News Kannada
Thursday, December 01 2022

ಕರ್ನಾಟಕ

ಟಾಟಾ ಕಾಫಿ ತೋಟದಲ್ಲಿದ್ದ ಸರ್ಕಾರಿ ಜಾಗ ವಶ

Photo Credit :

ಟಾಟಾ ಕಾಫಿ ತೋಟದಲ್ಲಿದ್ದ ಸರ್ಕಾರಿ ಜಾಗ ವಶ

ಮಡಿಕೇರಿ: ಕಾಫಿ ಎಸ್ಟೇಟ್ ಮಾಲಿಕರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಜಿಲ್ಲೆಯಾದ್ಯಂತ ಕೇಳಿ ಬರುತ್ತಿರುವ ಬೆನ್ನಲ್ಲೇ ಸುಂಟಿಕೊಪ್ಪ ಹೋಬಳಿಯ ಕಂದಾಯ ವ್ಯಾಪ್ತಿಗೊಳಪಡುವ ಚೆಟ್ಟಳ್ಳಿ ಗ್ರಾಪಂ ವ್ಯಾಪ್ತಿಯ ಈರಳೆವಳಮುಡಿ ಗ್ರಾಮದ ಟಾಟಾ ಸಂಸ್ಥೆಗೆ ಸೇರಿದ ಕಾಫಿ ತೋಟದೊಳಗೆ ಸೇರಿಕೊಂಡಿದ್ದ ಸರ್ಕಾರಿ ಜಾಗವನ್ನು ತಹಸೀಲ್ದಾರ್ ಆದೇಶದಂತೆ ಸರ್ವೇ ನಡೆಸಿ ಕಂದಾಯ ಇಲಾಖೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ಟಾಟಾ ಸಂಸ್ಥೆಗೆ ಸೇರಿದ ಕಾಫಿ ತೋಟದಲ್ಲಿ ಪೈಸಾರಿ ಜಾಗವು ಒತ್ತುವರಿಯಾಗಿತ್ತು. ಇದು ಸರ್ವೇ ಮೂಲಕ ಗೊತ್ತಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರದ ಆದೇಶದಂತೆ ಸರ್ಕಾರಿ ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡ ಜಾಗವನ್ನು ತೆರವುಗೊಳಿಸುವ ಪಕ್ರಿಯೆಗೆ ತಹಸೀಲ್ದಾರ್ ಚಾಲನೆ ನೀಡಿದ್ದರಲ್ಲದೆ, ಈ ಸಂಬಂಧ ಕಂದಾಯ ಪರಿವೀಕ್ಷಕರು, ಗ್ರಾಮಲೆಕ್ಕಿಗರು ಹಾಗೂ ಸರ್ವೇ ಸಿಬ್ಬಂದಿಗಳಿಗೆ ಸರಕಾರಿ ಜಾಗ ಪತ್ತೆ ಹಚ್ಚಲು ಸೂಚನೆ ನೀಡಿದ್ದರು.

ಅದರಂತೆ ಚೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಈರಳೆವಳಮುಡಿ ಗ್ರಾಮದ ಟಾಟಾ ಕಾಫಿ ತೋಟದಲ್ಲಿ ಸರ್ವೇ ನಡೆಸಿ ಸರ್ವೇ ನಂ.28/1ರಲ್ಲಿ 4.68 ಎಕ್ರೆ ಜಾಗವನ್ನು ಗುರುತಿಸಿದ್ದು, ಇದಕ್ಕೆ ಕಂದಾಯ ಇಲಾಖೆ ವತಿಯಿಂದ ಸರಕಾರಿ ಆಸ್ತಿಯ ನಾಮಫಲಕವನ್ನು ಅಳವಡಿಸುವ ಮೂಲಕ ಸರಕಾರದ ವಶಕ್ಕೆ ಪಡೆದುಕೊಳ್ಳಲಾಯಿತು.
ಸರ್ವೇಕಾರ್ಯದಲ್ಲಿ ಹೆಚ್.ಎಸ್.ಮಂಜುನಾಥ್, ಜವಾನ ಪೂವಯ್ಯ, ಕಂದಾಯ ಪರಿವೀಕ್ಷಕರಾದ ನಾಗೇಶ್ರಾವ್, ಗ್ರಾಮಲೆಕ್ಕಿಗ ಉಮೇಶ್, ಸಹಾಯಕ ಗಿರೀಶ್, ಸುಶೀಲ ಗ್ರಾಮಸ್ಥರು ಇದ್ದರು.

See also  ಅತ್ತಿಗೆರೆಯಲ್ಲಿ 14ನೇ ಶತಮಾನದ ತಾಮ್ರ ಶಾಸನ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು