ಚಿಕ್ಕಮಗಳೂರು: ಸುಮಾರು 7 ಲಕ್ಷ ಬೆಲೆ ಬಾಳುವಂತಹ ದಿನಕ್ಕೆ ನೂರಾರು ಲೀಟರ್ ಹಾಲನ್ನು ನೀಡುತ್ತಿದ್ದಂತಹದ 6 ಹಸುಗಳು ಏಕಾಏಕೀ ಮೇವಿನಲ್ಲಿದ್ದಂತಹ ವಿಷಹಾರ ಸೇವಿಸಿದ ಹಿನ್ನಲೆಯ ಹತ್ತು ಹತ್ತು ನಿಮಿಷಕ್ಕೆ ಸಾಲಾಗಿ ಹಸುಗಳು ಸಾವನ್ನಪ್ಪಿರುವ ಕರುಣಾ ಜನಕ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಸಾಲಾಗಿ ಸತ್ತು ಬಿದ್ದಿರುವ ಹಸುಗಳು, ಏಳು ಲಕ್ಷಕ್ಕೂ ಅಧಿಕ ಮೌಲ್ಯದ 6 ಹಸುಗಳು, ನಿನ್ನ ತಡ ರಾತ್ರಿ ಹಸುಗಳಿಗೆ ಮಾಲೀಕರು ಮೇವು ಹಾಕಿದ ನಂತರ ಅದನ್ನು ಸೇವಿಸಿದ 6 ಹಸುಗಳು ಏಕಾ ಏಕೀ ತಲಾ ಹತ್ತು ನಿಮಿಷಕ್ಕೆ ಒಂದರಂತೆ ಸಾವನ್ನಪ್ಪಿದ್ದು ವಿಷಹಾರ ಸೇವನೆಯಿಂದ ಈ ಘಟನೆ ಜರುಗಿದೆ ಎಂದು ಹೇಳಲಾಗುತ್ತಿದೆ. ತಾಲೂಕಿನ ಗಿಡ್ಡೇನಹಳ್ಳಿ ಗ್ರಾಮದಲ್ಲಿ ರೈತ ರೇಣುಕಾ ಅವರಿಗೆ ಸೇರಿದ ಈ ಹಸುಗಳು ನಿನ್ನೆ ರಾತ್ರಿಯಿಂದ ಸಾವನ್ನಪ್ಪುತ್ತಿದ್ದು ಅವರು ಸಾಕಿದ್ದಂತಹ 6 ಹಸುಗಳನ್ನು ಹಸು ನೀಗಿವೆ.
ಪ್ರತಿನಿತ್ಯ ಬಿಟ್ ರೋಟ್ ಮತ್ತು ಅದರ ಸೋಪ್ಪು ಮೇವಿಗಾಗಿ ಬಳಸಲಾಗುತ್ತಿದ್ದು ಇದಕ್ಕೆ ವಿಷ ಸಿಂಪಡನೆ ಆಗಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಲಾಗುತ್ತಿದ್ದು, ಸ್ಥಳಕ್ಕೆ ಜಿಲ್ಲಾ ಪಶು ವೈದ್ಯಾಧೀಕಾರಿಗಳು ಆಗಮಿಸಿ ತಪಾಸಣೆ ನಡೆಸಿ ಶಿವಮೊಗ್ಗದ ವಿಶೇಷ ವೈದ್ಯರನ್ನು ತಪಾಸಣೆಗಾಗಿ ಕರೆಸಲಾಯಿತು. ಹತ್ತಾರು ವರ್ಷಗಳಿಂದ ಸಾಕಿದ್ದಂತಹ ಈ ಹಸುಗಳು ಸುಮಾರು 7 ಲಕ್ಷಕ್ಕೂ ಅಧಿಕ ಮೌಲ್ಯದದ್ದಾಗಿದ್ದು ಪ್ರತಿನಿತ್ಯ ಇವುಗಳಿಂದ ನೂರಕ್ಕೂ ಅಧಿಕ ಲೀಟರ್ ಹಾಲನ್ನು ಕರೆಯಲಾಗುತ್ತಿದ್ದು, ಈ ಹಸುಗಳೇ ರೈತರ ಮನೆಯ ಆಧಾರ ಸ್ಥಂಭವಾಗಿದ್ದು, ಈ ಘಟನೆಯಿಂದ ರೈತನ ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ. ಇಷ್ಟು ದಿನ ಮಕ್ಕಳಂತೆ ಸಾಕಿದ್ದಂತಹ ಹಸುಗಳು ಇನ್ನು ಇಲ್ಲವಲ್ಲ ಎಂದೂ ಕಣ್ಣೀರು ಇಡುತ್ತಿದ್ದಾರೆ.
ಇಡೀ ಗಿಡ್ಡೇನಹಳ್ಳಿ ಗ್ರಾಮದ ಜನರೆಲ್ಲಾ ಸಾವನ್ನಪ್ಪಿರುವ ಹಸುಗಳ ದರ್ಶನ ಮಾಡುತ್ತಿದ್ದು ಮೂಕ ಪ್ರಾಣಿಗಳ ಸಾವನ್ನು ಕಂಡು ಮರಗುತ್ತಿದ್ದು ಮೂಕ ಸ್ತಂಬ್ದರಾಗಿ ನಿಂತಲ್ಲೇ ನಿಲ್ಲುವುದು ಸಾಮಾನ್ಯ ದೃಶ್ಯವಾಗಿ ಕಂಡು ಬರುತ್ತಿದೆ. ಒಟ್ಟಾರೆಯಾಗಿ 6 ಮೂಕ ಪ್ರಾಣಿಗಳು ವಿಷಹಾರ ಸೇವನೆಯಿಂದ ಏಕಾಏಕೀ ಸಾವನ್ನಪ್ಪಿರುವ ನಿಜಕ್ಕೂ ದುರಂತವಾಗಿದ್ದು ಇಷ್ಟು ದಿನ ರೈತನ ಕುಟುಂಬಕ್ಕೆ ಆಧಾರ ಸ್ಥಂಬವಾಗಿದ್ದು ಹಸುಗಳು ಇನ್ನು ಇಲ್ಲದಂತಾಗಿದೆ. ಜಿಲ್ಲಾಡಳಿತ ರೈತನ ಕುಟುಂಬಕ್ಕೆ ಏನಾದರೂ ಸಹಾಯ ಮಾಡಿದರೇ ಅನುಕೂಲ ಆಗುತ್ತೆ ಎಂಬುದು ಸಾರ್ವಜನಿಕರ ಮತ್ತು ಗ್ರಾಮಸ್ಥರ ಆಶಯವಾಗಿದೆ