News Kannada
Friday, December 09 2022

ಕರ್ನಾಟಕ

ಹುಳುವಾದ ಅಕ್ಕಿಯಲ್ಲೇ ಮಕ್ಕಳಿಗೆ ಊಟೋಪಚಾರ!

Photo Credit :

ಹುಳುವಾದ ಅಕ್ಕಿಯಲ್ಲೇ ಮಕ್ಕಳಿಗೆ ಊಟೋಪಚಾರ!

ಮಡಿಕೇರಿ: ಸರ್ಕಾರ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡುವ ಅಕ್ಷರ ದಾಸೋಹ ಯೋಜನೆ ರಾಜ್ಯದಾದ್ಯಂತ ಜಾರಿಗೆ ತಂದಿದೆ. ಆದರೆ ಈ ಯೋಜನೆ ಕೆಲವೆಡೆ ಕಾಟಚಾರಕ್ಕೆ ಎಂಬಂತೆ ನಡೆಯುತ್ತಿದ್ದು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹುಳುವಾದ ಅಕ್ಕಿಯ ಅನ್ನವನ್ನೇ ವಿದ್ಯಾರ್ಥಿಗಳು ತಿನ್ನಬೇಕಾದ ಪರಿಸ್ಥಿತಿ ಬಂದೊದಗಿದೆ.

ಕಳೆದ ಕೆಲವು ದಿನಗಳಿಂದ ಕೊಡಗಿನ ಚೆಟ್ಟಳ್ಳಿಯಲ್ಲಿನ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹುಳುಮಿಶ್ರಿತ ಅಕ್ಕಿಯನ್ನೇ ಅನ್ನ ಮಾಡಿ ಬಡಿಸಲಾಗುತ್ತಿತ್ತು. ಮಕ್ಕಳು ಕೂಡ ಅನಿವಾರ್ಯವಾಗಿ ಅದನ್ನೆ ತಿನ್ನುವಂತಾಗಿತ್ತು.ಈ ಬಗ್ಗೆ ಮಕ್ಕಳು ತಮ್ಮ ಪೋಷಕರಿಗೆ ತಿಳಿಸಿದ್ದರಿಂದ ಅದು ಎಲ್ಲೆಡೆ ಸುದ್ದಿಯಾಗಿ ಜನಪ್ರತಿನಿಧಿಗಳ ಕಿವಿಗೆ ಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆಯೇ ವಾಲ್ನೂರು ತ್ಯಾಗತ್ತೂರು ಕ್ಷೇತ್ರದ ಜಿ.ಪಂ.ಸದಸ್ಯೆ ಎಂ.ಬಿ.ಸುನಿತ ಮಂಜುನಾಥ್ ಹಾಗೂ ತಾ ಪಂ ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ ಅವರು ಶಾಲೆಗೆ ದಿಢೀರ್ ಭೆೇಟಿ ನೀಡಿ ಶಾಲೆಯ ಅಡುಗೆಕೋಣೆ ಹಾಗೂ ಅಕ್ಕಿ, ತರಕಾರಿ, ಬೇಳೆಯನ್ನೆಲ್ಲ ಪರಿಶೀಲಿಸಿದ್ದಾರೆ. ಆಗ ಅಕ್ಕಿಯಲ್ಲಿ ಹುಳ ಇರುವುದು ಕಂಡು ಬಂದಿದ್ದು ಇದರಿಂದ ಕೋಪಗೊಂಡ ಅವರು ಶಾಲಾ ಮಖ್ಯೋಪಧ್ಯಾಯರು, ಶಿಕ್ಷಕರು ಹಾಗೂ ಅಡಿಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯುವುದಕ್ಕೆ ತಾಪಂ ಸದಸ್ಯ ಮಣಿಉತ್ತಪ್ಪ ಮುಂದಾದರಾದರೂ ಅಧಿಕಾರಿಗಳು ಸಂಪರ್ಕಕ್ಕೆ ಸಿಗಲಿಲ್ಲ. ಶಾಲೆಯಲ್ಲಿ ಅಕ್ಷರದಾಸೋಹದಲ್ಲಿನ ಅವ್ಯವಸ್ಥೆಯ ಬಗ್ಗೆ ಶಾಲಾ ಆಡಳಿತ ಮಂಡಳಿಯು ಎಚ್ಚರ ವಹಿಸದೆ, ನಿರ್ಲಕ್ಷ್ಯ ವಹಿಸಿರುವುದೇ ಅಕ್ಕಿಯಲ್ಲಿ ಹುಳಬರಲು ಕಾರಣವಾಗಿದೆ ಎಂದು ಹೇಳಿದ್ದಾರೆ.

ಜಿಪಂ ಸದಸ್ಯೆ ಎಂ.ಬಿ.ಸುನಿತಮಂಜುನಾಥ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭ ಅಡುಗೆಕೋಣೆ ಹಾಗೂ ಬಸಿದ ಅನ್ನ ಶುಚಿಯಾಗಿ ಕಂಡು ಬಂದಿತು. ಅಕ್ಕಿಯ ಗೋದಾಮನ್ನು ಪರಿಶೀಲಿಸಲಾಗಿ ಅಕ್ಕಿಯ ಚೀಲಗಳಲ್ಲಿ ಹುಳ ಮುತ್ತಿಕೊಂಡಿದ್ದಲ್ಲದೆ, ಹುಳಗಳು ತಿಂದು ಅಕ್ಕಿಪುಡಿಯಾಗಿರುವುದು ಕಂಡು ಬಂದಿತು.   ಶಾಲಾ ಮೂಲಗಳ ಪ್ರಕಾರ ಕಳೆದ ತಿಂಗಳಲ್ಲಿ ಬಂದ ಅಕ್ಕಿಯ ಚೀಲದಲ್ಲಿ ಹುಳಗಳಿದ್ದು ಅದನೆಲ್ಲ ತೊಳೆದು ಒಣಗಿಸಿ ಅನ್ನ ಮಾಡಿ ಮಕ್ಕಳಿಗೆ ಬಡಿಸಲಾಗುತ್ತಿದೆಯಂತೆ. ಇದೀಗ ಜಿ.ಪ.ಸದಸ್ಯರು  ಡಿಡಿಪಿಐ ಅವರನ್ನು ಸಂಪರ್ಕಿಸಿದಾಗ ಅಕ್ಕಿಯನ್ನು ಹಿಂಪಡೆದು ಗುಣಮಟ್ಟದ ಅಕ್ಕಿಯನ್ನು ವಿತರಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

See also  ದಿನಗೂಲಿ ಕೆಲಸಕ್ಕೆ ಹೊರಟಿದ್ದ ಮಹಿಳೆಯನ್ನು ಗ್ಯಾಂಗ್​ ರೇಪ್​ ಮಾಡಿ ಕೊಂದ ಪಾಪಿಗಳು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು