ಚಾಮರಾಜನಗರ: ತೀವ್ರವಾಗಿ ಬರದಲ್ಲಿ ಬಸವಳಿಯುತ್ತಿರುವ ಗಡಿ ಚಾಮರಾಜನಗರ ಜಿಲ್ಲೆಯಲ್ಲಿನ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವಂತೆ ಕನ್ನಡ ಚಳವಳಿ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಲು ಕೆರೆಗಳನ್ನು ವೀಕ್ಷಿಸಿದರು.
ಚಾಮರಾಜನಗರ ತಾಲ್ಲೂಕಿನ ಮರಗದ ಕೆರೆ ಬಂಡಿಗೆರೆಗಳಿಗೆ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಭೇಟಿ ನೀಡಿ, ಕರ್ನಾಟಕ ತಮಿಳುನಾಡಿನ ನಡುವೆ ಸಂಪರ್ಕ ಇರುವ ಚಾಮರಾಜನಗರ ತಾಲ್ಲೂಕಿನಲ್ಲಿ ಬರಗಾಲದಿಂದಾಗಿ ಕೆರೆಗಳು ಸಂಪೂರ್ಣವಾಗಿ ಬತ್ತಿ ಹೋಗಿದೆ. ರೈತರ ಜೀವನ ತೀವ್ರ ಸಂಕಷ್ಟಕ್ಕೀಡಾಗಿದೆ ಎಂದು ಹೇಳಿದರು.
ರೈತರ ಜೊತೆ ಜಾನುವಾರುಗಳು ಸಹ ಕುಡಿಯುವ ನೀರಿಲ್ಲದೆ ಬಡಕಲಾಗುತ್ತಿದೆ, ಬರಗಾಲದಿಂದಾಗಿ ಪ್ರಾಣಿಗಳು ಸಹ ಬದುಕಲು ಹರಸಾಹಸ ಪಡುತ್ತಿದೆ ರಾಜ್ಯ ಸರ್ಕಾರವು ಮೇವು ಘಟಕ ತೆರೆದರೆ ಸಾಲದು, ಜಾನುವಾರುಗಳ ಸಂರಕ್ಷಣೆಗೆ ಮುಂದಾಗಬೇಕಾಗಿದೆ ಸರ್ಕಾರವು ಕೂಡಲೇ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಇರುವ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ಕಾರ್ಯಕ್ಕೆ ಮುಂದಾಗಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಹೇಳಿದರು.
ವಾಟಾಳ್ ನಾಗರಾಜ್ ಸಂಗಡ, ಪಕ್ಷದ ಕಾರ್ಯಕರ್ತರು ಹಾಗೂ ಬಂಡಿಗೆರೆ , ಮಾಲೆಗೆರೆ ಪಾತ್ರದ ರೈತರುಗಳು ಹಾಜರಿದ್ದು, ತಮ್ಮ ಕುಂದು ಕೊರತೆಗಳನ್ನು ಹೇಳಿಕೊಂಡರು.