆವರಿಸಿದ್ದು ನಗರದ 34 ನೇ ರಾಮನಹಳ್ಳಿ ವಾರ್ಡ್ ಗೆ ನೀರು ಸರಬರಾಜು ಆಗಿ 4 ದಿನಗಳೇ ಕಳೆದು ಹೋಗಿದೆ.
ಈ ವಾರ್ಡ್ ನಲ್ಲಿ ಪೋಲಿಸರ ಕುಟುಂಬಗಳೇ ಹೆಚ್ಚು ಪೋಲಿಸರ ಕ್ವಾಟ್ರರ್ಸ್ ಕೂಡ ಇದೇ ವಾರ್ಡ್ ನಲ್ಲಿ ಬರುತ್ತದೆ. ಆದ್ರೂ ಕೂಡ ಇಲ್ಲಿಗೇ 4 ದಿನಗಳಿಂದ ನೀರು ಸರಬರಾಜು ಆಗುತ್ತಿಲ್ಲ. ಈ ವಾರ್ಡ್ ನ ಜನರು ಹನಿ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದ್ದು ಪ್ರತಿ ದಿನ ಬೆಳಗ್ಗೆ ನೀರು ಬರುತ್ತೆ ಎಂದೂ ಖಾಲಿ ಕೊಡಗಳನ್ನು ಹಿಡಿದು ನಿಲ್ಲೋದು ಪ್ರತಿನಿತ್ಯ ಸಾಮಾನ್ಯವಾಗಿ ಬಿಟ್ಟಿದೆ.ಇನ್ನು ಈ ವಾರ್ಡ್ ನಗರಸಭೆ ಸದಸ್ಯರಿಗೆ ಇಲ್ಲಿನ ಜನರು ಕೇಳಿದ್ರೆ ನೀರು ಬರುತ್ತೆ ಎಂದೂ ಹಾರಿಕೆ ಉತ್ತರವನ್ನು ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ರಾಮನಹಳ್ಳಿ ನೀರಿನ ಶುದ್ದಿಕರಣ ಘಟಕಕ್ಕೆ ಬೀಗ ಜಡಿಯಲಾಗಿದ್ದು ಈ ಘಟಕಕ್ಕೆ ನೀರು ಬರ್ತಿದ್ಯೋ ಅಥವಾ ವಿದ್ಯುತ್ ಸಮಸ್ಯೆಯಿಂದ ಹೀಗೇ ಆಗುತ್ತಿದ್ಯೋ ಅಥವಾ ಮಿಷನ್ ಗಳು ಕೆಟ್ಟು ನಿಂತಿದೆಯೋ ಯಾವುದರ ಬಗ್ಗೆಯೂ ಸರಿಯಾದ ಮಾಹಿತಿ ಯಾರೂ ನೀಡಲು ಮುಂದೇ ಬರ್ತಿಲ್ಲ. ಪ್ರತಿನಿತ್ಯ ಅಡುಗೆ ಮಾಡಲು, ದಿನ ನಿತ್ಯದ ಕಾರ್ಯಗಳಿಗೆ ನೀರು ಇಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದ್ದು ಕಳೆದ 4 ದಿನಗಳಿಂದ ನೀರಿಗಾಗಿ ಈ ಭಾಗದಲ್ಲಿ ಹಾಹಾಕಾರ ಉಂಟಾಗಿದೆ.
ನಮ್ಮ ಸಮಸ್ಯೆ ಯಾರಿಗೇ ಹೇಳೋದು ಎಂದೂ ಜನರು ಪರಿತಪಿಸುತ್ತಿದ್ದಾರೆ. ಒಟ್ಟಾರೆಯಾಗಿ ರಾಮನಹಳ್ಳಿ 34ನೇ ವಾರ್ಡ್ ನ ಜನರು ನೀರು ನೋಡಿ 4 ದಿನಗಳೇ ಕಳೆದಿವೆ. ನೀರು ಬಾರದೇ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು ಆದ್ರೆ ನಿನ್ನೆ ಅದು ಕೂಡ ಅಪಘಾತಕ್ಕೆ ತುತ್ತಾಗಿ ಅದು ಇಲ್ಲದಂತಾಗಿದೆ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಕೂಡಲೇ ಇಲ್ಲಿನ ಸಮಸ್ಯೆ ಬಗೆಹರಿಸಬೇಕು ಎಂದೂ ವಾರ್ಡನ ಜನರು ಮನವಿ ಮಾಡುತ್ತಿದ್ದಾರೆ.