ಮೂಡಿಗೆರೆ: ಫೆ.20 ಮತ್ತು 21 ರಂದು ಬಣಕಲ್ ನಲ್ಲಿ ನಡೆಯಲಿರುವ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಅ.ರಾ.ರಾಧಕೃಷ್ಣರನ್ನು ಕಳಸದ ಅವರ ಸ್ವಗೃಹದಲ್ಲಿ ಗೌರವ ಪೂರ್ವಕವಾಗಿ ಆಹ್ವಾನಿಸಲಾಯಿತು.
ಕಸಾಪ ತಾಲ್ಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಮಾತನಾಡಿ, ಸಮ್ಮೇಳನದ ಸಂಪ್ರದಾಯದಂತೆ ಸಮ್ಮೇಳನದ ಪತ್ರಿಕೆಯನ್ನು ಮೊದಲು ಸಮ್ಮೇಳನಾಧ್ಯಕ್ಷರಿಗೆ ನೀಡುವುದು ಕರ್ತವ್ಯವಾಗಿದೆ. ಫೆ.20 ಮತ್ತು 21ರಂದು ಬಣಕಲ್ ಪ್ರೌಢಶಾಲಾ ಆವರಣದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಫೆ.20ರಂದು ಮದ್ಯಾಹ್ನ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ನಂತರ ಸಮ್ಮೇಳನದ ಉದ್ಘಾಟನೆ, ಜನಪದ ಗೋಷ್ಠಿ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
ಫೆ.21ಕ್ಕೆ ಬೆಳಿಗ್ಗೆ ಮಕ್ಕಳ ಗೋಷ್ಠಿ, ಬಹಿರಂಗ ಅಧಿವೇಶನ, ಕವಿಗೋಷ್ಠಿ, ನಾಡು-ನುಡಿ ಗೋಷ್ಠಿ, ಸಮರೋಪ ಸಮಾರಂಭ ನಡೆಯಲಿದೆ. ಸಮ್ಮೇಳನದ ಸಮ್ಮೇಳನಾದ್ಯಕ್ಷ ಆ.ರಾ.ರಾಧಾಕೃಷ್ಣ ಮಾತನಾಡಿ, ನಾನು ಕಸಾಪವನ್ನು ಕ್ರೀಯಾಶೀಲ ಕನ್ನಡ ಸಾಹಿತ್ಯ ಪರಿಷತ್ತನ್ನು ಕಾಣ ಬಯಸುತ್ತೇನೆ. ಸಾಹಿತ್ಯ ಸಮ್ಮೇಳನಗಳು ಪರಿಷತ್ತಿನ ಉತ್ಸಾಹ ಹಾಗೂ ಸಂಘಟನೆ ಮಾತ್ರ ಇರಬೇಕು. ಸಮ್ಮೇಳನಗಳಲ್ಲಿ ಸಾರ್ವಜನಿಕ ಹಣ ಪೋಲಾಗಬಾರದು. ಸಮ್ಮೇಳನಗಳಲ್ಲಿ ಮಿತವಾಗಿ ಖರ್ಚು ಮಾಡಿ ವರ್ಷವಿಡೀ ಅರ್ಥಪೂರ್ಣ ಕಾರ್ಯಕ್ರಮ ಹಾಕಿಕೊಳ್ಳಬೇಕು. ಸಮ್ಮೇಳನಗಳು ಸರಳವಾಗಿ ಜನರನ್ನು ಮುಟ್ಟುವಂತಿರಬೇಕು ಎಂಬುದಷ್ಟೇ ನನ್ನ ಅಪೇಕ್ಷೆ.
ಸಾಹಿತ್ಯ ಪರಿಷತ್ತು ಎಂದರೆ ಕೇವಲ ಸಮ್ಮೇಳನವಲ್ಲ. ಇದು ಅದರಲ್ಲಿ ಒಂದೆರಡು ದಿನ ಉತ್ಸವ ಅಷ್ಟೇ ಎಂದು ಹೇಳಿದರು. ಕಸಾಪ ಬಣಕಲ್ ಹೋಬಳಿ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಸಮ್ಮೇಳನದಲ್ಲಿ ಎಲ್ಲ ಸ್ಥಳೀಯ ಕಲಾವಿದರಿಗೆ ಆದ್ಯತೆಯನ್ನು ನೀಡಲಾಗಿದೆ. ಸಮ್ಮೇಳನದ ಮೆರವಣಿಗೆಯಲ್ಲಿ ಮಲೆನಾಡು ಜನಪದ ಸಂಸ್ಕೃತಿಯನ್ನು ಬಿಂಬಿಸಲಾಗುತ್ತಿದೆ. ಶಾಲಾ ಕಾಲೇಜುಗಳ ವಿವಿಧ ಸಬ್ದ ಚಿತ್ರಗಳು ಇರುತ್ತವೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಗೀಗಿ ಪದಗಳು, ಸುಗ್ಗಿ ಕುಣಿತ, ವಾದ್ಯ ಸಂಸ್ಕøತಿ, ವಾದ್ಯಗಳ ಜುಗಲ್ ಬಂದಿ ಕಾರ್ಯಕ್ರಮಗಳು ನಡೆಯಲಿವೆ. ಅಚ್ಚುಕಟ್ಟಾದ ಒಂದು ಉತ್ತಮವಾದ ಸಮ್ಮೇಳನವು ಬಣಕಲ್ ನಲ್ಲಿ ನಡೆಯಲಿದೆ ಎಂದು ಹೇಳಿದರು.